ETV Bharat / business

ಪ್ರಿಯೋನ್ ಸ್ವಾಧೀನಪಡಿಸಿಕೊಳ್ಳಲು ಅಮೆಜಾನ್​ಗೆ ಸಿಸಿಐ ಅನುಮೋದನೆ

author img

By

Published : Mar 10, 2022, 7:11 AM IST

ಪ್ರಿಯೋನ್ ವ್ಯಾಪಾರ ಸೇವೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಅಮೆಜಾನ್‌ಗೆ ಸಿಸಿಐ ಬುಧವಾರದಂದು ಅನುಮೋದನೆ ನೀಡಿದೆ.

y e-commerce firm Amazon
ಇ ಕಾಮರ್ಸ್ ಸಂಸ್ಥೆ ಅಮೆಜಾನ್‌

ನವದೆಹಲಿ: ಇ ಕಾಮರ್ಸ್ ಸಂಸ್ಥೆ ಅಮೆಜಾನ್‌ಗೆ ಪ್ರಿಯೋನ್ ವ್ಯಾಪಾರ ಸೇವೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಭಾರತೀಯ ಸ್ಪರ್ಧಾ ಆಯೋಗ/ಕಾಂಪಿಟೇಷನ್​ ಕಮಿಷನ್​ ಆಫ್​ ಇಂಡಿಯಾ(ಸಿಸಿಐ) ಬುಧವಾರದಂದು ಅನುಮೋದನೆ ನೀಡಿದೆ.

ಪ್ರಿಯೋನ್ ವ್ಯಾಪಾರ ಸೇವೆಯು ಕ್ಯಾಟಮಾರಾನ್ ಮತ್ತು ಇ ಕಾಮರ್ಸ್ ಸಂಸ್ಥೆ ಅಮೆಜಾನ್ ನಡುವಿನ ಜಂಟಿ ಉದ್ಯಮವಾಗಿದೆ. ಸಿಸಿಐ ಈ ಬಗ್ಗೆ ಟ್ವಿಟರ್​ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಅಮೆಜಾನ್​​ ಏಷ್ಯಾ ಫೆಸಿಫಿಕ್​ ರೆಸೋರ್ಸ್​ ಪ್ರೈವೆಟ್​ ಲಿಮಿಟೆಡ್​​ ಪ್ರಿಯೋನ್ ಪ್ರೈವೆಟ್​ ಲಿಮಿಟೆಡ್​​ ಅನ್ನು ಸ್ವಾಧೀನಪಡಿಸಿಕೊಳ್ಳಲು ಆಯೋಗವು ಅನುಮೋದಿಸುತ್ತದೆ ಎಂದು ಹೇಳಿದೆ.

ಇದನ್ನೂ ಓದಿ: ತೆರಿಗೆ ರದ್ದುಗೊಳಿಸಿ ಚಿನ್ನದ ಬೆಲೆ ಇಳಿಸಿದ ರಷ್ಯಾ: ಪುಟಿನ್ ನಿರ್ಧಾರದ ಉದ್ದೇಶವೇನು?

2014ರ ಮಧ್ಯದಲ್ಲಿ ಸ್ಥಾಪಿತವಾದ ಪ್ರಿಯೋನ್ ಬಿಸಿನೆಸ್ ಸೇವೆಗಳು ಭಾರತೀಯ ಸಣ್ಣ ಮತ್ತು ಮಧ್ಯಮ ವ್ಯವಹಾರಗಳಿಗೆ ಡಿಜಿಟಲ್ ಮತ್ತು ಇಂಟರ್ನೆಟ್ ಸೇವೆಗಳನ್ನು ಒದಗಿಸುತ್ತದೆ. ಆದರೆ ಕ್ಯಾಟಮಾರಾನ್ ಹೆಚ್ಚು ಬಂಡವಾಳ ಮತ್ತು ಖಾಸಗಿ ಇಕ್ವಿಟಿ ಹೂಡಿಕೆಯ ಸಂಸ್ಥೆಯಾಗಿದೆ. ಈ ಹಿಂದೆ, ಮೇ 2022ರಲ್ಲಿ ಕೊನೆಗೊಳ್ಳುವ ಅವಧಿಯನ್ನು ಮೀರಿ ಜಂಟಿ ಉದ್ಯಮವನ್ನು ಮುಂದುವರಿಸದಿರುವ ನಿರ್ಧಾರವನ್ನು ಎರಡು ಸಂಸ್ಥೆಗಳು ಪ್ರಕಟಿಸಿದ್ದವು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.