ನವದೆಹಲಿ: ವಿಲೀನಗೊಳ್ಳುವ ಬ್ಯಾಂಕ್ಗಳು ಸಲ್ಲಿಸಿದ ವಿಲೀನದ ಯೋಜನೆಯೊಂದಿಗೆ ಪಿಎಸ್‌ಯು ಬ್ಯಾಂಕ್ ಸಂಯೋಜನೆಗೂ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ.
ಬ್ಯಾಂಕ್ಗಳ ವಿಲೀನ ಪ್ರಕ್ರಿಯೆಯಿಂದ ಪ್ರಮುಖ ಬ್ಯಾಂಕಿಂಗ್ ಕಾರ್ಯಾಚರಣೆಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ವಿತ್ತ ಸಚಿವೆ ಭರವಸೆ ನೀಡಿದ್ದಾರೆ.
ಬ್ಯಾಂಕ್ ಆಫ್ ಬರೋಡಾ ವಿಲೀನದ ಮೂಲಕ ಕೇಂದ್ರ ಸರ್ಕಾರ ಮುಂದೆ ಸಾಗುತ್ತಿದೆ. ಅದು ಈಗಾಗಲೇ ಯಶಸ್ವಿಯಾಗಿದೆ. ಬ್ಯಾಂಕ್ಗಳ ವಿಲೀನವು 2020ರ ಏಪ್ರಿಲ್ 1ರಿಂದ ಜಾರಿಗೆ ಬರಲಿದೆ ಎಂದು ಅವರು ಹೇಳಿದರು.