ETV Bharat / business

'ಕೇಂದ್ರದ ಸಹಕಾರವಿದ್ರೆ ಸಣ್ಣ, ಮಧ್ಯಮ ಕೈಗಾರಿಕೆಗಳಿಗ ಉತ್ಪನ್ನಗಳ ರಫ್ತಿಗೆ ಅವಕಾಶ' - ವಿದೇಶಾಂಗ ವ್ಯವಹಾರಗಳ ತಜ್ಞ ಚಂದ್ರಶೇಖರ್

ಪೂರ್ವ ಏಷ್ಯಾ ಖಂಡದಲ್ಲಿ ಭಾರತದ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಉತ್ಪನ್ನಗಳಿಗೆ ಉತ್ತಮ ಬೇಡಿಕೆ ಇದೆ. ಜಪಾನ್, ಕೊರಿಯಾ ದೇಶಗಳಲ್ಲೂ ಬೇಡಿಕೆ ಹೆಚ್ಚಾಗುತ್ತಿದೆ. ಚೀನಾದಲ್ಲಿ ಸರ್ವಾಧಿಕಾರಿ ಧೋರಣೆ ಇರುವ ಕಾರಣ, ಅಮೆರಿಕ, ಚೀನಾವನ್ನು ಬಿಟ್ಟು ಭಾರತದಲ್ಲಿರುವ ದೊಡ್ಡ ಸಂಸ್ಥೆಗಳು ಹಾಗೂ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳೊಂದಿಗೆ ಸಂಬಂಧ ಬೆಳೆಸಿದೆ.

Chandrasekhar is a foreign affairs specialist
ವಿದೇಶಾಂಗ ವ್ಯವಹಾರಗಳ ತಜ್ಞ ಚಂದ್ರಶೇಖರ್
author img

By

Published : Jun 13, 2020, 8:29 PM IST

ಬೆಂಗಳೂರು : ಭಾರತ ದೇಶದ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಉತ್ಪನ್ನಕ್ಕೆ ವಿದೇಶಗಳಲ್ಲಿ ಬೇಡಿಕೆ ಇದೆ. ಉತ್ಪನ್ನಗಳನ್ನು ರಫ್ತು ಮಾಡಲು ಕೇಂದ್ರ ಸರ್ಕಾರದ ಸಹಕಾರವಿದ್ರೆ ಮಾತ್ರ ಸಾಧ್ಯ ಎಂದು ವಿದೇಶಾಂಗ ವ್ಯವಹಾರಗಳ ತಜ್ಞ ಚಂದ್ರಶೇಖರ್ ತಿಳಿಸಿದರು.

ಆಗ್ನೇಯ ಏಷ್ಯಾ ಖಂಡದ ವಿವಿಧ ದೇಶಗಳಲ್ಲಿ ನಡೆಯುತ್ತಿರುವ ಆರ್ಥಿಕ ಚಟುವಟಿಕೆಗಳನ್ನು ಆಧರಿಸಿ ಚಂದ್ರಶೇಖರ್ ಅವರು ಅಧ್ಯಯನ ನಡೆಸಿದ್ದಾರೆ. ತಮ್ಮ ಅಧ್ಯಯನದ ಸಾರಾಂಶವನ್ನು ಈಟಿವಿ ಭಾರತದೊಂದಿಗೆ ಹಂಚಿಕೊಂಡಿರುವ ಅವರು, ಚೀನಾ- ಮಲೇಷಿಯಾ ದೇಶಗಳಲ್ಲಿ ಹೇಗೆ ಸರ್ಕಾರಗಳ ಸಹಯೋಗದಲ್ಲಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳನ್ನು ಅಭಿವೃದ್ಧಿಪಡಿಸಲಾಯಿತು ಎಂಬುದರ ಕುರಿತು ವಿವರಿಸಿದರು.

ಪೂರ್ವ ಏಷ್ಯಾ ಖಂಡದಲ್ಲಿ ಭಾರತದ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಉತ್ಪನ್ನಗಳಿಗೆ ಉತ್ತಮ ಬೇಡಿಕೆ ಇದೆ. ಜಪಾನ್, ಕೊರಿಯಾ ದೇಶಗಳಲ್ಲೂ ಬೇಡಿಕೆ ಹೆಚ್ಚಾಗುತ್ತಿದೆ. ಚೀನಾದಲ್ಲಿ ಸರ್ವಾಧಿಕಾರಿ ಧೋರಣೆ ಇರುವ ಕಾರಣ, ಅಮೆರಿಕ, ಚೀನಾವನ್ನು ಬಿಟ್ಟು ಭಾರತದಲ್ಲಿರುವ ದೊಡ್ಡ ಸಂಸ್ಥೆಗಳು ಹಾಗೂ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳೊಂದಿಗೆ ಸಂಬಂಧ ಬೆಳೆಸಿದೆ ಎಂದು ವಿವರಿಸಿದರು.

ವಿದೇಶಾಂಗ ವ್ಯವಹಾರಗಳ ತಜ್ಞ ಚಂದ್ರಶೇಖರ್..

ಭಾರತದ ಕೃಷಿಯಾಧಾರಿತ ಕೈಗಾರಿಕೆಗಳಿಗೆ ಪೂರ್ವ ಏಷ್ಯಾದಲ್ಲಿ ಹೆಚ್ಚಿನ ಅವಕಾಶವಿದೆ. ಹಣ್ಣು-ತರಕಾರಿ ಹಾಗೂ ಇತರೆ ಕೃಷಿ ಉತ್ಪನ್ನಗಳನ್ನು ರಫ್ತು ಮಾಡಬಹುದು. ಚೀನಾ, ಜಪಾನ್ ಹಾಗೂ ಮಲೇಷಿಯಾ ಸರ್ಕಾರ ಹಾಗೂ ಆಯಾ ರಾಷ್ಟ್ರದ ರಾಯಭಾರಿ ಕಚೇರಿಗಳು ತನ್ನ ಕೈಗಾರಿಕೆಗಳನ್ನು ಇತರೆ ರಾಷ್ಟ್ರಗಳಲ್ಲಿ ಉತ್ತೇಜನ ನೀಡಿದರು. ಆಗ ಅಲ್ಲಿನ ಕೈಗಾರಿಕೆಗಳು ಅಭಿವೃದ್ಧಿಗೊಂಡಿತು. ಅದೇ ರೀತಿ ಭಾರತವು ಈಗ ತನ್ನ ಉತ್ಪನ್ನಗಳು ಹಾಗೂ ಕೈಗಾರಿಕೆಗಳನ್ನು ವಿವಿಧ ರಾಷ್ಟ್ರಗಳಲ್ಲಿ ಭಾರತದ ರಾಯಭಾರಿ ಕಚೇರಿ ಮೂಲಕ ಉತ್ತೇಜನ ನೀಡಬೇಕು ಎಂದು ಸರ್ಕಾರಕ್ಕೆ ಸಲಹೆ ನೀಡಿದರು.

ಇತ್ತೀಚಿಗೆ ಕೇಂದ್ರ ಸರ್ಕಾರ ಘೋಷಿಸಿದ ₹ 3 ಲಕ್ಷ ಕೋಟಿ ಸಹಾಯ ಧನ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ದೆಹಲಿಯಿಂದ ತಲುಪುವ ಹಾದಿಯಲ್ಲಿ ವಿವಿಧ ಅಡೆತಡೆಗಳಿವೆ. ಜೊತೆಗೆ ಖಾಸಗಿ ಬಂಡವಾಳ ಅಥವಾ ಸಾಲ ಕೊಡುವ ಹಲವಾರು ಸಂಸ್ಥೆಗಳಿರುವ ಕಾರಣ ಸವಾಲಾಗಿ ಪರಿಣಮಿಸಿದೆ. ಹಾಗೆಯೇ ಪ್ರಸ್ತುತ ಚಾಲ್ತಿಯಲ್ಲಿರುವ ಸಂಸ್ಥೆಗಳ ದಿವಾಳಿ ನೀತಿಯನ್ನು ಸುಧಾರಣೆಗೊಳಿಸಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಹೇಗೆ ಈಸ್ಟ್ ಇಂಡಿಯಾ ಕಂಪನಿ ಭಾರತಕ್ಕೆ ವ್ಯವಹಾರ ಉದ್ದೇಶಿಸಿ ಆಗಮಿಸಿತೋ ಅದೇ ರೀತಿ ಭಾರತವು ಈಗ ವಿವಿಧ ರಾಷ್ಟ್ರಗಳಿಗೆ ತೆರಳಿ ವ್ಯಾಪಾರ ವಹಿವಾಟು ನಡೆಸಲು ಪ್ರಾರಂಭಗೊಳಿಸಬೇಕು ಎಂದರು.

study report
ಅಧ್ಯಯನದ ವರದಿ

ಇವರ ಅಧ್ಯಯನದ ಪ್ರಕಾರ, ಜಪಾನ್​​ನಲ್ಲಿ ಆಟೋಮೊಬೈಲ್ ವಲಯ ಕಾರುಗಳನ್ನು ತಯಾರಿಸಲು ಪ್ರಾರಂಭಿಸಿದೆ. ಇದಕ್ಕೆ ಬೇಕಾದ ಬಿಡಿ ಉತ್ಪನ್ನಗಳನ್ನು ಭಾರತ ಅಲ್ಲಿಗೆ ಒದಗಿಸಬಹುದು. ಅದೇ ರೀತಿ ಅಮೆರಿಕ ಸಂಸ್ಥೆಗಳು ಚೀನಾ ದೇಶದಿಂದ ಹೊರಬರುವುದನ್ನು ಬಂಡವಾಳ ಮಾಡಿಕೊಂಡು ಆ ಸಂಸ್ಥೆಗಳ ಹೂಡಿಕೆಯನ್ನು ಭಾರತಕ್ಕೆ ಆಕರ್ಷಿಸಬಹುದು ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.