ನವದೆಹಲಿ: ಹೆಚ್ಚಿದ ವ್ಯವಹಾರ ಮತ್ತು ಸಂಸ್ಥೆಗಳು ವಾರ್ಷಿಕ ಆದಾಯ ರಿಟರ್ನ್ಸ್ ಮಾಡಿದ್ದರಿಂದ ಈ ವರ್ಷ ಸಲ್ಲಿಸಿದ ಆದಾಯ ತೆರಿಗೆ ರಿಟರ್ನ್ಸ್ ಶೇ 5ರಷ್ಟು ಏರಿಕೆಯಾಗಿ ಸುಮಾರು 6 ಕೋಟಿಗೆ ತಲುಪಿದೆ.
2020ರ ಮಾರ್ಚ್ 31ಕ್ಕೆ ಕೊನೆಗೊಂಡ ಹಣಕಾಸು ವರ್ಷದಲ್ಲಿ (2019-20) 5.95 ಕೋಟಿ ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಜನವರಿ 10ರೊಳಗೆ ಸಲ್ಲಿಸಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ. ವ್ಯಕ್ತಿಗಳಿಗೆ ಐಟಿಆರ್ ಸಲ್ಲಿಸುವ ಗಡುವು ಜನವರಿ 10ರಂದು ಕೊನೆಗೊಂಡರೆ, ಕಂಪನಿಗಳಿಗೆ ಫೆಬ್ರವರಿ 15ರವರೆಗೆ ಇರುತ್ತದೆ.
2020-21ರ ಮೌಲ್ಯಮಾಪನ ವರ್ಷಕ್ಕೆ 5.95 ಕೋಟಿ ಐಟಿಆರ್ಗಳನ್ನು 2021ರ ಜನವರಿ 10ರವರೆಗೆ ಸಲ್ಲಿಸಲಾಗಿದೆ. ಹಿಂದಿನ ಮೌಲ್ಯಮಾಪನ ವರ್ಷಕ್ಕೆ 2019ರ ಸೆಪ್ಟೆಂಬರ್ 10ರೊಳಗೆ ಸಲ್ಲಿಸಿದ 5.67 ಕೋಟಿ ಐಟಿಆರ್ಗಳು ಇದ್ದವು ಎಂದು ತೆರಿಗೆ ಇಲಾಖೆ ಟ್ವೀಟ್ನಲ್ಲಿ ತಿಳಿಸಿದೆ.
ಇದನ್ನೂ ಓದಿ: ಗೂಗಲ್ನಲ್ಲಿ ಚಾಟಿಂಗ್ ಮಾಹಿತಿ ಸೋರಿಕೆ.. ಹೊಸ ಪಾಲಿಸಿ ಬಗ್ಗೆ ವಾಟ್ಸ್ಆ್ಯಪ್ ಸ್ಪಷ್ಟೀಕರಣ ಹೀಗಿದೆ..
2019-20ರ ಒಟ್ಟು ಆದಾಯವು ಹಿಂದಿನ ವರ್ಷಕ್ಕಿಂತ 33.35 ಲಕ್ಷ ಹೆಚ್ಚಾಗಿದ್ದು, 5.61 ಕೋಟಿ ಐಟಿಆರ್ ಸಲ್ಲಿಕೆ ಆಗಿದ್ದವು.
ನಮ್ಮ ತೆರಿಗೆದಾರರು ಮತ್ತು ತೆರಿಗೆ ವೃತ್ತಿಪರರ ಪ್ರಯತ್ನವನ್ನು ನಾವು ಕೃತಜ್ಞತೆಯಿಂದ ಅಂಗೀಕರಿಸುತ್ತೇವೆ. 2020-21 ಹಣಕಾಸು ವರ್ಷಕ್ಕೆ ಸಲ್ಲಿಸಿದ ಐಟಿಆರ್‌ಗಳ ಡೇಟಾ ಹಂಚಿಕೊಳ್ಳಲಾಗಿದೆ ಎಂದು ಹೇಳಿದೆ.
ಪ್ರಸಕ್ತ ವರ್ಷದಲ್ಲಿ 2019-20ನೇ ಸಾಲಿನ ವೈಯಕ್ತಿಕ ತೆರಿಗೆ ರಿಟರ್ನ್ಸ್ ಸಲ್ಲಿಸುವುದು ನಿಧಾನವಾಗಿದ್ದರೆ, ವ್ಯವಹಾರ ಮತ್ತು ಟ್ರಸ್ಟ್‌ಗಳು ಸಲ್ಲಿಸುವ ಪ್ರಮಾಣ ಹೆಚ್ಚಾಗಿದೆ. ಈ ವರ್ಷದ ಜನವರಿ 10ರವರೆಗೆ 2.99 ಕೋಟಿ ಐಟಿಆರ್ -1 ದಾಖಲಾಗಿದ್ದು, ಇದು 2019ರ ಸೆಪ್ಟೆಂಬರ್ 10ರವರೆಗೆ ಸಲ್ಲಿಸಿದ 3.11 ಕೋಟಿಗಿಂತ ಕಡಿಮೆಯಾಗಿದೆ.
ಐಟಿಆರ್ -1 ಫಾರ್ಮ್ ಅನ್ನು ಒಂದು ವರ್ಷದಲ್ಲಿ 50 ಲಕ್ಷ ರೂ.ಗಿಂತ ಕಡಿಮೆ ಆದಾಯ ಹೊಂದಿರುವವರು ಸಲ್ಲಿಸುತ್ತಾರೆ. 2019ರ ಸೆಪ್ಟೆಂಬರ್ 10ರವರೆಗೆ 1.29 ಕೋಟಿಗೆ ಹೋಲಿಸಿದರೆ 1.49 ಕೋಟಿ ಐಟಿಆರ್ -4 ಅನ್ನು ಜನವರಿ 10ರವರೆಗೆ ಸಲ್ಲಿಸಲಾಗಿದೆ.
ಐಟಿಆರ್ -1 ಸಹಜ್ ಅನ್ನು ಒಟ್ಟು ಆದಾಯವು 50 ಲಕ್ಷ ಮೀರದವರಿಂದ ಸಲ್ಲಿಸಲಾಗುತ್ತದೆ. ಆದರೆ, ಐಟಿಆರ್ -4 ಸುಗಮ್ ಅನ್ನು ವ್ಯಕ್ತಿಗಳು, ಹಿಂದೂ ಅವಿಭಜಿತ ಕುಟುಂಬಗಳು (ಹೆಚ್‌ಯುಎಫ್‌ಗಳು) ಮತ್ತು ಒಟ್ಟು ಆದಾಯ ಹೊಂದಿರುವ ಸಂಸ್ಥೆಗಳು (ಸೀಮಿತ ಹೊಣೆಗಾರಿಕೆ ಪಾಲುದಾರಿಕೆ ಹೊರತುಪಡಿಸಿ) 50 ಲಕ್ಷ ರೂ. ಆದಾಯ ಹೊಂದಿದವರಿಗೆ ಅನ್ವಯಿಸುತ್ತದೆ.
ಜನವರಿ 10ರವರೆಗೆ 46.12 ಲಕ್ಷ ಐಟಿಆರ್ -2 (ವಸತಿ ಆಸ್ತಿ, ಬಂಡವಾಳ ಲಾಭ ಮತ್ತು ವಿದೇಶಿ ಆಸ್ತಿಗಳ ಆದಾಯ ಗಳಿಕೆ ಸಲ್ಲಿಕೆ ಆಗಿವೆ. 4.72 ಲಕ್ಷ ಐಟಿಆರ್-6 ಫೈಲಿಂಗ್ ಆಗಿವೆ. ಕಳೆದ ವರ್ಷ 2019ರ ಸೆಪ್ಟೆಂಬರ್ 10ರವರೆಗೆ ಐಟಿಆರ್ -6 ಸಲ್ಲಿಕೆ 49,398 ಆಗಿತ್ತು. ಐಟಿಆರ್ -5 ಫೈಲಿಂಗ್ಸ್ ಸಂಖ್ಯ 5.89 ಲಕ್ಷವಾಗಿತ್ತು.
ಐಟಿಆರ್ -7 (ಟ್ರಸ್ಟ್ ಅಡಿಯಲ್ಲಿರುವ ಆಸ್ತಿಯಿಂದ ಪಡೆದ ಆದಾಯ) ದಾಖಲಾತಿಗಳು 2021ರ ಜನವರಿ 10 ರವರೆಗೆ 1.46 ಲಕ್ಷಗಳಷ್ಟಿದ್ದು, ಕಳೆದ ವರ್ಷ 65,298ರಷ್ಟು ಇದ್ದವು.