ETV Bharat / briefs

ಭಾರತೀಯ ಯೋಧರ 'ಬಲಿದಾನ' ಲೋಗೋವಿರುವ ಗ್ಲೌಸ್​​​​​​​ ​ತೊಟ್ಟ ಧೋನಿ: ದೇಶದೆಲ್ಲೆಡೆ ಶ್ಲಾಘನೆ - ಇಂಗ್ಲೆಂಡ್​

ಕ್ರಿಕೆಟ್​ನಲ್ಲಿ ಹಂತ ಹಂತವಾಗಿ ಬೆಳೆದಿರುವ ಧೋನಿ ತಮ್ಮ ಅದ್ಭುತ ಪ್ರದರ್ಶನದ ಮೂಲಕ ಆರ್ಮಿಯಲ್ಲಿ ಲೆಫ್ಟಿನೆಂಟ್ ಕರ್ನಲ್ ಗೌರವಕ್ಕೆ ಪಾತ್ರರಾಗಿದ್ದಾರೆ.

dhoni
author img

By

Published : Jun 6, 2019, 12:46 PM IST

ಲಂಡನ್: ವಿಶ್ವಕಪ್​ನ ಚೊಚ್ಚಲ ಪಂದ್ಯದಲ್ಲಿ ಭಾರತ ತಂಡದ ಮಾಜಿ ನಾಯಕ ಎಂ.ಎಸ್.ಧೋನಿ ವಿಕೆಟ್​ ಕೀಪಿಂಗ್​ ಮಾಡುವಾಗ ಬಾರತೀಯ ಸೈನಿಕರ ಬಲಿದಾನ ಲೋಗವಿರುವ ಗ್ಲೌಸ್​ ಧರಿಸಿ ಸೇನೆಗೆ ಗೌರವ ತೋರಿದ್ದಾರೆ.

ಕ್ರಿಕೆಟ್​ನಲ್ಲಿ ಹಂತ ಹಂತವಾಗಿ ಬೆಳೆದಿರುವ ಧೋನಿ ತಮ್ಮ ಅದ್ಭುತ ಪ್ರದರ್ಶನದ ಮೂಲಕ ಆರ್ಮಿಯಲ್ಲಿ ಲೆಫ್ಟಿನೆಂಟ್ ಕರ್ನಲ್ ಗೌರವಕ್ಕೆ ಪಾತ್ರರಾಗಿದ್ದಾರೆ. ತಮ್ಮ ಕೊನೆಯ ವಿಶ್ವಕಪ್​ ಆಡುತ್ತಿರುವ ಧೋನಿ ನಿನ್ನೆಯ ಪಂದ್ಯದ ವೇಳೆ ಭಾರತೀಯರ ಬಲಿದಾನವನ್ನು ಸೂಚಿಸುವ ಲೋಗೋವಿರುವ ಗ್ಲೌಸ್​ ತೊಟ್ಟಿದ್ದು ಬೆಳಕಿಗೆ ಬಂದಿದ್ದು, ಧೋನಿಯ ಈ ನಡೆಗೆ ದೇಶದೆಲ್ಲಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಮೊದಲಿಗೆ ಧೋನಿ ಈ ಗ್ಲೌಸ್​ ತೊಟ್ಟಿರುವುದು ಯಾರಿಗೂ ತಿಳಿದಿರಲಿಲ್ಲ. ದ.ಆಫ್ರಿಕಾದ ಪೆಹ್ಲುಕ್ವಾಯೋರವರನ್ನು ಸ್ಟಂಪ್​ ಔಟ್​ ಮಾಡಲು ಯತ್ನಿಸಿದಾಗ ಧೋನಿ ಗ್ಲೌಸ್​ನಲ್ಲಿ ಬಲಿದಾನದ ಲೋಗೋ ಕಂಡುಬಂದಿದೆ. ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದ್ದು, ಧೋನಿಯ ಕಾರ್ಯಕ್ಕೆ ಪ್ರಶಂಸೆ ವ್ಯಕ್ತವಾಗುತ್ತಿದೆ.

  • For the ones who noticed 'Balidan' symbol on Dhoni Wicket Keeping Gloves today, Yes it's the same as in his mobile case. #IndvSA #CWC19 #Dhoni

    This insignia represents the Para SF (special forces), Special Operations unit of Indian Army attached to Parachute Regiment. pic.twitter.com/ZCiYfITDi9

    — Prabhu (@Cricprabhu) June 5, 2019 " class="align-text-top noRightClick twitterSection" data=" ">
2011ರಲ್ಲಿ ಭಾರತೀಯ ಸೇನೆ ಧೋನಿಗೆ ಲೆಫ್ಟಿನಂಟ್​​ ಕರ್ನಲ್​​​ ಗೌರವ ನೀಡಿತ್ತು. ಅದೇ ಸಂದರ್ಭದಲ್ಲಿ ತರಬೇತಿ ಶಿಬಿರಗಳಲ್ಲಿ ಪಾಲ್ಗೊಂಡಿದ್ದರು. ಇದೇ ವರ್ಷ ಆಸ್ಟ್ರೇಲಿಯಾ ವಿರುದ್ಧ ನಡೆದಿದ್ದ ಏಕದಿನ ಪಂದ್ಯದ ವೇಳೆ ಧೋನಿ ಹಾಗೂ ಇತರೆ ಆಟಗಾರರು ಪುಲ್ವಾಮಾ ದಾಳಿಯಲ್ಲಿ ಮೃತಪಟ್ಟ ಯೋದರ ಸ್ಮರಣಾರ್ಥವಾಗಿ ಆರ್ಮಿ ಕ್ಯಾಪ್​ ಧರಿಸಿ ಆಡಿದ್ದರು.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.