ETV Bharat / briefs

ಮನೆಯಿಂದ ಹೊರಹೋದ ಮಹಿಳೆ ನಾಪತ್ತೆ: ದೂರು ದಾಖಲು - ಭಟ್ಕಳ ಮಹಿಳೆ ನಾಪತ್ತೆ ನ್ಯೂಸ್

ಗಂಡನ ಮನೆಯಿಂದ ಹೇಳದೇ ಕೇಳದೆ ಹೊರಗೆ ಹೋದ ಭಟ್ಕಳ ಪಟ್ಟಣದ ಮೂಸಾ ನಗರದ ಮಹಿಳೆಯೊಬ್ಬರು ನಾಪತ್ತೆಯಾಗಿದ್ದು, ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Missing case
Missing case
author img

By

Published : Aug 26, 2020, 4:00 PM IST

ಭಟ್ಕಳ: ಮನೆಯಿಂದ ಹೊರಹೋದ ಮಹಿಳೆಯೊಬ್ಬರು ಅತ್ತೆ ಮನೆಗೂ ಬಾರದೇ, ಇತ್ತ ಸಂಬಂಧಿಕರ ಮನೆಗೂ ಹೋಗದೆ ನಾಪತ್ತೆಯಾಗಿರುವ ಘಟನೆ ಭಟ್ಕಳ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಪಟ್ಟಣದ ಮೂಸಾನಗರ ನಿವಾಸಿ ಫರ್ಹಾನ್ ಬಿನ್ನಾಸ್ (23) ನಾಪತ್ತೆಯಾದ ಮಹಿಳೆ. ಇವರು ಜು.29 ರಂದು ಭಟ್ಕಳ ಶಹರದ ಮೂಸಾ ನಗರದಲ್ಲಿರುವ ತನ್ನ ಗಂಡನ ಮನೆಯಿಂದ ಹೇಳದೆ ಹೊರಗೆ ಹೋದವರು ಈವರೆಗೂ ಮನೆಗೆ ವಾಪಸ್‌ ಬಂದಿಲ್ಲ ಎಂದು ಅವರ ತಾಯಿ ಶಬಾನಾ ಅನ್ವರಶೇಖ್​, ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.

ಇನ್ನು ಕಾಣೆಯಾದ ಮಹಿಳೆಯ ಕುರಿತು ಮಾಹಿತಿ ಸಿಕ್ಕಲ್ಲಿ ಭಟ್ಕಳ ಪೊಲೀಸ್ ಠಾಣೆ ಅಥವಾ ಅಕ್ಕಪಕ್ಕದ ಪೊಲೀಸ್ ಠಾಣೆಗೆ ತಿಳಿಸುವಂತೆ ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.