ನವದೆಹಲಿ: ಪ್ರಧಾನಿ ಮೋದಿ ಸಂಪುಟದಲ್ಲಿ ವಿದೇಶಾಂಗ ವ್ಯವಹಾರಗಳ ಖಾತೆಯನ್ನು ಸಮರ್ಥವಾಗಿ ನಿಭಾಯಿಸಿದ್ದ ಸುಷ್ಮಾ ಸ್ವರಾಜ್ ಹಾಲಿ ಸಂಪುಟದಿಂದ ಹೊರಗುಳಿದಿದ್ದಾರೆ.
ಅನಾರೋಗ್ಯ ಕಾರಣದಿಂದ ಸುಷ್ಮಾ ತಾವೇ ಸಚಿವ ಸ್ಥಾನದಿಂದ ಹಿಂದೆ ಸರಿದಿದ್ದು ಈ ನಿರ್ಧಾರಕ್ಕೆ ನೆಟಿಜನ್ಸ್ ಬೇಸರಗೊಂಡಿದ್ದಾರೆ. ವಿವಿಧ ರೀತಿಯ ಪೋಸ್ಟ್‌ಗಳ ಮೂಲಕ ಸುಷ್ಮಾ ಸ್ವರಾಜ್ಗೆ ಧನ್ಯವಾದ ಸಲ್ಲಿಸಿದ್ದಾರೆ.
2014ರಲ್ಲಿ ಮೋದಿ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ದಿನದಂದೇ ಸುಷ್ಮಾ ಸ್ವರಾಜ್ ಸಂಪುಟ ಸೇರಿದ್ದರು. ಕಳೆದ ಐದು ವರ್ಷದಲ್ಲಿ ಪಾಕಿಸ್ತಾನದ ನಿಲುವುಗಳನ್ನು ಖಂಡಿಸುತ್ತಾ ಭಾರತದ ಘನತೆಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಎತ್ತರಿಸುವ ಕೆಲಸ ಮಾಡಿದ್ದರು.
ಕಳೆದ ಐದು ವರ್ಷದಲ್ಲಿ ವಿದೇಶಾಂಗ ಖಾತೆ ನಿಭಾಯಿಸಲು ಅವಕಾಶ ನೀಡಿರುವುದಕ್ಕೆ ಸುಷ್ಮಾ, ಪ್ರಧಾನಿ ಮೋದಿಗೆ ಟ್ವೀಟ್ ಮೂಲಕ ಧನ್ಯವಾದ ಸಲ್ಲಿಸಿದ್ದಾರೆ. ಮತ್ತೆ ಅಧಿಕಾರಕ್ಕೇರಿರುವ ಎನ್ಡಿಎ ಸರ್ಕಾರಕ್ಕೆ ಶುಭವಾಗಲಿ ಎಂದು ಹಾರೈಸಿದ್ದಾರೆ.