ಹೈದರಾಬಾದ್: ಡೇವಿಡ್ ವಾರ್ನರ್ ಸಿಡಿಸಿದ ಅಬ್ಬರದ ಅರ್ಧಶತಕದ ನೆರವಿನಿಂದ ಸನ್ರೈಜರ್ಸ್ ಹೈದರಾಬಾದ್ ತಂಡ ಕಿಂಗ್ಸ್ ಇಲವೆನ್ ಪಂಜಾಬ್ ತಂಡಕ್ಕೆ 213 ರನ್ಗಳ ಬೃಹತ್ ಟಾರ್ಗೆಟ್ ನೀಡಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಸನ್ರೈಸರ್ಸ್ ಹೈದರಾಬಾದ್ ತಂಡಕ್ಕೆ ಸಹಾ(28) ಹಾಗೂ ಡೇವಿಡ್ ವಾರ್ನರ್ ಭರ್ಜರಿ ಆರಂಭ ನೀಡಿದರು. ಈ ಜೋಡಿ ಮೊದಲ ವಿಕೆಟ್ಗೆ ಕೇವಲ 6.2 ಓವರ್ಗಳಲ್ಲಿ 78 ರನ್ಗಳ ಜೊತೆಯಾಟ ನೀಡಿತು.
-
FIFTY!
— IndianPremierLeague (@IPL) April 29, 2019 " class="align-text-top noRightClick twitterSection" data="
What a way to get to a half-century. @davidwarner31 brings up his 44th #VIVOIPL 50 💪💪 pic.twitter.com/ceQh39L1E5
">FIFTY!
— IndianPremierLeague (@IPL) April 29, 2019
What a way to get to a half-century. @davidwarner31 brings up his 44th #VIVOIPL 50 💪💪 pic.twitter.com/ceQh39L1E5FIFTY!
— IndianPremierLeague (@IPL) April 29, 2019
What a way to get to a half-century. @davidwarner31 brings up his 44th #VIVOIPL 50 💪💪 pic.twitter.com/ceQh39L1E5
ಸಹಾ ಔಟಾದ ನಂತರ ಬಂದ ಮನೀಷ್ ಪಾಂಡೆ 25 ಎಸೆತಗಳಲ್ಲಿ 36 ರನ್ಗಳಿಸಿ ಔಟಾದರು. ಈ ವೇಳೆ ವಾರ್ನರ್ ಜೊತೆ 2ನೇ ವಿಕೆಟ್ಗೆ 82 ರನ್ಗಳ ಜೊತೆಯಾಟ ನಡೆಸಿದರು. ಪಾಂಡೆ ಔಟಾದ ಓವರ್ನ ಕೊನೆಯ ಎಸೆತದಲ್ಲೇ ವಾರ್ನರ್ ಕೂಡ ಔಟಾದರು. 56 ಎಸೆತಗಳನ್ನು ಎದುರಿಸಿದ ವಾರ್ನರ್ 7 ಬೌಂಡರಿ 2 ಸಿಕ್ಸರ್ ಸಿಡಿಸಿ 81 ರನ್ಗಳಿಸಿ ಔಟಾದರು.
ನಂತರ ಬಂದ ವಿಲಿಯಮ್ಸನ್ 14 ರನ್ಗಳಿಸಿ ಔಟಾದರು. ಮೊಹಮ್ಮದ್ ನಬಿ ಕೇವಲ ಎಸೆತಗಳಲ್ಲಿ 10 ಎಸೆತಗಳಲ್ಲಿ 20, ರಶೀದ್ ಖಾನ್ 1, ವಿಜಯ್ ಶಂಕರ್ 7, ಅಭಿಷೇಕ್ ಆರ್ಮಾ 5 ರನ್ ರನ್ಗಳಿಸಿ ತಂಡದ ಮೊತ್ತ 200 ರ ಗಡಿ ದಾಟಲು ನೆರವಾದರು.
ಪಂಜಾಬ್ ಪರ ನಾಯಕ ಅಶ್ವಿನ್ 2, ಶಮಿ 2, ಮುರುಗನ್ ಅಶ್ವಿನ್ ಹಾಗೂ ಅರ್ಶದೀಪ್ ಸಿಂಗ್ ತಲಾ ಒಂದು ವಿಕೆಟ್ ಪಡೆದರು.