ಮೂಡುಬಿದಿರೆ: ಲಾಕ್‌ಡೌನ್‌ನಿಂದಾಗಿ ಜವಳಿ ಉದ್ಯಮಕ್ಕೆ ಆಗಿರುವ ಆರ್ಥಿಕ ಹೊಡೆತದ ಬಗ್ಗೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡು ಬಿದಿರೆ ಜವಳಿ ವ್ಯಾಪಾರಿ ಸದಾಶಿವ ನೆಲ್ಲಿಮಾರು ಎಂಬವರು ಸಂಕಷ್ಟ ತೋಡಿಕೊಂಡ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಲಾಕ್‌ಡೌನ್ ನಿಯಮದಿಂದ ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಎಂಬಂತಾಗಿದ್ದು, ಜವಳಿ ವ್ಯಾಪಾರಿಗಳು, ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಿದ್ದಾರೆ. ಇತರ ಅಗತ್ಯ ವಸ್ತುಗಳಂತೆ ಜವಳಿ ಅಂಗಡಿ ತೆರೆಯಲು ಅವಕಾಶ ನೀಡಬೇಕಿತ್ತು. ಸೀಸನ್ ವ್ಯಾಪಾರ ನಂಬಿ ಲಕ್ಷಾಂತರ ರೂಪಾಯಿ ಬಟ್ಟೆ ದಾಸ್ತಾನು ಮಾಡಿದ್ದೆವು. ಫ್ಯಾಷನ್ ಹಳೆಯದಾದರೆ, ಗ್ರಾಹಕರು ಖರೀದಿಸುವುದಿಲ್ಲ. ಅರ್ಧ ದರದಲ್ಲಿ ಮಾರಾಟ ಮಾಡಿ ಕೈಸುಟ್ಟುಕೊಳ್ಳಬೇಕು ಎಂದು ಅವರು ವಿಡಿಯೋದಲ್ಲಿ ಹೇಳಿದ್ದಾರೆ.