ETV Bharat / briefs

ಕಾಡು ಹಂದಿ ಬೇಟೆ: ಇಬ್ಬರ ಬಂಧನ - etv bharata

ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ದಿಡ್ಡಹಳ್ಳಿ ಗ್ರಾಮದ ಸಮೀಪ ಕಾಡು ಹಂದಿಯನ್ನು ಬೇಟೆಯಾಡಿದ ಇಬ್ಬರು ಆರೋಪಿಗಳನ್ನು ಅರಣ್ಯ ಅಧಿಕಾರಿಗಳು ಬಂಧಿಸಿದ್ದಾರೆ.

ಕಾಡುಹಂದಿ ಬೇಟೆಯಾಡಿದ ಆರೋಪಿಗಳನ್ನು ಬಂಧಿಸಿದ ಅರಣ್ಯ ಇಲಾಖೆ ಸಿಬ್ಬಂದಿ
author img

By

Published : May 16, 2019, 4:14 PM IST

ಮೈಸೂರು: ಕಾಡು ಹಂದಿಯ ಬೇಟೆಯಾಡಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರನ್ನು ಸಂಚಾರಿ ದಳದ ಅರಣ್ಯ ಅಧಿಕಾರಿಗಳು ಬಂಧಿಸಿದ್ದಾರೆ. ಮೈಸೂರು ತಾಲೂಕು ಸತಗಳ್ಳಿ ನಿವಾಸಿಗಳಾದ ಆಟೋ ಚಾಲಕ ಮಂಜುನಾಥ್(24), ಮಂಜು(26) ಬಂಧಿತ ಆರೋಪಿಗಳು.

mysr
ಕಾಡುಹಂದಿ ಬೇಟೆಯಾಡಿದ ಆರೋಪಿಗಳನ್ನು ಬಂಧಿಸಿದ ಅರಣ್ಯ ಇಲಾಖೆ ಸಿಬ್ಬಂದಿ

ಎರಡು ಕಾಡುಹಂದಿಗಳನ್ನು ಬೇಟೆಯಾಡಿ ಹಿಂದಿರುಗುತ್ತಿರುವಾಗ ಅರಣ್ಯ ಇಲಾಖೆ ಸಿಬ್ಬಂದಿ ಆರೋಪಿಗಳನ್ನು ಹಾಗೂ ವಾಹನದಲ್ಲಿದ್ದ 3 ಪ್ಲಾಸ್ಟಿಕ್ ಬಲೆಗಳು ಮತ್ತು ಎರಡು ಕಾಡುಹಂದಿಗಳನ್ನು ವಶಕ್ಕೆ ಪಡೆದಿದ್ದಾರೆ. ಸೂಕ್ತ ಮಾಹಿತಿ ದೊರೆತ ನಂತರ ನಂಜನಗೂಡು ತಾಲೂಕಿನ ದಿಡ್ಡಹಳ್ಳಿ ಗ್ರಾಮದ ಸಮೀಪ ಸಂಚಾರಿ ದಳದ ಅರಣ್ಯ ಸಿಬ್ಬಂದಿ ದಾಳಿ ನಡೆಸಿದ್ದಾರೆ.

ವೈಲ್ಡ್​ ಲೈಫ್​ ಪ್ರೊಟೆಕ್ಷನ್​​ ಕಾಯ್ದೆ 1972ರ ಪ್ರಕಾರ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 200 ಸಿಆರ್​ಪಿಸಿ ಪ್ರಕಾರ ನಂಜನಗೂಡು ಘನ ನ್ಯಾಯಾಲಯದ ನ್ಯಾಯಾಧೀಶರ ಅನುಮತಿ ಪಡೆದು ಆರೋಪಿಗಳನ್ನು ವಲಯಾಧಿಕಾರಿಗೆ ವಹಿಸಲಾಯಿತು. ಈ ಕಾರ್ಯಾಚರಣೆಯಲ್ಲಿ ಮೈಸೂರು ಅರಣ್ಯ ಸಂಚಾರಿ ದಳದ ಪ್ರಭಾರ ಪಿಎಸ್ಐ ರಮೇಶ್ ಎಂ.ಬಿ. ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.

Intro:ಕಾಡು ಹಂದಿBody:ಕಾಡು ಹಂದಿ ಬೇಟಿ ಇಬ್ಬರ ಬಂಧನ
ಮೈಸೂರು: ಕಾಡು ಹಂದಿಯನ್ನು ಬೇಟಿಯಾಡಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರನ್ನು ಸಂಚಾರಿ ದಳದ ಅರಣ್ಯ ಅಧಿಕಾರಿಗಳು ಬಂಧಿಸಿದ್ದಾರೆ.
ಮೈಸೂರು ತಾಲ್ಲೂಕು ಸತಗಳ್ಳಿ ನಿವಾಸಿಗಳಾದ
ಆಟೋ ಚಾಲಕ ಮಂಜುನಾಥ್(24), ಮಂಜು(26) ಬಂಧಿತ ಆರೋಪಿಗಳು.  ಎರಡು ಕಾಡುಹಂದಿಗಳನ್ನು ಬೇಟೆ  ಮಾಡಿ  ಬರುತ್ತಿರುವಾಗ ಸಿಬ್ಬಂದಿಗಳು ಸುತ್ತುವರಿದು ಆರೋಪಿತರನ್ನು ಹಿಡಿದು ವಾಹನವನ್ನು ನೋಡಲಾಗಿ 3 ಪ್ಲಾಸ್ಟಿಕ್ ಬಲೆಗಳು ಮತ್ತು ಎರಡು ಕಾಡುಹಂದಿಗಳನ್ನು ಹೋಗುತ್ತಿದ್ದಾರೆ ಎಂಬ ಮಾಹಿತಿ ಪಡೆದು  ನಂಜನಗೂಡು ತಾಲ್ಲೂಕಿನ ದಿಡ್ಡಹಳ್ಳಿ ಗ್ರಾಮದ ಸಮೀಪ ಮಿಂಚಿನ ದಾಳಿ ನಡೆಸಿ ವಾಹನದ ಸಮೇತ ಮಾಲುಗಳನ್ನು ಸಂಚಾರಿ ದಳದ ಅರಣ್ಯ ಸಿಬ್ಬಂದಿ  ವಶಪಡಿಸಿಕೊಂಡಿದ್ದಾರೆ.
WLP act 1972 ಕಾಯ್ದೆ ಪ್ರಕಾರ  ಪ್ರಕರಣ ದಾಖಲಿಸಿಕೊಂಡು ನಂತರ 200CRPC ಪ್ರಕಾರ ಘನ ನ್ಯಾಯಾಲಯ ನಂಜನಗೂಡು ನ್ಯಾಯಾಧೀಶರ ಅನುಮತಿ ಪಡೆದು ನಂಜನಗೂಡು ವಲಯಾಧಿಕಾರಿಗೆ ಅವರಿಗೆ ವಹಿಸಲಾಯಿತು .
ಮೈಸೂರು ಅರಣ್ಯ ಸಂಚಾರಿ ದಳದ ಪ್ರಭಾರ ಪಿಎಸ್ಐ  ರಮೇಶ್ ಎಂ.ಬಿ. ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು.Conclusion:ಕಾಡು ಹಂದಿ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.