ಗದಗ : ಮಹಾರಾಷ್ಟ್ರದ ಗೃಹ ಸಚಿವ ಸತೇಜ್ (ಬಂಟಿ) ಪಾಟೀಲ ಸಹಕಾರದಿಂದ ಕೊಲ್ಲಾಪುರದ ಡಿವೈ ಪಾಟೀಲ ಟ್ರಸ್ಟ್ ಅವರಿಂದ ಎರವಲು ಪಡೆದ ಆಕ್ಸಿಜನ್ ವೆಂಟಿಲೇಟರ್‌ಗಳನ್ನ ಶಾಸಕ ಹೆಚ್ ಕೆ ಪಾಟೀಲರು ಇಂದು ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿದರು.
ನಗರದ ಜಿಮ್ಸ್ ಸೇರಿದಂತೆ ಜಿಲ್ಲೆಯಲ್ಲಿ ಆಕ್ಸಿಜನ್ ವೆಂಟಿಲೇಟರ್ ಹಾಹಾಕಾರ ಶುರುವಾಗಿದ್ದು, ನಿತ್ಯ 20 ರಿಂದ 40 ಜನರು ವೆಂಟಿಲೇಟರ್‌ಗಾಗಿ ವೇಟಿಂಗ್ ಲಿಸ್ಟ್‌ನಲ್ಲಿ ಇರುತ್ತಾರೆ.
ಹಾಗಾಗಿ, ಈ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಬಂಟಿ ಪಾಟೀಲರ ಬಳಿ ಸಹಾಯ ಕೇಳಲಾಗಿತ್ತು. ಮಹಾರಾಷ್ಟ್ರದಲ್ಲಿ ಸೋಂಕಿನ ಪ್ರಮಾಣ ಇಳಿಕೆಯಾಗಿರುವ ಕಾರಣ ವೆಂಟಿಲೇಟರ್ ಸಹಾಯ ಮಾಡಲು ಒಪ್ಪಿದ್ದಾರೆ.
ಒಟ್ಟು 25 ವೆಂಟಿಲೇಟರ್‌ಗಳನ್ನ ಡಿವೈ ಪಾಟೀಲ ಟ್ರಸ್ಟ್‌ನಿಂದ ಕೊಡಿಸೋದಾಗಿ ಬಂಟಿ ಪಾಟೀಲರು ಹೇಳಿದ್ದರು. ಮೊದಲ ಹಂತದಲ್ಲಿ 15 ವೆಂಟಿಲೇಟರ್ ತಲುಪಿವೆ. ಅದರಲ್ಲಿ 13 ಜಿಮ್ಸ್‌ನಲ್ಲಿನ ಕೋವಿಡ್ ಕೇರ್ ಸೆಂಟರ್‌ಗೆ ನೀಡಿದ್ದೇವೆ.
ಎರಡು ವೆಂಟಿಲೇಟರ್‌ಗಳನ್ನ ರೋಣ ಪಟ್ಟಣದ ರಾಜೀವ್ ಗಾಂಧಿ ಆಸ್ಪತ್ರೆಗೆ ಹಸ್ತಾಂತರಿಸಲಾಗಿದೆ ಎಂದು ಶಾಸಕ ಹೆಚ್ ಕೆ ಪಾಟೀಲರು ಮಾಹಿತಿ ನೀಡಿದ್ದಾರೆ. ಉಳಿದ 10 ವೆಂಟಿಲೇಟರ್ ಬಂದೊಡನೆ ಅವುಗಳನ್ನ ಜಿಮ್ಸ್‌ಗೆ ಕೊಡೋದಾಗಿ ಅವರು ತಿಳಿಸಿದ್ದಾರೆ.
ಹೆಚ್ಚುವರಿ 23 ವೆಂಟಿಲೇಟರ್ ಬಂದಿದ್ದು, ಜಿಲ್ಲೆಯ ಜನರು ನಿರಾಳವಾಗುವಂತೆ ಮಾಡಿದೆ. ಜಿಮ್ಸ್‌ನಲ್ಲಿ ಇನ್ನು 84 ವೆಂಟಿಲೇಟರ್ ಜೊತೆಗೆ ಹೆಚ್ಚುವರಿಯಾಗಿ ಇನ್ನು 23 ವೆಂಟಿಲೇಟರ್‌ಗಳು ಕಾರ್ಯ ನಿರ್ವಹಿಸಲಿವೆ.