ರಾಯಚೂರು : ಗುಡುಗು ಸಿಡಿಲಿಗೆ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಜಿಲ್ಲೆಯಲ್ಲಿ ಜರುಗಿದೆ. ಸಂಜೆ ಏಕಾಏಕಿ ಮೋಡ ಕವಿದ ವಾತಾವರಣದಿಂದ ಬಾರಿ ಗಾಳಿ, ಗುಡುಗು ಸಿಡಿಲಿಗೆ ಸಿರವಾರ ತಾಲೂಕಿನ ಕಲ್ಲೂರು ಗ್ರಾಮದಲ್ಲಿ ಇಬ್ಬರು ಮತ್ತು ರಾಯಚೂರು ತಾಲೂಕಿನ ಮಟಮಾರಿ ಗ್ರಾಮದಲ್ಲಿ ಕುರಿ ಕಾಯುವ ಯುವಕ ಸೇರಿ ಒಟ್ಟು ಮೂವರು ಮೃತಪಟ್ಟಿದ್ದಾರೆ.
ಜಮೀನಿನಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಸಿಡಿಲು ಬಡಿದು ಈ ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ. ಮೃತಪಟ್ಟರ ಹೆಸರು ತಿಳಿದು ಬಂದಿಲ್ಲ, ಘಟನೆಯು ರಾಯಚೂರು ಗ್ರಾಮೀಣ ಹಾಗೂ ಸಿರವಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದೆ.
ರಾಯಚೂರಿನಲ್ಲಿ ಸಿಡಿಲು ಬಡಿದು ಮೂವರು ಬಲಿ - ರಾಯಚೂರು ಮಳೆ ಸುದ್ದಿ
ಜಮೀನಿನಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಸಿಡಿಲು ಬಡಿದು ಈ ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ. ಮೃತಪಟ್ಟರ ಹೆಸರು ತಿಳಿದು ಬಂದಿಲ್ಲ..