ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದು ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ದೊಡ್ಡ ತಲೆನೋವಾಗಿ ಪರಣಿಮಿಸಿದ್ದು, ಸೊಂಕಿತರನ್ನು ಪತ್ತೆ ಹಚ್ಚಲು ಸಾಕಷ್ಟು ಶ್ರಮ ಪಡುವಂತಾಗಿದೆ.
ಜಿಲ್ಲೆಯಲ್ಲಿ ಇದುವರೆಗೂ 136 ಪ್ರಕರಣಗಳು ಪತ್ತೆಯಾಗಿದ್ದು, 38 ಜನ ಸಂಪೂರ್ಣ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇನ್ನೂ 95 ಜನ ಐಸೋಲೇಶನ್ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ಒಟ್ಟು 3 ಜನ ಸೋಂಕಿತರು ಮೃತ ಪಟ್ಟಿದ್ದಾರೆ. ಇನ್ನೂ ಜಿಲ್ಲೆಯಲ್ಲಿ ಇದುವರೆಗೂ 10424 ಜನರ ಗಂಟಲು ದ್ರವ ಪರೀಕ್ಷೆ ನಡೆಸಿದ್ದು ದಾಖಲೆ ನಿರ್ಮಿಸಿದೆ.
ಮಹಾರಾಷ್ಟದ ಸೋಂಕಿನ ನಂಟು
ಮೊದಲಿಗೆ ಜಿಲ್ಲೆಯಲ್ಲಿ 26 ಸೊಂಕಿತರು ಮಾತ್ರ ಪತ್ತೆಯಾಗಿದ್ದರು. ಆದರೆ ಮಹಾರಾಷ್ಟ್ರದಿಂದ ಬಂದ 316 ವಲಸೆ ಕಾರ್ಮಿಕರಲ್ಲಿ 105 ಜನರಲ್ಲಿ ಸೋಂಕು ಧೃಡಪಟ್ಟು ಒಂದೇ ದಿನ ಶತಕದಾಟಿದಂತಾಗಿತ್ತು.
ಇನ್ನೂ ನಗರಗಳಿಗೆ ಸಿಮೀತವಾಗಿದ್ದ ಕೊರೊನಾ, ಹಳ್ಳಿಗಳಿಗೂ ವಿಸ್ತರಿಸಿದ್ದು, ಜಿಲ್ಲಾಡಳಿತಕ್ಕೆ ದೊಡ್ಡ ತಲೆನೋವಾದಂತಿದೆ. ಚಿಕ್ಕಬಳ್ಳಾಪುರ ತಾಲೂಕಿನಲ್ಲಿಯೂ ಸೋಂಕು ಪತ್ತೆಯಾಗಿದ್ದು ಇದರಿಂದ ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು.
ಇನ್ನೂ ಚಿಂತಾಮಣಿ ನಗರದಲ್ಲಿ ವ್ಯಕ್ತಿ ಗುಣಮುಖರಾಗಿ ನಗರದ ಜನತೆ ನಿಟ್ಟುಸಿರುವ ಬಿಡುವ ಮುನ್ನವೇ ಅದೇ ಕುಟುಂಬದ ಮತ್ತೋರ್ವ ವ್ಯಕ್ತಿಗೆ ಸೊಂಕು ಹರಡಿದೆ.
ಇನ್ನೂ ಎಲ್ಲಾ ಪ್ರಥಮ ಹಾಗೂ ದ್ವಿತಿಯ ಸಂಪರ್ಕಿತರನ್ನ ಜಿಲ್ಲಾಡಳಿತ ಸೂಕ್ತ ಭದ್ರತೆಗಳಿಂದ ಹೋಂ ಕ್ವಾರಂಟೈನ್ ಮಾಡಲಾಗಿದ್ದು ಜಿಲ್ಲೆಯ ಜನತೆಗೆ ಕೊಂಚ ನೆಮ್ಮದಿ ಸಿಕ್ಕಿದಂತಾಗಿದೆ.
10 ಸಾವಿರ ಗಡಿ ದಾಟಿದ ಕೊರೊನಾ ಟೆಸ್ಟ್ : ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 'ಮಹಾ' ಕೊರೊನಾ ಕಾಟ - Corona virus
ವಲಸೆ ಕಾರ್ಮಿಕರು ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬಂದಾಗಿನಿಂದ್ಲೂ ಕೊರೊನಾ ಸೋಂಕಿತರ ಸಂಖ್ಯೆ ದ್ವಿಗುಣವಾಗುತ್ತಿದ್ದು. ಚಿಕ್ಕಬಳ್ಳಾಪುರ ಜಿಲ್ಲಾಡಳಿತಕ್ಕೆ ಸೋಂಕಿತರನ್ನು ಪತ್ತೆ ಹಚ್ಚಲು ಹರಸಾಹಸ ಪಡುವಂತಾಗಿದೆ.