ETV Bharat / briefs

ಮತ್ತೊಮ್ಮೆ ಬಿಜೆಪಿ:  ಯಕ್ಷಗಾನ ನಡೆಸಿ ಹರಕೆ ತೀರಿಸಿದ ಟೀಂ ಮೋದಿ ತಂಡ! - ಟೀಂ ಮೋದಿ ತಂಡ

ಮೋದಿ ಮತ್ತೊಮ್ಮೆ ಕೇಂದ್ರದ ಚುಕ್ಕಾಣಿ ಹಿಡಿಯಲಿ ಎಂದು ಮಂಗಳೂರಿನ ಟೀ ಮೋದಿ ತಂಡ ಹರಕೆಕೊಂಡಿತ್ತು. ಅದರಂತೆ ಗುರುವಾರ ಲೋಕಸಭಾ ಚುನಾವಣೆಯ ಫಲಿತಾಂಶ ಹೊರ ಬಿದ್ದಿದ್ದು ಈಗ ಹರಕೆ ತೀರಿಸಲು ಯಕ್ಷಗಾನವನ್ನು ಆಯೋಜಿಸಿದೆ.

ಯಕ್ಷಗಾನ ಪ್ರದರ್ಶಿಸಿ ಹರಕೆ ತೀರಿಸಿದ ಟೀಂ ಮೋದಿ ತಂಡ
author img

By

Published : May 25, 2019, 12:54 AM IST

ಮಂಗಳೂರು: ಮತ್ತೊಮ್ಮೆ ನರೇಂದ್ರ ಮೋದಿ ಅವರು ಕೇಂದ್ರದ ಗದ್ದುಗೆ ಏರಬೇಕು ಎಂದು ಟೀಂ ಮೋದಿ ಎಂಬ ತಂಡ ಹರಕೆ ಕಟ್ಟಿಕೊಂಡಿತ್ತು. ಅದರಂತೆ ಕೇಂದ್ರದಲ್ಲಿ ಭರ್ಜರಿ ಬಹುಮತದೊಂದಿಗೆ ಎನ್​ಡಿಎ ಸರ್ಕಾರ ಜಯಭೇರಿ ದಾಖಲಿಸಿದೆ.

ಯಕ್ಷಗಾನ ಪ್ರದರ್ಶಿಸಿ ಹರಕೆ ತೀರಿಸಿದ ಟೀಂ ಮೋದಿ ತಂಡ

ಟೀಂ ಮೋದಿ ತಂಡ ಕಟ್ಟಿಕೊಂಡ ಹರಕೆ ತೀರಿಸಲು ಶುಕ್ರವಾರದಂದು ನಗರದ ರಥ ಬೀದಿ ಶ್ರೀ ವೆಂಕಟರಮಣ ದೇವಾಲಯದ ಮುಂಭಾಗದ ಕಟೀಲು ಶ್ರೀದುರ್ಗಾ ಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯ ಶ್ರೀದೇವಿ ಮಹಾತ್ಮೆ ಎಂಬ ಯಕ್ಷಗಾನವನ್ನು ಆಯೋಜಿಸಿ ಗಮನ ಸೆಳೆದಿದೆ.

ಈ ಹಿಂದೆ ಡಿ‌.29ರಂದು ಟೀಂ ಮೋದಿ ತಂಡ ಮೋದಿ ಮತ್ತೆ ಪ್ರಧಾನಿಯಾಗಲೆಂದು ನಗರದ ಮಣ್ಣಗುಡ್ಡೆ ಗುರ್ಜಿಯ ಬಳಿ ಶ್ರೀ ದೇವಿ ಮಹಾತ್ಮೆ ಹರಕೆ ಯಕ್ಷಗಾನ ಸೇವೆ ಆಯೋಜಿಸಿತ್ತು. ಈಗ ಮತ್ತೊಮ್ಮೆ ಮೋದಿಯವರು ಭರ್ಜರಿ ಯಶಸ್ಸು ಕಂಡ ಸಂತೋಷಕ್ಕೆ ಯಕ್ಷಗಾನ ಹರಕೆ ಸೇವೆಯನ್ನು ಮುಂದುವರೆಸಿದೆ.

ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗುವರು ಎಂಬ ಅಚಲ ವಿಶ್ವಾಸದಿಂದ ಚುನಾವಣಾ ಫಲಿತಾಂಶಕ್ಕಿಂತ ಮೊದಲೇ ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯ ಯಕ್ಷಗಾನ ಬುಕ್ಕಿಂಗ್ ಮಾಡಿದ್ದೆವು. ಗುರುವಾರ ಚುನಾವಣಾ ಫಲಿತಾಂಶ ಘೋಷಣೆಯಾಗಿದ್ದು. ಮೋದಿ ಭರ್ಜರಿ ಯಶಸ್ಸು ಗಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ಯಕ್ಷಗಾನ ಆಯೋಜಿಸಿದ್ದೇವೆ ಎಂದು ಟೀಂ ಮೋದಿ ತಂಡದ ಸದಸ್ಯ ಗೋಪಿ ಭಟ್ ಅಭಿಮಾನದಿಂದ ಹಂಚಿಕೊಂಡರು.

ಮೋದಿಯವರು ಐದು ವರ್ಷ ನಡೆಸಿದ ಆಡಳಿತದಿಂದ ಪ್ರಭಾವಿತರಾದ ಜನರು ಅವರಿಗೆ ಮತ್ತೆ ಬೆಂಬಲಿಸಿದ್ದಾರೆ. ದೇಶ ಸುರಕ್ಷಿತವಾಗಬೇಕಾದರೆ ದಿಟ್ಟತನದಿಂದ ಎದುರಿಸುವ ನರೇಂದ್ರ ಮೋದಿಯವರೇ ಪ್ರಧಾನಿಯಾಗಬೇಕು ಎಂದು ಹರಕೆ ಹೊತ್ತಿದ್ದರು ಎಂದು ಟೀಂ ಮೋದಿ ಸದಸ್ಯ ಹನುಮಂತ ಕಾಮತ್ ವಿಶ್ವಾಸ ವ್ಯಕ್ತಪಡಿಸಿದರು.

Intro:ಮಂಗಳೂರು: ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗುವ ಹಿನ್ನೆಲೆಯಲ್ಲಿ ಟೀಂ ಮೋದಿ ತಂಡ ಇಂದು ನಗರದ ರಥಬೀದಿ ಶ್ರೀ ವೆಂಕಟರಮಣ ದೇವಾಲಯದ ಮುಂಭಾಗ ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯ ಶ್ರೀ ದೇವಿ ಮಹಾತ್ಮೆ ಎಂಬ ಯಕ್ಷಗಾನ ಆಯೋಜಿಸಿದೆ.

ದೇಶದಲ್ಲಿ ಮತ್ತೊಮ್ಮೆ ಬಿಜೆಪಿ ಸರಕಾರ ಅಧಿಕಾರದ ಚುಕ್ಕಾಣಿ ಹಿಡಿಯಬೇಕು, ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಬೇಕೆಂದು ಪ್ರಾರ್ಥಿಸಿ, ಟೀಂ ಮೋದಿ ತಂಡ ಫಲಿತಾಂಶಕ್ಕೆ ಮುನ್ನವೇ ಯಕ್ಷಗಾನಕ್ಕೆ ಬುಕಿಂಗ್ ಮಾಡಿತ್ತು. ನಿನ್ನೆ ತಾನೇ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ದೇಶಾದ್ಯಂತ ಬಿಜೆಪಿ ಭರ್ಜರಿ ಯಶಸ್ಸು ಕಂಡಿದೆ. ಮೋದಿಯವರು ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯುತ್ತಿದ್ದಾರೆ. ಆದ್ದರಿಂದ ಇಂದು ಟೀಂ ಮೋದಿ ತಂಡ ಯಕ್ಷಗಾನ ಸೇವೆ ಆಯೋಜಿಸಿದೆ.

Body:ಈ ಹಿಂದೆ ಡಿ‌.29ರಂದೂ ಟೀಂ ಮೋದಿ ತಂಡ, ಮೋದಿ ಮತ್ತೆ ಪ್ರಧಾನಿಯಾಗಲೆಂದು ನಗರದ ಮಣ್ಣಗುಡ್ಡೆ ಗುರ್ಜಿಯ ಬಳಿ ಶ್ರೀ ದೇವಿ ಮಹಾತ್ಮೆ ಹರಕೆ ಯಕ್ಷಗಾನ ಸೇವೆ ಆಯೋಜಿಸಿತ್ತು. ಈಗ ಮತ್ತೊಮ್ಮೆ ಮೋದಿಯವರು ಭರ್ಜರಿ ಯಶಸ್ಸು ಕಂಡ ಸಂತೋಷಕ್ಕೆ ಯಕ್ಷಗಾನ ಹರಕೆ ಸೇವೆಯನ್ನು ಆಯೋಜಿಸಿದೆ.

ಈ ಸಂದರ್ಭ ಟೀಂ ಮೋದಿ ತಂಡದ ಸದಸ್ಯ ಗೋಪಿ ಭಟ್ ಮಾತನಾಡಿ, ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗುವರು ಎಂಬ ಅಚಲ ವಿಶ್ವಾಸದಿಂದ ಚುನಾವಣಾ ಫಲಿತಾಂಶಕ್ಕಿಂತ ಮೊದಲೇ ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯ ಯಕ್ಷಗಾನ ಬುಕ್ಕಿಂಗ್ ಮಾಡಿದ್ದೆವು. ನಿನ್ನೆ ತಾನೇ ಚುನಾವಣಾ ಫಲಿತಾಂಶ ಘೋಷಣೆಯಾಗಿದ್ದು, ಮೋದಿಯವರು ಭರ್ಜರಿ ಯಶಸ್ಸು ಗಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಶ್ರೀ ದೇವಿ ಮಹಾತ್ಮೆ ಎಂಬ ಯಕ್ಷಗಾನ ಆಯೋಜಿಸಿದ್ದೇವೆ‌. ನಮ್ಮ ಹರಕೆ ಫಲಿಸಿದ ಹಿನ್ನೆಲೆಯಲ್ಲಿ ದೇವಿಗೆ ಕೃತಜ್ಞತಾ ಪೂರ್ವಕವಾಗಿ ಈ ಯಕ್ಷಗಾನ ವನ್ನು ಆಯೋಜಿಸಿದ್ದೇವೆ. ಶ್ರೀ ದೇವಿಯು ನರೇಂದ್ರ ಮೋದಿಯವರಿಗೆ ಮತ್ತಷ್ಟು ಶಕ್ತಿ ಸಾಮರ್ಥ್ಯ ನೀಡಲಿ, ಈ ಮೂಲಕ ಭಾರತ ವಿಶ್ವಗುರುವಾಗಲಿ ಎಂಬ ಪ್ರಾರ್ಥನೆ ಮಾಡುತ್ತಿದ್ದೇವೆ ಎಂದು ಹೇಳಿದರು.

Conclusion:ಟೀಂ ಮೋದಿ ಸದಸ್ಯ ಹನುಮಂತ ಕಾಮತ್ ಮಾತನಾಡಿ, ಮೋದಿಯವರು ಮಗದೊಮ್ಮೆ ದೇಶದ ಮಹಾ ಚುನಾವಣೆಯಲ್ಲಿ ಗೆದ್ದರೆ ದೇವಿ ಮಹಾತ್ಮೆ ಬಯಲಾಟ ಆಡಿಸುತ್ತೇವೆ ಎಂದು ಮೋದಿ ಅಭಿಮಾನಿಗಳು ಹರಕೆ ಹೇಳಿದ್ದರು. ನಿನ್ನೆ ನಡೆದ ಚುನಾವಣಾ ಫಲಿತಾಂಶದಲ್ಲಿ ಯಶಸ್ಸು ಕಂಡಿರುವ ಹಿನ್ನೆಲೆಯಲ್ಲಿ ಇಂದು ಯಕ್ಷಗಾನ ಆಯೋಜಿಸಲಾಗಿದೆ. ‌ಚುನಾವಣೆಗೂ ಮೊದಲಿಗೂ ಮೋದಿಯವರು ಗೆದ್ದು ಬರಬೇಕೆಂದು ಮಣ್ಣಗುಡ್ಡೆಯಲ್ಲಿ ಯಕ್ಷಗಾನ ಆಯೋಜಿಸಲಾಗಿತ್ತು. ಮೋದಿಯವರ ಮೇಲೆ ಜನರಿಗೆ ಯಾವ ರೀತಿಯ ವಿಶ್ವಾಸವಿದೆ ಎಂದರೆ, ಮೋದಿಯವರು ಐದು ವರ್ಷ ನಡೆಸಿದ ಆಡಳಿತದಿಂದ ಪ್ರಭಾವಿತರಾದ ಜನರು, ನಮ್ಮ ದೇಶ ಸುರಕ್ಷಿತವಾಗಬೇಕಾದರೆ ಅದಕ್ಕೆ ದಿಟ್ಟತನದಿಂದ ಎದುರಿಸುವ ನರೇಂದ್ರ ಮೋದಿಯವರೇ ಪ್ರಧಾನಿಯಾಗಬೇಕು ಎಂದು ಹರಕೆ ಹೊತ್ತಿದ್ದರು. ಅದು ಕೈಗೂಡಿರುವುದರಿಂ ಇಂದು ಈ ಬಯಲಾಟ ಆಯೋಜಿಸಲಾಗಿದೆ. ಇದು ಮೋದಿಯವರಿಗೆ ಅಭಿನಂದನೆ ಸಲ್ಲಿಸುವುದರೊಂದಿಗೆ ನಮ‌್ಮ ಹರಕೆಯನ್ನು ಕಟೀಲು ಮಾತೆ ಯಶಸ್ಸು ಗೊಳಿಸಿರುವುದಕ್ಕೆ ಅನಂತ ಪ್ರಣಾಮಗಳು ಎಂದು ಹೇಳಿದರು.

Byte ನಲ್ಲಿ ಮಾತನಾಡಿದವರ ಗುರುತು...

೧. ಬಿಳಿ ಅಂಗಿ‌ ಶಾಲು ಧರಿಸಿದವರು... ಹನುಮಂತ ಕಾಮತ್

೨. ಕೆಂಪು ಅಂಗಿ ಧರಿಸಿದವರು.... ಗೋಪಿ ಭಟ್

Reporter_Vishwanath Panjimogaru

ETV Bharat Logo

Copyright © 2025 Ushodaya Enterprises Pvt. Ltd., All Rights Reserved.