ETV Bharat / briefs

ಹೌದು.. ನಾನು ತಪ್ಪುಗಳನ್ನು ಮಾಡಿದ್ದೇನೆ.. ನಟ ಸುನೀಲ್​ ಶೆಟ್ಟಿ - ಬಾಲಿವುಡ್ ನಟ ಸುನೀಲ್ ಶೆಟ್ಟಿ

ಯಾವುದೇ ಚಿತ್ರವನ್ನು ಪಡೆಯುವುದು ಬಹಳ ಮುಖ್ಯ. ಅವುಗಳು ತಮಗಾಗಿ ಒಂದು ನಿರ್ದಿಷ್ಟ ಪಾತ್ರವನ್ನೂ ಹೊಂದಿರುತ್ತದೆ. ಆ ಕುರಿತಾಗಿ ನೋಡುವುದಾದದರೆ ಈಗಿನ ಪೀಳಿಗೆಯ ಆಯುಷ್ಮಾನ್ ಖುರಾನಾ ಹಾಗೂ ಟೈಗರ್ ಶ್ರಾಫ್ ಈ ಎರಡು ಹೆಸರುಗಳನ್ನು ಮಾತ್ರ ಪ್ರಶಂಸಿಸಬಹುದು..

Suniel Shetty
Suniel Shetty
author img

By

Published : Apr 25, 2021, 6:47 PM IST

ಹೈದರಾಬಾದ್ : ನಟ ಸುನೀಲ್ ಶೆಟ್ಟಿ ಬಾಲಿವುಡ್‌ನಲ್ಲಿ ಮೂರು ದಶಕಗಳಿಂದ ನೆಲೆಯೂರಿದಾರೆ. ಸದ್ಯ ಬಾಲಿವುಡ್‌ನ ಭಾಗವಾಗಿರುವ ಅವರು ತಮ್ಮ ಸಮಸ್ಯೆ ಟೈಪ್‌ಕಾಸ್ಟ್ ಅಲ್ಲ, ಆದರೂ ಸುರಕ್ಷಿತವಾಗಿ ಆಡಬೇಕಾಗಿದೆ ಎಂದು ಹೇಳಿದಾರೆ.

59 ವರ್ಷದ ತಾರೆ ಸುನೀಲ್, 1992ರಲ್ಲಿ ಬಲ್ವಾನ್ ಎಂಬ ಆ್ಯಕ್ಷನ್ ಸಿನಿಮಾದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಅಷ್ಟೇ ವೇಗವಾಗಿ ಆ್ಯಕ್ಷನ್ ಹೀರೊ ಆಗಿಯೂ ಸ್ಥಾನ ಪಡೆದರು.

ನಂತರದ ವರ್ಷಗಳಲ್ಲಿ, ಅವರು ಮೊಹ್ರಾ, ಬಾರ್ಡರ್, ಕಾಂಟೆ ಮತ್ತು ಸಪೂಟ್ ಚಿತ್ರಗಳ ಮೂಲಕ ತಮ್ಮ ಛಾಪು ಮೂಡಿಸಿದರು.

ಅಷ್ಟೇ ಅಲ್ಲ, ತಾವು ಯಾವುದೇ ಪಾತ್ರವನ್ನು ಮಾಡಲೂ ಸೈ ಎಂದ ಸುನೀಲ್​ ಆ ಬಳಿಕ ಕಾಮಿಡಿ ಹಿಟ್​ಗಳನ್ನು ನೀಡಿದರು. ಹೇರಾ ಫೆರಿ ಸರಣಿ, ಆವಾರ ಪಾಗಲ್ ದಿವಾನಾ ಮೂಲಕ ಕಾಮಿಡಿ ನಟನಾಗಿಯೂ ಹೊರಹೊಮ್ಮಿದರು.

ಆ ಬಳಿಕ ರೊಮ್ಯಾಂಟಿಕ್ ಸಿನಿಮಾ ಧಡ್​ಕನ್ ಸುನೀಲ್​ಗೆ ಬಿಗ್​ ಹಿಟ್​ ನೀಡಿತು. ಆಫ್‌ಬೀಟ್ ನಾಯಕನಾಗಿ ಹೂ ತು ತು, ಮತ್ತು ಮೇ ಹೂ ನಾದಲ್ಲಿ ಖಳನಾಯಕನ ಪಾತ್ರ ಮಾಡಿ ಸೈ ಎನಿಸಿದರು.

ಕಳೆದ ತಿಂಗಳು ಬಿಗ್​ ಎಫ್​ಎಂನಲ್ಲಿ ನಡೆದ 21 ದಿನಗಳ 'ವೆಲ್ನೆಸ್ ಇನ್' ಎಂಬ ಕಾರ್ಯಕ್ರಮವನ್ನು ಆಯೋಜಿಸಿದ್ದ ನಟ ಅಲ್ಲಿ ತಮ್ಮ ಮನದಾಳವನ್ನು ಬಿಚ್ಚಿಟ್ಟಿದ್ದಾರೆ.

ಯಾವುದೇ ಚಿತ್ರವನ್ನು ಪಡೆಯುವುದು ಬಹಳ ಮುಖ್ಯ. ಅವುಗಳು ತಮಗಾಗಿ ಒಂದು ನಿರ್ದಿಷ್ಟ ಪಾತ್ರವನ್ನೂ ಹೊಂದಿರುತ್ತದೆ. ಆ ಕುರಿತಾಗಿ ನೋಡುವುದಾದರೆ ಈಗಿನ ಪೀಳಿಗೆಯ ಆಯುಷ್ಮಾನ್ ಖುರಾನಾ ಹಾಗೂ ಟೈಗರ್ ಶ್ರಾಫ್ ಈ ಎರಡು ಹೆಸರುಗಳನ್ನು ಮಾತ್ರ ಪ್ರಶಂಸಿಸಬಹುದು ಎಂದು ಸುನೀಲ್ ತಿಳಿಸಿದರು.

ಹೊಸ ತಲೆಮಾರಿನ ನಟರು ವೈಯಕ್ತಿಕ ಶೈಲಿಯನ್ನು ರಚಿಸಬೇಕಾಗಿದೆ ಎಂದು ಸುನೀಲ್ ಅಭಿಪ್ರಾಯಪಟ್ಟಿದ್ದಾರೆ. ಯಾವುದೇ ಅಪಾಯವಿಲ್ಲ ಅಂದರೆ ನೀವು ನನ್ನ ಪ್ರಕಾರ ನಟರಲ್ಲ. ನಿಮ್ಮದೇ ಆದ ಶೈಲಿಯನ್ನು ಅಳವಡಿಸಿಕೊಳ್ಳಿ.

ಟೈಗರ್, ಆಯುಷ್ಮಾನ್, ಸಲ್ಮಾನ್ ಅವರನ್ನು ನೋಡಿ ಅವರೆಲ್ಲರೂ ಸ್ವಯಂ ನಿರ್ಮಿತರು. ನಾವೆಲ್ಲರೂ ಸ್ವಯಂ ನಿರ್ಮಿತರು. ಹೌದು, ನಾವು ತಪ್ಪುಗಳನ್ನು ಮಾಡಿದ್ದೇವೆ ಎಂದು ಅವರು ಹೇಳಿದರು.

ಸುನೀಲ್ ಶೆಟ್ಟಿಯೂ ಕೆಲವು ವರ್ಷಗಳಲ್ಲಿ ವಿಫಲರಾದರು. ಯಾಕೆಂದರೆ, ಅವರು ವಿಷಯವನ್ನು ನಂಬಿದ್ದರು. ಆದರೆ, ಮಾರ್ಕೆಟಿಂಗ್​ನಲ್ಲಿ ಅದು ವಿಫಲವಾಯಿತು ಎಂದರು.

ಬಾಲಿವುಡ್‌ನಲ್ಲಿನ ನನ್ನ ಪ್ರಯಾಣವು ತನ್ನ ಮಗ ಅಹಾನ್​ನ ಹಾದಿಯನ್ನು ಸುಗಮಗೊಳಿಸಲು ಸಹಾಯಕವಾತ್ತದೆ ಎಂದು ಸುನೀಲ್ ಭಾವಿಸುತ್ತಾರೆ.

ನಾವು ಯಾವತ್ತೂ ಗಲ್ಲಾಪೆಟ್ಟಿಗೆ ಹಿಂದೆ ಓಡುತ್ತೇವೆ. ಜನರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುವುದರ ಬಗ್ಗೆಯೇ ಚಿಂತಿತರಾಗಿರುತ್ತೇವೆ. ಇಂದು ಸುನೀಲ್ ಶೆಟ್ಟಿಗೆ 50 ಕೋಟಿ ರೂ.ಗಳ ಬಂಡವಾಳ ಹಾಕಿ ಚಿತ್ರ ತೆಗೆಯುವ ಅಪಾಯವನ್ನು ಯಾರೂ ತೆಗೆದುಕೊಳ್ಳುತ್ತಿಲ್ಲ.

ಆದ್ರೆ, ಅಕ್ಷಯ್ ಕುಮಾರ್​ಗೆ 500 ಕೋಟಿ ರೂ. ಹೂಡಿ ಚಿತ್ರ ತೆಗೆಯಲು ಮುಂದೆ ಬರುತ್ತಾರೆ. ಹೌದು, ನಾನು ಹೇಳಿದಂತೆ, ನಾನು ತಪ್ಪುಗಳನ್ನು ಮಾಡಿದ್ದೇನೆ. ಆದರೆ, ಅದು ಉತ್ತಮವಾಗಿದೆ. ಬಹುಶಃ ಆ ಅನುಭವವನ್ನು ನನ್ನ ಮಗ ಬಳಸಬಹುದು, ಎಂದು ಹೇಳಿದರು.

ಬಾಲಿವುಡ್‌ನಲ್ಲಿ ತಮ್ಮ ಛಾಪು ರೂಪುಗೊಂಡಿರುವುದರ ಬಗ್ಗೆ ಸುನೀಲ್ ಸಂತೋಷಗೊಂಡಿದ್ದಾರೆ. "ಇದು ನಂಬಲಾಗದ ಪ್ರಯಾಣ. ಇದಕ್ಕೆ ನಾನು ಯಾವತ್ತಿಗೂ ಕೃತಜ್ಞನಾಗಿದ್ದೇನೆ, ಎಂದು ಶೆಟ್ಟಿ ತಮ್ಮ ಅಭಿಪ್ರಾಯವನ್ನು ಬಿಚ್ಚಿಟ್ಟಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.