ಹೈದರಾಬಾದ್: ಸೆಲೆಬ್ರಿಟಿ ಕಪಲ್ ರಾಜ್ ಕುಂದ್ರಾ ಹಾಗೂ ನಟಿ ಶಿಲ್ಪಾ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಸದಾ ಸುದ್ದಿಯಲ್ಲಿರುತ್ತಾರೆ. ಆದರೆ, ಇಂದು ರಾಜ್ ಕುಂದ್ರಾ ತಮ್ಮ ಮೊದಲ ಪತ್ನಿ ಹಾಗೂ ಮುರಿದು ಬಿದ್ದ ಮೊದಲ ಮದುವೆಯ ಬಗ್ಗೆ ಮಾತನಾಡಿದ್ದಾರೆ. ಬರೋಬ್ಬರಿ 15 ವರ್ಷಗಳ ನಂತರ ರಾಜ್ ಕುಂದ್ರಾ ಮೊದಲ ಪತ್ನಿ ಕವಿತಾರಿಂದ ದೂರಾಗಿದ್ದಕ್ಕೆ ಏನು ಕಾರಣ ಎಂದು ತಿಳಿಸಿದ್ದಾರೆ.
- " class="align-text-top noRightClick twitterSection" data="
">
ಶಿಲ್ಪಾ ಶೆಟ್ಟಿ ಅವರನ್ನು ಮದುವೆಯಾಗುವ ಮೊದಲು ರಾಜ್ ಕುಂದ್ರಾ ಅವರಿಗೆ ಕವಿತಾ ಎಂಬವರ ಜೊತೆ ಮದುವೆಯಾಗಿತ್ತು. ಇತ್ತೀಚೆಗೆ ಶಿಲ್ಪಾ ಶೆಟ್ಟಿ ಅವರ ಹುಟ್ಟುಹಬ್ಬದ ಸಮಯದಲ್ಲಿ ಕೆಲವೊಂದು ಹಳೇ ಸುದ್ದಿಗಳು ವೈರಲ್ ಆಗಿದ್ದವು. ಅವುಗಳನ್ನು ನೋಡಿದ ನಂತರ ಇನ್ನೂ ಮೌನವಾಗಿರುವುದು ಸರಿಯಲ್ಲ ಎಂದು ಇಂಗ್ಲಿಷ್ ಪತ್ರಿಕೆಗೆ ನೀಡಿರುವ ಸಂದರ್ಶನಲ್ಲಿ ಈ ವಿಷಯ ಹಂಚಿಕೊಂಡಿದ್ದಾರೆ.
ಮೊದಲ ಪತ್ನಿ ಕವಿತಾ ಅವರಿಗೆ ತನ್ನ ತಂಗಿ ಗಂಡನ ಜೊತೆ ಸಂಬಂಧ ಇತ್ತು. ಅವರಿಬ್ಬರೂ ಸಂಬಂಧಗಳ ವಿಷಯದಲ್ಲಿ ತುಂಬಾ ಹತ್ತಿರ ಬಂದಿದ್ದರು. ಇದರಿಂದಾಗಿ ಎರಡು ಕುಟುಂಬಗಳ ನಡುವಿನ ಸಂಬಂಧದಲ್ಲಿ ಬಿರುಕುಂಟಾಗಿತ್ತು. ಹೀಗಾಗಿ ಅವಳಿಂದ ದೂರಾಗಲು ನಿರ್ಧರಿಸಿದೆ ಎಂದು ರಾಜ್ ತಿಳಿಸಿದ್ದಾರೆ.
ಇನ್ನು ಈ ವಿಷಯದ ಬಗ್ಗೆ ಮಾತನಾಡಬಾರದು ಎಂದು ಶಿಲ್ಪಾ ತುಂಬಾ ಸಲ ಹೇಳಿದ್ದರು. ಆದರೂ ಪದೇ ಪದೆ ಮೊದಲ ಮದುವೆಯ ಸುದ್ದಿ ಬಗ್ಗೆ ಹರಿದಾಡುವ ಗಾಳಿ ಮಾತು ಕೇಳಿ ಸಾಕಾಗಿತ್ತು ಅದಕ್ಕೆ ಈಗ ಹೇಳುತ್ತಿದ್ದೇನೆ ಎಂದಿದ್ದಾರೆ.
ಈಗ ಖುಷಿಯಿಂದ ನೆಮ್ಮದಿಯಾಗಿ ಸಂಸಾರ ಮಾಡುತ್ತಿದ್ದೇನೆ. ಕವಿತಾ ಜೊತೆ ತುಂಬಾ ಕೆಟ್ಟ ದಿನಗಳನ್ನು ನೋಡಿದ್ದೇನೆ. ಆಗ ಜೀವನ ವಿಷಮಯವಾಗಿತ್ತು. ಎರಡು ಕುಟುಂಬಗಳನ್ನು ನಾಶ ಮಾಡಿದಳು ಎಂದು ಕುಂದ್ರಾ ಹೇಳಿದ್ದಾರೆ.