ಶಿವಮೊಗ್ಗ: ಸರ್ಕಾರಿ ಆಸ್ಪತ್ರೆಯ ಮೇಲೆ ಕೋವಿಡ್ ಹೊರೆ ಕಡಿಮೆ ಮಾಡುವ ಉದ್ದೇಶದಿಂದ ಸೇವಾ ಭಾರತಿ ಸಂಸ್ಥೆಯು ನೂತನ ಕೋವಿಡ್ ಕೇರ್ ಸೆಂಟರ್ ಅನ್ನು ಪ್ರಾರಂಭಿಸಿದೆ.
ಶಿವಮೊಗ್ಗದ ವಿನೋಬನಗರದ 60 ಅಡಿ ರಸ್ತೆಯಲ್ಲಿನ ಶುಭಮಂಗಳ ಸಮುದಾಯ ಭವನದಲ್ಲಿ ಸುಮಾರು 100 ಹಾಸಿಗೆಯ ಕೋವಿಡ್ ಆರೈಕೆ ಕೇಂದ್ರವನ್ನು ಇಂದಿನಿಂದ ಅಧಿಕೃತವಾಗಿ ಪ್ರಾರಂಭಿಸಲಾಗಿದೆ.
ಶಿವಮೊಗ್ಗದ ಬಸವ ಕೇಂದ್ರದ ಬಸವ ಮರುಳಸಿದ್ದ ಮಹಾಸ್ವಾಮಿಜೀಗಳು ಕೋವಿಡ್ ಕೇರ್ ಸೆಂಟರ್ಗೆ ಚಾಲನೆ ನೀಡಿದ್ದಾರೆ. ಕಾರ್ಯಕ್ರಮದಲ್ಲಿ ಸಚಿವ ಈಶ್ವರಪ್ಪ, ಸಂಸದ ರಾಘವೇಂದ್ರ, ಎಂಎಲ್ಸಿಗಳಾದ ಆಯನೂರು ಮಂಜುನಾಥ್, ರುದ್ರೇಗೌಡ, ಮೇಯರ್ ಸುನೀತ ಅಣ್ಣಪ್ಪ ಸೇರಿ ಇತರರಿದ್ದರು.
ಸಚಿವ ಈಶ್ವರಪ್ಪನವರ ಅಧ್ಯಕ್ಷತೆಯನ್ನು ಹೊಂದಿರುವ ಟ್ರಸ್ಟ್ ಶುಭ ಮಂಗಳ ಸಮುದಾಯ ಭವನ ಸೇರಿದೆ. ಕೋವಿಡ್ ಆರೈಕೆ ಕೇಂದ್ರವನ್ನಾಗಿ ತಮ್ಮ ಸಮುದಾಯ ಭವನದಲ್ಲಿಯೇ ಮಾಡಿರುವುದು ಸಾಕಷ್ಟು ಜನರ ಮೆಚ್ಚುಗೆಗೆ ಪ್ರಾತ್ರವಾಗಿದೆ.
ಇಲ್ಲಿ ವೈದ್ಯರು, ನರ್ಸ್ಗಳು, ಸಮಾಲೋಚಕರು ಇರಲಿದ್ದಾರೆ. ಆಕ್ಸಿಜನ್ ಸೇರಿದಂತೆ ಆಸ್ಪತ್ರೆಯ ಎಲ್ಲ ವ್ಯವಸ್ಥೆಯನ್ನು ಹೊಂದಿದೆ. ಅಲ್ಲದೇ ಉತ್ತಮ ಆಹಾರ, ಔಷಧಗಳು ಲಭ್ಯವಿದೆ. ಪ್ರತಿಯೊಬ್ಬರಿಗೂ ಸ್ಟೀಮರ್ಗಳನ್ನು ನೀಡಲಾಗಿದೆ. ಇಲ್ಲಿಗೆ ಆಗಮಿಸುವ ಸೋಂಕಿತರು ಅದಷ್ಟು ಬೇಗ ಗುಣಮುಖರಾಗುವಂತಹ ವ್ಯವಸ್ಥೆ ಮಾಡಲಾಗಿದೆ.
ಶಿವಮೊಗ್ಗ ಮೆಟ್ರೋ ಯುನೈಟೆಡ್ ಆಸ್ಪತ್ರೆ, ವಿಶ್ವ ಹಿಂದೂ ಪರಿಷತ್ ಹಾಗೂ ಶನೈಶ್ವರ ದೇವಾಲಯ ಸಮಿತಿ ಅವರು ಹಾಗೂ ವಿವಿಧ ಸಂಘಟನೆಗಳು ಸಾಥ್ ನೀಡಿವೆ.