ನವದೆಹಲಿ: ಸತತ ಮೂರನೇ ಪಂದ್ಯದಲ್ಲೂ ತನ್ನ ಅಬ್ಬರ ಮುಂದುವರಿಸಿದ ಆ್ಯಂಡ್ರ್ಯೂ ರಸೆಲ್ ಕೇವಲ 28 ಎಸೆತಗಳಲ್ಲಿ 62 ರನ್ಗಳಿಸಿ ತಂಡ 186 ರನ್ಗಳ ಬೃಹತ್ ಮೊತ್ತ ಗಳಿಸಲು ನೆರವಾದರು.
ಟಾಸ್ ಸೋತು ಬ್ಯಾಟಿಂಗ್ ಇಳಿದ ಕೆಕೆಆರ್ಗೆ ಡೆಲ್ಲಿ ಬೌಲರ್ಗಳು ಅಘಾತ ನೀಡಿದರು. ಇಂದು ಮೊದಲ ಪಂದ್ಯವಾಡಿದ ನೇಪಾಳದ ಯುವ ಬೌಲರ್ ಕೆಕೆಆರ್ ಪರ ಪದಾರ್ಪಣೆ ಮಾಡಿದ್ದ ನಿಖಿಲ್ ನಾಯ್ಕ(7) ವಿಕೆಟ್ ಪಡೆದರು. ನಂತರ ಉತ್ತಪ್ಪ(11)ಹಾಗೂ ನಿತೀಸ್ ರಾಣಾ(01)ರನ್ನು ಹರ್ಷಲ್ ಪಟೇಲ್ ಪೆವಿಲಿಯನ್ಗಟ್ಟಿದರು. ಕ್ರಿಸ್ ಲಿನ್ ಸಹಾ ರಬಡಾ ಬೌಲಿಂಗ್ನಲ್ಲಿ ಪಂತ್ ಹಿಡಿದ ಅದ್ಭುತ ಕ್ಯಾಚ್ಗೆ ಬಲಿಯಾದರು. ನಂತರ ಬಂದ ಶುಬ್ಮನ್ ಗಿಲ್(04) ರನ್ಔಟ್ ಬಲೆಗೆ ಬಿದ್ದರು.
A stunning comeback from @KKRiders to get up to 185. Batting through pain @Russell12A powers his team with a superb knock of 62.#VIVOIPL pic.twitter.com/6TefNelwk6
— IndianPremierLeague (@IPL) March 30, 2019 " class="align-text-top noRightClick twitterSection" data="
">A stunning comeback from @KKRiders to get up to 185. Batting through pain @Russell12A powers his team with a superb knock of 62.#VIVOIPL pic.twitter.com/6TefNelwk6
— IndianPremierLeague (@IPL) March 30, 2019A stunning comeback from @KKRiders to get up to 185. Batting through pain @Russell12A powers his team with a superb knock of 62.#VIVOIPL pic.twitter.com/6TefNelwk6
— IndianPremierLeague (@IPL) March 30, 2019
ಕೇವಲ 9 ಓವರ್ಗಳಲ್ಲಿ 61 ರನ್ಗಳಿಸಿ 5 ವಿಕೆಟ್ ಕಳೆದುಕೊಂಡು ಕಡಿಮೆ ಮೊತ್ತಕ್ಕೆ ಕುಸಿಯುವ ಬೀತಿಯಲ್ಲಿದ್ದ ಕೆಕೆಆರ್ಗೆ ನಾಯಕ ಕಾರ್ತಿಕ್(50) ಹಾಗೂ ರಸೆಲ್(62) 6 ವಿಕೆಟ್ಗೆ95 ರನ್ಗಳ ಜೊತೆಯಾಟ ನೀಡಿ ತಂಡವನ್ನು ಸುಸ್ಥಿತಿಗೆ ತಂದರು. ಅಬ್ಬರಿಸುತ್ತಿದ್ದ ರಸೆಲ್ರನ್ನು ಕ್ರಿಸ್ ಮೋರಿಸ್ ಪೆವಿಲಿಯನ್ಗಟ್ಟಿದರೆ ಕಾರ್ತಿಕ್ ಅನುಭವಿ ಮಿಶ್ರಾಗೆ ವಿಕೆಟ್ ಒಪ್ಪಿಸಿದರು.
ನಂತರ ಬಂದ ಬೌಲರ್ಗಳಾದ ಚಾವ್ಲಾ 5 ಎಸೆತಗಳಲ್ಲಿ 12, ಕುಲ್ದೀಪ್ 5 ಎಸೆತಗಳಲ್ಲಿ 10 ರನ್ಗಳಿಸಿ ತಂಡ 185 ರನ್ಗಳ ಬೃಹತ್ ಮೊತ್ತ ಪೇರಿಸಲು ನೆರವಾದರು.