ಕೋಲ್ಕತ್ತಾ: ಪ್ಲೇ ಆಫ್ ಹಂತಕ್ಕೇರುವ ನಿಟ್ಟಿನಲ್ಲಿ ಉಭಯ ತಂಡಗಳಿಗೂ ಮಹತ್ವವಾಗಿದ್ದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಮೂರು ವಿಕೆಟ್ಗಳಿಂದ ಮಣಿಸಿದೆ.
ನಾಯಕ ದಿನೇಶ್ ಕಾರ್ತಿಕ್ ಅಬ್ಬರದ 97(50) ರನ್ಗಳಿಂದ ಕೋಲ್ಕತ್ತಾ ನೈಟ್ ರೈಡರ್ಸ್ ನಿಗದಿತ 20 ಓವರ್ಗಳಲ್ಲಿ 175 ರನ್ಗಳ ಸ್ಪರ್ಧಾತ್ಮಕ ಮೊತ್ತ ದಾಖಲಿಸಿತ್ತು.
ಈ ಗುರಿಯನ್ನು ಬೆನ್ನತ್ತಿದ ರಾಜಸ್ಥಾನ ತಂಡಕ್ಕೆ ಅಜಿಂಕ್ಯ ರಹಾನೆ ಉತ್ತಮ ಆರಂಭ ಒದಗಿಸಿದರು. 21 ಎಸೆತದಲ್ಲಿ 34 ರನ್ ಗಳಿಸಿ ರಹಾನೆ ಪೆವಿಯನ್ ಸೇರಿದರು. ಮಧ್ಯಮ ಕ್ರಮಾಂಕ ಕುಸಿತವಾದ ಪರಿಣಾಮ ರಾಜಸ್ಥಾನ ತಂಡ ಸಂಕಷ್ಟಕ್ಕೆ ಸಿಲುಕಿತ್ತು.
-
Six! And that's the game!
— IndianPremierLeague (@IPL) April 25, 2019 " class="align-text-top noRightClick twitterSection" data="
The @rajasthanroyals win by 3 wickets 👏👏 pic.twitter.com/CrZIXZkyTi
">Six! And that's the game!
— IndianPremierLeague (@IPL) April 25, 2019
The @rajasthanroyals win by 3 wickets 👏👏 pic.twitter.com/CrZIXZkyTiSix! And that's the game!
— IndianPremierLeague (@IPL) April 25, 2019
The @rajasthanroyals win by 3 wickets 👏👏 pic.twitter.com/CrZIXZkyTi
ಯುವ ಆಟಗಾರ ರಿಯಾನ್ ಪರಾಗ್ 31 ಎಸೆತದಲ್ಲಿ ಅಕರ್ಷಕ 47 ರನ್ ಬಾರಿಸಿ ತಂಡಕ್ಕೆ ಅಸರೆಯಾದರು. ಕೊನೆಯಲ್ಲಿ ಮಿಂಚಿದ ಜೋಫ್ರಾ ಅರ್ಚರ್ ಮಿಂಚಿನ 27 ರನ್ ಬಾರಿಸಿ ತಂಡಕ್ಕೆ ಗೆಲುವು ತಂದರು.
ಇಂದಿನ ಗೆಲುವಿನೊಂದಿಗೆ ರಾಜಸ್ಥಾನ ಅಂಕಪಟ್ಟಿಯಲ್ಲಿ ಒಂದು ಸ್ಥಾನ ಏರಿಕೆ ಕಂಡಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೊನೆಯ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.