ಬೆಂಗಳೂರು: ಇತ್ತೀಚೆಗೆ ಕಾಂತ್ರಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಪತ್ತೆಯಾಗಿದ್ದ ನಿರ್ಜೀವ ಗ್ರೆನೇಡ್ ಪತ್ತೆ ಪ್ರಕರಣ ಸಂಬಂಧ ಉಂಟಾಗಿದ್ದ ಆತಂಕ ಹಾಗೂ ಊಹಾಪೋಹಗಳಿಗೆ ತೆರೆಬಿದ್ದಿದೆ.
ಕಳೆದ 29 ರಂದು ಮಿಲಿಟರಿ ಯೋಧರ ತರಬೇತಿಗೆಂದು ಮಿಲಿಟರಿ ಅಧಿಕಾರಿಗಳು ರೈಲು ಮೂಲಕ ಗ್ರೆನೇಡ್ ಸಾಗಿಸುವಾಗ ಅಚಾನಕ್ಕಾಗಿ ಬಾಕ್ಸ್ನಲ್ಲಿದ್ದ ಗ್ರೆನೇಡ್ ಕೆಳಗೆ ಬಿದ್ದಿದೆ. ಪರಿಶೀಲನೆ ನಡೆಸಿದಾಗ ಗ್ರೆನೇಡ್ ಬಿದ್ದಿರುವುದು ಮಿಲಿಟರಿ ಅಧಿಕಾರಿಗಳ ಗಮನಕ್ಕೆ ಬಂದಿದೆ. ಪತ್ತೆಯಾಗಿದ್ದ ಗ್ರೆನೇಡ್ ನಿರ್ಜೀವವಾಗಿತ್ತು ಎಂದು ರೈಲ್ವೆ ಇಲಾಖೆಗೆ ಮಿಲಿಟರಿ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಮೇ 30 ರಂದು ಮೆಜೆಸ್ಟಿಕ್ ರೈಲ್ವೆ ನಿಲ್ದಾಣದ 1ನೇ ಪ್ಲಾಟ್ ಫಾರ್ಮ್ನ ಸಂಘ ಮಿತ್ರ ಎಕ್ಸ್ ಪ್ರೆಸ್ ರೈಲು ಬಳಿ ಗ್ರೆನೇಡ್ ಪತ್ತೆಯಾಗಿತ್ತು. ಇದು ಹಲವು ಅನುಮಾನ, ಆತಂಕಗಳಿಗೆ ಕಾರಣವಾಗಿತ್ತು. ಇದೀಗ ಖುದ್ದು ರೈಲ್ವೆ ಇಲಾಖೆ ಈ ಕುರಿತು ಸ್ಪಷ್ಟನೆ ನೀಡಿದೆ.