ನವದೆಹಲಿ: ಮರುಭೂಮೀಕರಣ, ಭೂ ನಾಶ ಮತ್ತು ಬರಗಾಲದ ಕುರಿತು ವಿಶ್ವಸಂಸ್ಥೆಯ ವಾಸ್ತವಿಕ ಉನ್ನತ ಮಟ್ಟದ ಸಂವಾದದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಲಿದ್ದಾರೆ. ಮರುಭೂಮೀಕರಣದ 14 ನೇ ಅಧಿವೇಶನದ ಅಧ್ಯಕ್ಷರಾದ ಮೋದಿ, ಮರುಭೂಮೀಕರಣ ವಿರುದ್ಧ ಹೋರಾಟದ ವಿಶ್ವಸಂಸ್ಥೆಯ ಸಮಾವೇಶ’ದಲ್ಲಿ ಇಂದು ಸಂಜೆ 7.30 ಕ್ಕೆ ಮಾತನಾಡಲಿದ್ದಾರೆ.
ವಿಶ್ವಸಂಸ್ಥೆಯ 75ನೇ ಸಾಮಾನ್ಯಸಭೆಯ ಅಧ್ಯಕ್ಷರಾದ ವೋಲ್ಕನ್ ಬೊಜ್ಕಿರ್ ಅವರು ಈ ಕಾರ್ಯಕ್ರಮ ಆಯೋಜಿಸಿದ್ದಾರೆ. ಪ್ರಧಾನಿ ಮೋದಿ ಅವರು ‘ಮರುಭೂಮೀಕರಣ ವಿರುದ್ಧ ಹೋರಾಟದ ವಿಶ್ವಸಂಸ್ಥೆಯ ಸಮಾವೇಶ’ದ (ಯುಎನ್‌ಸಿಸಿಡಿ) 14ನೇ ಅಧಿವೇಶನದ ಅಧ್ಯಕ್ಷರಾಗಿದ್ದಾರೆ. ಈ ಅಧಿವೇಶನಕ್ಕೆ ಮೋದಿ 2019ರ ಸೆಪ್ಟೆಂಬರ್‌ನಲ್ಲಿ ಚಾಲನೆ ನೀಡಿದ್ದರು. ಸಭೆಯಲ್ಲಿ ವಿಶ್ವ ನಾಯಕರು, ಮಂತ್ರಿಗಳು ಮತ್ತು ಸರ್ಕಾರಿ ಪ್ರತಿನಿಧಿಗಳು, ಕೃಷಿ ಉದ್ಯಮದ ಮುಖಂಡರು, ವಿಶ್ವಸಂಸ್ಥೆಯ ಸಂಸ್ಥೆಗಳು, ಅಂತಾರಾಷ್ಟ್ರೀಯ ಸಂಸ್ಥೆಗಳು ಮತ್ತು ನಾಗರಿಕ ಸಮಾಜ ಗುಂಪುಗಳ ಪ್ರತಿನಿಧಿಗಳು ಮತ್ತು ಸಾರ್ವಜನಿಕರ ಸದಸ್ಯರು ಭಾಗವಹಿಸಲಿದ್ದಾರೆ ಎಂದು ಯುಎನ್‌ಸಿಸಿಡಿ ಪ್ರಕಟಣೆ ತಿಳಿಸಿದೆ.
"ಭೂಮಿ ನಮ್ಮ ಸಮಾಜಗಳ ಅಡಿಪಾಯವಾಗಿದೆ. ಜಾಗತಿಕ ಆಹಾರ ಸುರಕ್ಷತೆ ಮತ್ತು ಪರಿಸರ ಆರೋಗ್ಯ, ಶೂನ್ಯ ಹಸಿವು, ಬಡತನ ನಿರ್ಮೂಲನೆ ಶಕ್ತಿಯ ಮೂಲಾಧಾರವಾಗಿದೆ. ಇದು ಸುಸ್ಥಿರ ಅಭಿವೃದ್ಧಿ 2030 ರ ಕಾರ್ಯಸೂಚಿಯ ಯಶಸ್ಸಿಗೆ ಆಧಾರವಾಗಿದೆ" ಎಂದು ಹೇಳಲಾಗಿದೆ.