ರಾಮನಗರ: ವಾರದೊಳಗಾಗಿ ವಿಳಂಬವಾಗಿರುವ ಪಿಂಚಣಿ ಹಣವನ್ನು ಸಮರ್ಪಕವಾಗಿ ಫಲಾನುಭವಿಗಳಿಗೆ ತಲುಪಿಸವಂತೆ ಅಧಿಕಾರಿಗಳಿಗೆ ಸಂಸದ ಡಿ ಕೆ ಸುರೇಶ ಆದೇಶಿಸಿದ್ದಾರೆ.
ನಗರದ ಜಿಲ್ಲಾ ಪಂಚಾಯತ್ ಭವನದಲ್ಲಿ ಅಧಿಕಾರಿಗಳ ಜತೆ ಹಮ್ಮಿಕೊಂಡಿದ್ದ ಸಭೆಯಲ್ಲಿ ಅವರು ಮಾತನಾಡಿದರು. ಇದೇ ವೇಳೆ ವಿವಿಧ ಸಾಮಾಜಿಕ ಭದ್ರತಾ ಯೋಜನೆಯಡಿ ಪಿಂಚಣಿ ವಿತರಿಸುವಲ್ಲಿ ಅಂಚೆ ಇಲಾಖೆ ವಿಳಂಬ ಮಾಡುತ್ತಿರುವ ಕುರಿತು ಸಂಸದ ಡಿ ಕೆ ಸುರೇಶ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಸಭೆಯಲ್ಲಿ ಸಂಸದ ಡಿ ಕೆ ಸುರೇಶ್ ಫಲಾನುಭವಿಗಳು ಔಷಧಿ ಹಾಗೂ ಇನ್ನಿತರ ಮೂಲಸೌಲಭ್ಯಗಳ ಅಗತ್ಯತೆಗಳಿಗೆ ಪಿಂಚಣಿ ಹಣವನ್ನೇ ನಂಬಿಕೊಂಡಿದ್ದಾರೆ. ಅವರ ಸಮಸ್ಯೆಯನ್ನು ಶೀಘ್ರ ಪರಿಹರಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಪೋಸ್ಟ್‌ಮಾಸ್ಟರ್‌ಗಳಿಗೆ ಸಮಯದ ಅಭಾವವಿದ್ದು. ಅವರು 3 ಗಂಟೆಗಳ ಕಾಲ ಕಚೇರಿಯಲ್ಲೇ ಕಾರ್ಯನಿರ್ವಹಿಸಬೇಕು. ಇಂತಹ ಪರಿಸ್ಥಿತಿಯಲ್ಲಿ ಪಿಂಚಣಿಯನ್ನು ಫಲಾನುಭವಿಗಳಿಗೆ ತಲುಪಿಸಲು ಸಾಧ್ಯವಾಗುತ್ತಿಲ್ಲ. ಕಡ್ಡಾಯಗೊಳಿಸಲಾದ ಕಚೇರಿ ಕಾರ್ಯದ ಸಮಯವನ್ನು ಮೊಟಕುಗೊಳಿಸಿ ಫಲಾನುಭವಿಗಳಿಗೆ ಪಿಂಚಣಿ ತಲುಪಿಸಲು ಅವಕಾಶ ಮಾಡಿಕೊಡಿ ಎಂದು ಅಧಿಕಾರಿಗಳಿಗೆ ಪೋಸ್ಟ್ ಮಾಸ್ಟರ್‌ಗಳು ಮನವಿ ಮಾಡಿಕೊಂಡರು.