ನಾಟಿಂಗ್ಹ್ಯಾಮ್: ಇಲ್ಲಿನ ಟ್ರೆಂಟ್ ಬಿಡ್ಜ್ ಮೈದಾನದಲ್ಲಿ ನಡೆಯುತ್ತಿರುವ ವಿಶ್ವಕಪ್ ಟೂರ್ನಿಯ ಇಂಗ್ಲೆಂಡ್ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ವಿನೂತನ ದಾಖಲೆ ಬರೆದಿದೆ.
ಟಾಸ್ ಗೆದ್ದು ಪಾಕಿಸ್ತಾನವನ್ನು ಬ್ಯಾಟಿಂಗ್‌ಗೆ ಇಳಿಸಿದ ಆಂಗ್ಲರು ಉತ್ತಮ ಬೌಲಿಂಗ್ ಮಾಡುವಲ್ಲಿ ಎಡವಿದರು. ಪರಿಣಾಮ ನಿಗದಿತ ಐವತ್ತು ಓವರ್ಗಳಲ್ಲಿ ಪಾಕಿಸ್ತಾನ ಬರೋಬ್ಬರಿ 348 ಗಳಿಸಿತು. ಇದೇ ಇನ್ನಿಂಗ್ಸ್ನಲ್ಲಿ ಸರ್ಫರಾಜ್ ಟೀಂ ಅಪರೂಪದ ದಾಖಲೆ ನಿರ್ಮಿಸಿದೆ.
ವಿರಾಟ್ ಪಡೆಗೆ ಸ್ಪೆಷಲ್ ವಿಶ್... ಆಲ್ ದ ಬೆಸ್ಟ್ ಹೇಳಿದ ಕಾಲ್ಚೆಂಡು ಆಟಗಾರರು...!
ಎಂಟು ವಿಕೆಟ್ ನಷ್ಟಕ್ಕೆ 348 ರನ್ ಗಳಿಸಿದ ಪಾಕ್ ತಂಡದಲ್ಲಿ ಯಾವೊಬ್ಬ ಆಟಗಾರನೂ ಮೂರಂಕಿ ಮೊತ್ತ ಅರ್ಥಾತ್ ಶತಕ ಬಾರಿಸಲಿಲ್ಲ. ಮೊಹಮ್ಮದ್ ಹಫೀಜ್ ಸಿಡಿಸಿದ 84 ರನ್ ವೈಯಕ್ತಿಕ ಗರಿಷ್ಠ ಗಳಿಕೆ. ಹಫೀಜ್ ಹೊರತಾಗಿ ನಾಯಕ ಸರ್ಫರಾಜ್ ಅಹ್ಮದ್(55) ಹಾಗೂ ಬಾಬರ್ ಅಜಮ್ (63) ಅರ್ಧಶತಕ ಬಾರಿಸಿದ್ದಾರೆ.
ವಿಶೇಷವೆಂದರೆ ಪಾಕಿಸ್ತಾನ 2015ರ ವಿಶ್ವಕಪ್ನಲ್ಲಿ ಯುಎಇ ವಿರುದ್ಧ 339 ರನ್ ಗಳಿಸಿದಾಗ ಯಾವ ಆಟಗಾರನೂ ಶತಕ ಸಿಡಿಸಿರಲಿಲ್ಲ. 1983ರ ವಿಶ್ವಕಪ್ನಲ್ಲಿ ಶ್ರೀಲಂಕಾ ವಿರುದ್ಧ ಪಾಕಿಸ್ತಾನ 338 ರನ್ ದಾಖಲಿಸಿತ್ತು. ಆ ವೇಳೆಯಲ್ಲೂ ಶತಕ ಮೂಡಿಬಂದಿರಲಿಲ್ಲ.
ವಿಶ್ವಕಪ್ನಲ್ಲಿ ಶತಕವಿಲ್ಲದೆ ತಂಡದ ಅತ್ಯಧಿಕ ಗಳಿಕೆಗಳು :
- ಪಾಕಿಸ್ತಾನ Vs ಇಂಗ್ಲೆಂಡ್ - 348/8 ನಾಟಿಂಗ್ಹ್ಯಾಮ್, 2019
- ದಕ್ಷಿಣ ಆಫ್ರಿಕಾ Vs ಯುಎಇ - 314/6 ವೆಲ್ಲಿಂಗ್ಟನ್, 2015
- ಪಾಕಿಸ್ತಾನ Vs ಯುಎಇ -339/6 ನೇಪಿಯರ್, 2015
- ಪಾಕಿಸ್ತಾನ Vs ಶ್ರೀಲಂಕಾ - 338/5 ಸ್ವನ್ಸೀ, 1983