ಮುಂಬೈ: ಬಾಂಗ್ಲಾದೇಶದ ವಿರುದ್ಧ ಶತಕಗಳಿಸಿದ ರಾಹುಲ್ ತಾವು ಯಾವುದೇ ಕ್ರಮಾಂಕದಲ್ಲಾದರೂ ಆಡಲು ಸಿದ್ದ ಎಂದು ಬ್ಯಾಟಿಂಗ್ ಮೂಲಕ ತಮ್ಮ ಸಾಮರ್ಥ್ಯ ತೋರಿಸಿಕೊಟ್ಟರೂ ಭಾರತದ ಮಾಜಿ ಆಟಗಾರ ಸಂಜಯ್ ಮಂಜ್ರೇಕರ್ ರಾಹುಲ್ಗಿಂತ ವಿಜಯ್ ಶಂಕರ್ 4 ಕ್ರಮಾಂಕಕ್ಕೆ ಸೂಕ್ತ ಎಂದು ಹೇಳುವ ಮೂಲಕ ಎಲ್ಲರ ಅಚ್ಚರಿಗೆ ಕಾರಣರಾಗಿದ್ದಾರೆ.
ಭಾರತ ತಂಡವನ್ನು ಪ್ರತಿನಿಧಿಸಿ ಇದೀಗ ಕಾಮೆಂಟೇಟರ್ ಆಗಿರುವ ಸಂಜಯ್ ಮಂಜ್ರೇಕರ್ ಶತಕ ಸಿಡಿಸಿದ ರಾಹುಲ್ಗಿಂತ ತಮಿಳುನಾಡಿನ ಆಲ್ರೌಂಡರ್ ವಿಜಯ್ ಶಂಕರ್ ನಾಲ್ಕನೇ ಕ್ರಮಾಂಕಕ್ಕೆ ಸೂಕ್ತವಾದ ಆಟಗಾರ ಎಂದು ಅಭಿಪ್ರಾಯಪಟ್ಟಿದ್ದು, ಎಂಎಸ್ಕೆ ಪ್ರಸಾದ್ ಅವರ ಆಯ್ಕೆಯನ್ನು ಎತ್ತಿ ಹಿಡಿದಿದ್ದಾರೆ.
-
Dream warm up game for India...found their no 4 and spinners got some of their confidence back. #ICCWC2019
— Sanjay Manjrekar (@sanjaymanjrekar) May 28, 2019 " class="align-text-top noRightClick twitterSection" data="
">Dream warm up game for India...found their no 4 and spinners got some of their confidence back. #ICCWC2019
— Sanjay Manjrekar (@sanjaymanjrekar) May 28, 2019Dream warm up game for India...found their no 4 and spinners got some of their confidence back. #ICCWC2019
— Sanjay Manjrekar (@sanjaymanjrekar) May 28, 2019
ವಿಜಯ್ ಶಂಕರ್ಗೆ ವಿಶ್ವಕಪ್ ತಂಡದಲ್ಲಿ ನಾಲ್ಕನೇ ಕ್ರಮಾಂಕಕ್ಕೆ ಮೊದಲ ಆದ್ಯತೆ ನೀಡಲಾಗಿದೆ. ಇದನ್ನು ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್ಕೆ ಪ್ರಸಾದ್ ತಂಡದ ಆಯ್ಕೆ ದಿನವೇ ಸಮಾಜಾಯಿಷಿ ನೀಡಿದ್ದಾರೆ. ಹಾಗಾಗಿ ವಿಜಯ್ಗೆ ಅವರ ಸಾಮರ್ಥ್ಯ ತೋರಿಸಲು ಅವಕಾಶ ಕೊಡಬೇಕು ಎಂದು ತಿಳಿಸಿದ್ದಾರೆ.
ಕೇವಲ ಒಂದು ಅಭ್ಯಾಸ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಲಿಲ್ಲವೆಂದು ವಿಜಯ್ ಸ್ಥಾನದಲ್ಲಿ ರಾಹುಲ್ ಹೆಸರು 4 ನೇ ಕ್ರಮಾಂಕಕ್ಕೆ ಕೇಳಿಬರುತ್ತಿದೆಯಷ್ಟೇ ಎಂದು ಮಂಜ್ರೇಕರ್ ರಾಹುಲ್ ಆಯ್ಕೆಯ ಗೊಂದಲಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.
ಆದರೆ, ಭಾರತ ತಂಡ ಪಂದ್ಯ ಗೆದ್ದ ನಂತರ 4 ನೇ ಕ್ರಮಾಂಕದ ಸಮಸ್ಯೆಗೆ ಪರಿಹಾರ ಸಿಕ್ಕಿದೆ ಎಂದು ಅವರೇ ಟ್ವೀಟ್ ಮಾಡಿದ್ದು, ಇದು ಮತ್ತೆ ವಿಜಯ್ ಪರ ಬ್ಯಾಟ್ ಬೀಸಿ ಎಲ್ಲರ ಅಚ್ಚರಿಗೆ ಕಾರಣರಾಗಿದ್ದಾರೆ.
ರಾಹುಲ್ ನಿನ್ನೆಯ ಪಂದ್ಯದಲ್ಲಿ 99 ಎಸೆತಗಳಲ್ಲಿ 102 ರನ್ಗಳಿಸಿದ್ದರು. ಕೊಹ್ಲಿ ಸಹ ರಾಹುಲ್ 4ನೇ ಕ್ರಮಾಂಕದಲ್ಲಿ ಶತಕ ಸಿಡಿಸಿರುವುದರಿಂದ ತಂಡಕ್ಕೆ ಆನೆಬಲ ಬಂದಂತಾಗಿದೆ ಎಂದಿದ್ದರು. ಒಟ್ಟಾರೆ ರಾಹುಲ್ರನ್ನು ಆರಂಭಿಕ ಸ್ಥಾನಕ್ಕೆ ಬ್ಯಾಕ್ಆಪ್ ಪ್ಲೇಯರ್ ಆಗಿ ಸೀಮಿತಗೊಳಿಸುತ್ತಾರಾ ಅಥವಾ ನಾಲ್ಕನೆ ಕ್ರಮಾಂಕದಲ್ಲಿ ಆಡಿಸಲಾಗುತ್ತದೆಯೇ ಎಂದು ಜೂನ್ 5ರಂದು ತಿಳಿಯಲಿದೆ.