ಹಾವೇರಿ: ಕೊರೊನಾದಿಂದ ಮೃತಪಟ್ಟ ಹಿಂದೂ ವ್ಯಕ್ತಿಯ ಅಂತ್ಯಕ್ರಿಯೆಯನ್ನು ಮುಸ್ಲಿಂ ಯುವಕರು ಮಾಡುವ ಮೂಲಕ ಮಾನವೀಯತೆ ಮೆರೆದಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಬ್ಯಾಡಗಿ ತಾಲೂಕಿನ ಖುರ್ದ ವೀರಾಪುರ ಗ್ರಾಮದಲ್ಲಿ 45 ನಲವತ್ತೈದು ವರ್ಷದ ವ್ಯಕ್ತಿ ಕೊರೊನಾದಿಂದ ಮೃತಪಟ್ಟಿದ್ದ. ಈ ಸಂದರ್ಭದಲ್ಲಿ ಬ್ಯಾಡಗಿ ನಗರದ ನಾಲ್ಕು ಮುಸ್ಲಿಂ ಯುವಕರು ಅಂತ್ಯಕ್ರಿಯೆ ನಡೆಸಿದ್ದಾರೆ. ಆರೋಗ್ಯ ಇಲಾಖೆಯ ಸಹಾಯದೊಂದಿಗೆ ಪಿಪಿಇ ಕಿಟ್ ಧರಿಸಿ ಯುವಕರು ಅಂತ್ಯಕ್ರಿಯೆ ನೆರವೇರಿಸಿದರು.
ಮಂಜೂರು ಅಲಿ ಹಕೀಂ, ಮುಕ್ತಿಯಾ ಅಹ್ಮದ್ ಮುಲ್ಲಾ, ಅಜೀಜ್ ಬಿಜಾಪುರ ಮತ್ತು ಹಸನ್ ಅಲಿ ಅಂತ್ಯಕ್ರಿಯೆ ನೆರವೇರಿಸಿದ ಯುವಕರು. ಈ ಯುವಕರು ಯಾವುದೇ ಜಾತಿ ಬೇಧ ಮಾಡದೇ ಕೊರೊನಾದಿಂದ ಮೃತಪಟ್ಟ ಹಿಂದೂ ವ್ಯಕ್ತಿಯ ಅಂತ್ಯಕ್ರಿಯೆ ಮಾಡುವ ಮೂಲದ ಮಾನವೀಯತೆ ಮೆರೆದಿದ್ದಾರೆ.