ಹಾವೇರಿ: ಮತ ಎಣಿಕೆ ಕೇಂದ್ರದಲ್ಲಿ ಮೊಬೈಲ್ ನಿಷೇಧ ಇದ್ದರೂ ಕಾಲಿನ ಒಳಗೆ ಮೊಬೈಲ್ ಕಟ್ಟಿಕೊಂಡು ಬಂದಿದ್ದ ಕಾರ್ಯಕರ್ತ ಸಿಕ್ಕಿಬಿದ್ದ ಘಟನೆ ಹಾವೇರಿ ದೇವಗಿರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದಿದೆ.
ಪೊಲೀಸರು ತಪಾಸಣೆ ನಡೆಸುವ ವೇಳೆ ಕಾರ್ಯಕರ್ತ ಸಿಕ್ಕಿಬಿದ್ದಿದ್ದಾನೆ. ಕರವಸ್ತ್ರದಲ್ಲಿ ಮೊಬೈಲ್ ಸುತ್ತಿಕೊಂಡು ಕಾಲಿನಲ್ಲಿ ಕಟ್ಟಿಕೊಂಡಿದ್ದ ಹಿರೇಕೆರೂರಿನ ಬಿಜೆಪಿ ಕಾರ್ಯಕರ್ತ ವಿರೂಪಾಕ್ಷ ಸಿಕ್ಕಿಬಿದ್ದ ಕಾರ್ಯಕರ್ತ. ಮೊಬೈಲ್ ವಶಕ್ಕೆ ಪಡೆದ ಪೊಲೀಸರು, ಕಾರ್ಯಕರ್ತನನ್ನು ಮತಎಣಿಕೆ ಕೇಂದ್ರ ಹೊರಕ್ಕೆ ಕಳಿಸಿದ್ದಾರೆ.