ಮುಂಬೈ: ತನ್ನ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮೂರು ಬಾರಿ ಐಪಿಎಲ್ ಚಾಂಪಿಯನ್ ಆಗಿ ಮಾಡಿದ್ದ ರೋಹಿತ್ ಶರ್ಮಾ ಕಳೆದ ಬಾರಿ ಪ್ಲೇ ಆಫ್ ತಲುಪಲು ವಿಫಲವಾದ ಹಿನ್ನೆಲೆ ಹಾಗೂ ವಿಶ್ವಕಪ್ ದೃಷ್ಟಿಯಿಂದ ಈ ಬಾರಿ ಆರಂಭಿಕರಾಗಿ ಕಣಕ್ಕಳಿಯಲು ನಿರ್ಧರಿಸಿದ್ದಾರೆ.
2018 ರ ಆವೃತ್ತಿಯಲ್ಲಿ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಿ ಕೇವಲ 286 ರನ್ಗಳಿಸಿದ್ದರು. 2 ಬಾರಿ ಆರಂಭಿಕನಾಗಿ ಕಣಕ್ಕಳಿದು ಒಮ್ಮೆ ಡಕ್ ಔಟ್ ಹಾಗೂ ಮತ್ತೊಮ್ಮೆ 2 ರನ್ಗೆ ವಿಕೆಟ್ ಒಪ್ಪಿಸಿದ್ದರು. ಆದರೆ ಈ ಬಾರಿ ಪೂರ್ಣ ಪ್ರಮಾಣದಲ್ಲಿ ಆರಂಭಿಕನಾಗಿ ಕಣಕ್ಕಳಿಯಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.
That one thing all MI fans were waiting to hear 🙌#CricketMeriJaan #OneFamily @ImRo45 pic.twitter.com/dGvUP09GFz
— Mumbai Indians (@mipaltan) March 19, 2019 " class="align-text-top noRightClick twitterSection" data="
">That one thing all MI fans were waiting to hear 🙌#CricketMeriJaan #OneFamily @ImRo45 pic.twitter.com/dGvUP09GFz
— Mumbai Indians (@mipaltan) March 19, 2019That one thing all MI fans were waiting to hear 🙌#CricketMeriJaan #OneFamily @ImRo45 pic.twitter.com/dGvUP09GFz
— Mumbai Indians (@mipaltan) March 19, 2019
ಕಳೆದ ಬಾರಿ ತಂಡದ ಸಮತೋಲನಕ್ಕಾಗಿ ಮಧ್ಯಮ ಕ್ರಮಾಂಕ ಹಾಗೂ ಕೆಲವೊಮ್ಮೆ ಆರಂಭಿಕನಾಗಿ ಆಡಿದ್ದೆ, ಆದರೆ ಐಪಿಎಲ್ ಬೆನ್ನಲ್ಲೇ ವಿಶ್ವಕಪ್ ಇರುವುದರಿಂದ ಆರಂಭಿಕನಾಗಿಯೇ ಮುಂದುವರಿಯಲು ನಿರ್ಧರಿಸಿದ್ದೇನೆ. ತಂಡದಲ್ಲಿ ಸಮತೋಲನಕ್ಕಾಗಿ ಕೆಲವು ಪ್ರಯೋಗಗಳ ಅಗತ್ಯವಿದೆ. ಅಲ್ಲದೆ ನಮ್ಮ ತಂಡದಲ್ಲಿ ಯುವರಾಜ್, ಪೊಲಾರ್ಡ್ರಂತಹ ಅನುಭವಿಗಳು ಮಿಡಲ್ ಆರ್ಡರ್ನಲ್ಲಿರುವುದರಿಂದ ನಾನು ಆರಂಭಿಕನಾದರೆ ಯಾವುದೇ ತೊಂದರೆಯಿಲ್ಲ ಎಂದಿದ್ದಾರೆ.
ತಂಡಕ್ಕೆ ಯುವರಾಜ್ ಸಿಂಗ್, ಪೊಲಾರ್ಡ್ ,ಮಲಿಂಗಾ, ರಂತಹ ಅನುಭವಿಗಳಿರುವುದ್ದಾರೆ. ತಂಡದನಿರ್ಧೇಶಕರಾಗಿ ಜಹೀರ್ ಖಾನ್ ನೇಮಕಹೊಂಡಿದ್ದಾರೆ. ಇದರಿಂದ ಒತ್ತಡದ ಸನ್ನವೇಶವನ್ನು ನಿಭಾಯಿಸಲು ಸುಲಭವಾಗಲಿದೆ ಎಂದಿದ್ದಾರೆ.