ನವದೆಹಲಿ : ಖಾಸಗಿ ವಲಯಗಳಿಗೆ (ಆಸ್ಪತ್ರೆಗಳು) ನೀಡುವ ಕೋವಿಡ್ ಲಸಿಕೆಗಳ ಬೆಲೆಯನ್ನು ಲಸಿಕೆ ತಯಾರಕರು ನಿರ್ಧರಿಸಲಿದ್ದಾರೆ ಎಂದು ನೀತಿ ಆಯೋಗ್ ಸದಸ್ಯ ಡಾ.ವಿ ಕೆ ಪಾಲ್ ತಿಳಿಸಿದ್ದಾರೆ.
ಖಾಸಗಿ ಆಸ್ಪತ್ರೆಗಳು ನೇರವಾಗಿ ಶೇ. 25ರಷ್ಟು ಲಸಿಕೆಗಳನ್ನು ಖರೀದಿಸುವ ವ್ಯವಸ್ಥೆಯನ್ನು ಮುಂದುವರಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ ಒಂದು ದಿನದ ನಂತರ ಈ ಹೇಳಿಕೆ ನೀಡಿದ್ದಾರೆ.
ಲಸಿಕೆಗಳನ್ನ ನಿರ್ಧರಿಸಿದ ಬೆಲೆಯ ಮೇಲೆ ಖಾಸಗಿ ಆಸ್ಪತ್ರೆಗಳು ಕೇವಲ 150 ರೂಪಾಯಿ ಸೇವಾ ಶುಲ್ಕವನ್ನು ವಿಧಿಸುತ್ತವೆ ಎಂದು ರಾಜ್ಯ ಸರ್ಕಾರಗಳು ಮೇಲ್ವಿಚಾರಣೆ ಮಾಡಲಿವೆ.
ಖಾಸಗಿ ವಲಯದ ಬೇಡಿಕೆಯನ್ನು ರಾಜ್ಯಗಳು ಒಟ್ಟುಗೂಡಿಸುತ್ತವೆ. ಅಂದರೆ ಎಷ್ಟು ಸೌಲಭ್ಯಗಳ ಜಾಲವನ್ನು ಹೊಂದಿದೆ ಮತ್ತು ಅದಕ್ಕೆ ಎಷ್ಟು ಪ್ರಮಾಣಗಳು ಬೇಕಾಗುತ್ತವೆ ಎಂಬುದನ್ನು ರಾಜ್ಯ ಸರ್ಕಾರ ನೋಡಿಕೊಳ್ಳುತ್ತದೆ. ಖಾಸಗಿ ವಲಯಗಳಿಗೆ (ಆಸ್ಪತ್ರೆಗಳು) ಲಸಿಕೆಗಳ ಬೆಲೆಯನ್ನು ಲಸಿಕೆ ತಯಾರಕರು ನಿರ್ಧರಿಸುತ್ತಾರೆ ಎಂದು ಹೇಳಿದರು.