ETV Bharat / briefs

ಅಬುದಾಬಿಯಲ್ಲಿ ಮಂಗಳೂರು ಯುವಕ ಸಾವು: ಜಾತಿ-ಮತ ಮರೆತು ಮೃತದೇಹ ತವರಿಗೆ ತಲುಪಿಸಿದ ಅನಿವಾಸಿ ಕನ್ನಡಿಗರು - UAE latest news

ಯುಎಇ ದೇಶದ ಅಬುಧಾಬಿಯಲ್ಲಿ ಮೃತಪಟ್ಟಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಅಡ್ಡೂರಿನ ಯುವಕನ ಮೃತದೇಹವನ್ನು ಕೋವಿಡ್ ಭೀತಿಯ ನಡುವೆಯೂ ಜಾತಿ, ಮತ ಮರೆತು ಮಾನವೀಯತೆಯಿಂದ ಅನಿವಾಸಿ ಕನ್ನಡಿಗರ ತಂಡ ತಾಯ್ನಾಡಿಗೆ ರವಾನಿಸಿದೆ.

Mangalore resident death in UAE
Mangalore resident death in UAE
author img

By

Published : Jun 21, 2020, 4:19 PM IST

ಮಂಗಳೂರು: ಅಬುದಾಬಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟ ದಕ್ಷಿಣ ಕನ್ನಡ ಜಿಲ್ಲೆಯ ಯುವಕನ ಮೃತದೇಹವನ್ನು, ಅನಿವಾಸಿ ಕನ್ನಡಿಗರ ತಂಡ ಜಾತಿ, ಮತ ಮರೆತು ಯುಎಇ ಸರ್ಕಾರದ ಎಲ್ಲಾ ನಿಯಮಗಳನ್ನು ಪಾಲಿಸಿ, ಪರವಾನಿಗೆ ಪಡೆದು ತಾಯ್ನಾಡಿಗೆ ರವಾನಿಸುವಲ್ಲಿ ಯಶಸ್ವಿಯಾಗಿದೆ.

ಅಬುಧಾಬಿಯಲ್ಲಿ ಕರಾವಳಿಯ ಅಡ್ಡೂರಿನ ಯುವಕ ಯಶವಂತ ಪೂಜಾರಿಗೆ ಅಪಘಾತವಾಗಿದೆ ಎಂದು ಮುಝಮ್ಮಿಲ್ ಎಂಬುವರು ಕನ್ನಡಿಗಾಸ್ ಹೆಲ್ಪ್ ಲೈನ್ ತಂಡದ ಹಿದಾಯತ್ ಅಡ್ಡೂರ್ ಅವರಿಗೆ 13 ದಿನಗಳ ಹಿಂದೆ ಕರೆಮಾಡಿ ತಿಳಿಸಿದ್ದರು. ಈ ಬಗ್ಗೆ ಮೃತನ ವಿವರ ಕೇಳಿದಾಗ ಇದ್ದದ್ದು ಕೇವಲ ಒಂದು ಫೋಟೋ ಮತ್ತು ಆಧಾರ್ ಕಾರ್ಡ್ ಮಾತ್ರ. ಅವರ ಪಾಸ್ ಪೋರ್ಟ್ ಕಾಪಿ, ಮೊಬೈಲ್ ಸಂಖ್ಯೆ ಅಥವಾ ಬೇರೆ ಯಾವುದೇ ದಾಖಲೆಗಳಿರಲಿಲ್ಲ.
ಈ ಬಗ್ಗೆ ಹಿದಾಯತ್ ಅಡ್ಡೂರ್ ಮತ್ತು ತಂಡ ಕಾರ್ಯಪ್ರವೃತ್ತರಾಗಿ, ಯಶವಂತ್ ಕುರಿತು ಮಾಹಿತಿ ಕಲೆಹಾಕಿದ್ದರು. ಯಶವಂತ್ ಕುಟುಂಬಸ್ಥರು ಕೊನೆಯ ಬಾರಿ ಅವರ ಮುಖವನ್ನಾದರೂ ನೋಡಬೇಕು. ಹೇಗಾದರೂ ಮೃತದೇಹವನ್ನು ಕಳುಹಿಸಿ ಎಂದು ಬೇಡಿಕೊಂಡಿದ್ದರು. ಈ ಬಗ್ಗೆ ಚರ್ಚೆ ನಡೆಸಲು ಹಿದಾಯತ್ ಅಡ್ಡೂರು ವಾಟ್ಸಾಪ್ ಗ್ರೂಪ್ ರಚಿಸಿ, ಕನ್ನಡಿಗಾಸ್ ಹೆಲ್ಪ್ ಲೈನ್ ಸದಸ್ಯರನ್ನು ಸೇರಿಸಲು ಕಾರ್ಯ ಪ್ರವೃತ್ತರಾಗಿದ್ದರು.
ಕೊರೊನಾ ಸಂಕಷ್ಟದ ಈ ಸಂದಿಗ್ಧ ಸಮಯದಲ್ಲಿ ಶವ ಮಹಜರು ನಡೆಸಿ ಸಹಜ ಸಾವು ಎಂದು ಖಚಿತಪಡಿಸಲಾಗಿತ್ತು. ಕೋವಿಡ್ ತಪಾಸಣೆಯನ್ನು ನಡೆಸಿದಾಗ ನೆಗೆಟಿವ್ ವರದಿ ಬಂದಿತ್ತು. ಆ ಬಳಿಕವೂ ಯಶವಂತ ಪಾಸ್ ಪೋರ್ಟ್, ವಿಸಾ, ಎಮಿರೇಟ್ಸ್ ಕಾರ್ಡ್ ಯಾವುದೂ ಇಲ್ಲದ ಕಾರಣ ಭಾರತೀಯ ರಾಯಭಾರ ಕಚೇರಿಯಲ್ಲಿ ರಶೀದ್ ಬಿಜೈ ನೇತೃತ್ವದಲ್ಲಿ ತಾತ್ಕಾಲಿಕ ಪಾಸ್ ಪೋರ್ಟ್ ಮತ್ತು ಎಲ್ಲಾ ಪರವಾನಿಗೆ ಕೆಲಸ ತ್ವರಿತವಾಗಿ ನಡೆಯಿತು.

ಈ ಸಂದರ್ಭದಲ್ಲಿ ದುಬೈ ಕಾನ್ಸುಲೇಟ್ ಮತ್ತು ಕಾರ್ಗೋ ಸಂಬಂಧಿಸಿದ ಎಲ್ಲಾ ಕೆಲಸಕ್ಕೂ ಕನ್ನಡಿಗಾಸ್ ಹೆಲ್ಪ್ ಲೈನ್ ತಂಡ ಸಂಪೂರ್ಣ ಸಹಕಾರ ನೀಡಲಿದೆ ಎಂದು ತಂಡದ ಪ್ರವೀಣ್ ಶೆಟ್ಟಿ ಮತ್ತು ಹರೀಶ್ ಶೇರಿಗಾರ್ ಅವರು ಭರವಸೆ ನೀಡಿದರು. ಅದೇ ರೀತಿ ತಾಯ್ನಾಡಿನಲ್ಲಿ ಬೇಕಾದ ಎಲ್ಲಾ ಕಾನೂನಾತ್ಮಕ ಕೆಲಸಕ್ಕೆ ನ್ಯಾಯವಾದಿ ಉಲ್ಲಾಸ್ ಪಿಂಟೋ ಸಕ್ರಿಯವಾಗಿ ಸಹಕರಿಸಿದ್ದಾರೆ.
ಯಶವಂತ್ ಕುಟುಂಬದರೊಂದಿಗೆ ನಿರಂತರ ಸಂಪರ್ಕದಲ್ಲಿದ್ದ ಹಿದಾಯತ್ ಅವರು ಮೃತದೇಹ ರವಾನಿಸಲು ಉಂಟಾಗುವ ಖರ್ಚನ್ನು ಕನ್ನಡಿಗರ ತಂಡವೇ ಸಂಪೂರ್ಣವಾಗಿ ಭರಿಸಲಿದೆ ಎಂದು ಭರವಸೆ ನೀಡಿದ್ದರು.
ಅಬುದಾಬಿಯಲ್ಲಿದ್ದ ಮೃತದೇಹ ದುಬೈ ಮೂಲಕ ತಾಯ್ನಾಡಿಗೆ ತಲುಪಬೇಕೆಂದು ಅಂತಿಮವಾದಾಗ ದುಬೈನಲ್ಲಿ ಪೊಲೀಸ್ ಮತ್ತು ಇತರೆ ಪರವಾನಿಗೆ ಕೆಲಸವನ್ನು ಹಮೀದ್ ಸತ್ತಿ ಕಲ್ಲ್ ನಡೆಸಿಕೊಟ್ಟು ಪೂರ್ತಿಗೊಂಡ ಬಳಿಕ ಮೃತದೇಹದೊಂದಿಗೆ ಆ್ಯಂಬ್ಯುಲೆನ್ಸ್ ನಲ್ಲಿ ಸಿರಾಜ್ ಪರ್ಲಡ್ಕ ಅಬುಧಾಬಿಯಿಂದ ದುಬೈ ತಲುಪಿ ದುಬೈನಲ್ಲಿ ನವೀದ್ ಮಾಗುಂಡಿ, ದಯಾ ಕಿರೋಡಿಯನ್, ಇಮ್ರಾನ್ ಖಾನ್, ಯಶವಂತ್ ಕರ್ಕೇರಾ ಅವರು ಜೊತೆಗೂಡಿ ವಿಮಾನದಲ್ಲಿ ರವಾನಿಸುವ ಅಂತಿಮ ಕೆಲಸದಲ್ಲಿ ಪಾಲ್ಗೊಂಡು ಸಹಕರಿಸಿದರು.

ಅವರೆಲ್ಲರ ಮಾನವೀಯತೆಯಿಂದ ಇಂದು ಯಶವಂತ ಪೂಜಾರಿ ಮೃತದೇಹ ತಾಯ್ನಾಡಿಗೆ ಮರಳಿದೆ. ಅಲ್ಲದೆ, ಅವರ ಕುಟುಂಬಸ್ಥರಿಗೆ ಕೊನೆಯ ಬಾರಿ ಮಗನ ಮುಖ ನೋಡುವ ಅವಕಾಶ ಸಿಕ್ಕಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.