ನವದೆಹಲಿ: ಪ್ರತಿಷ್ಠಿತ ಭೋಪಾಲ್ ಲೋಕಸಭಾ ಕ್ಷೇತ್ರದಿಂದ ಬಿಜೆಪಿ, ತನ್ನ ಅಭ್ಯರ್ಥಿಯಾಗಿ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ಅವರನ್ನು ಕಣಕ್ಕಿಳಿಸಿ ಅಚ್ಚರಿ ಮೂಡಿಸಿದೆ.
ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ದೊರೆಯುತ್ತಿದ್ದಂತೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್, ನಾನು ಸ್ಥಳೀಯ ಮಹಿಳೆಯಾಗಿದ್ದೇನೆ. ಈ ಪ್ರದೇಶದ ಜನರ ಸಮಸ್ಯೆಗಳ ಪರಿಹಾರಕ್ಕೆ ಉತ್ತಮವಾಗಿ ಸ್ಪಂದಿಸಬಲ್ಲೆ ಎಂದರು.
-
Sadhvi Pragya Singh Thakur, BJP on her candidature from Bhopal, MP in #LokSabhaElections2019 : Hum tayar hain, ab ussi karya mein lag gayi hun. pic.twitter.com/16PE5OcVSG
— ANI (@ANI) April 17, 2019 " class="align-text-top noRightClick twitterSection" data="
">Sadhvi Pragya Singh Thakur, BJP on her candidature from Bhopal, MP in #LokSabhaElections2019 : Hum tayar hain, ab ussi karya mein lag gayi hun. pic.twitter.com/16PE5OcVSG
— ANI (@ANI) April 17, 2019Sadhvi Pragya Singh Thakur, BJP on her candidature from Bhopal, MP in #LokSabhaElections2019 : Hum tayar hain, ab ussi karya mein lag gayi hun. pic.twitter.com/16PE5OcVSG
— ANI (@ANI) April 17, 2019
ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ಹೆಸರು ಮಾಲೇಗಾಂವ್ ಸ್ಫೋಟ ಪ್ರಕರಣದಲ್ಲಿ ಪ್ರಮುಖವಾಗಿ ಕೇಳಿಬಂದಿತ್ತು. ಪ್ರಸ್ತುತ ಈ ಕೇಸ್‌ನ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಸದ್ಯ ಸಾಧ್ವಿ ಜಾಮೀನು ಪಡೆದು ಹೊರಬಂದಿದ್ದಾರೆ.
ಕಾಂಗ್ರೆಸ್ ಪಕ್ಷ ಭೋಪಾಲ್ ಕ್ಷೇತ್ರದಿಂದ ದಿಗ್ವಿಜಯ ಸಿಂಗ್ರನ್ನು ಕಣಕ್ಕಿಳಿಸಿದ್ದು, ಇದೀಗ ಈ ಇಬ್ಬರ ಮಧ್ಯೆ ಪ್ರಬಲ ಪೈಪೋಟಿ ನಿರೀಕ್ಷಿಸಲಾಗಿದೆ.