ETV Bharat / briefs

ಲಾಕ್​ಡೌನ್​: ಮನೆ ಬಾಗಿಲಿಗೆ ಪಡಿತರ ತಲುಪಿಸುತ್ತಿರುವ ಮಾಣಿ ಗ್ರಾಮ ಪಂಚಾಯತ್​

ಮಾಣಿ ಗ್ರಾಮ ಪಂಚಾಯತ್​ ಆಟೋ ಮೂಲಕ ಮನೆ ಬಾಗಿಲಿಗೆ ರೇಷನ್​ ತಲುಪಿಸುತ್ತಿದೆ. ಈ ಕೆಲಸದಿಂದ ಕೊರೊನಾ ನಿಯಮ ಪಾಲನೆಯಲ್ಲದೆ, ಸೋಂಕು ಹರಡದಂತೆ ಕೂಡ ತಡೆಗಟ್ಟಬಹುದು.

maani GP
maani GP
author img

By

Published : May 19, 2021, 3:20 PM IST

Updated : May 19, 2021, 7:44 PM IST

ಬಂಟ್ವಾಳ: ಪಡಿತರ ವಿತರಣೆ ಸಂದರ್ಭ ಕೊರೊನಾ ನಿಯಮ ಉಲ್ಲಂಘನೆಯಾಗದಂತೆ ಪಾಲನೆ ಮಾಡುವುದು ಕಷ್ಟ. ಹೀಗಾಗಿ ತಾಲೂಕಿನ ಮಾಣಿ ಗ್ರಾಮ ಪಂಚಾಯತ್​ ಆಟೋ ಮೂಲಕ ಮನೆ ಬಾಗಿಲಿಗೆ ರೇಷನ್​ ತಲುಪಿಸುತ್ತಿದೆ.

ಮಾಣಿ ಗ್ರಾಮ ಪಂಚಾಯತ್​ ಅಧ್ಯಕ್ಷ ಬಾಲಕೃಷ್ಣ ಆಳ್ವ, ಸದಸ್ಯರಾದ ಸುದೀಪ್ ಕುಮಾರ್ ಶೆಟ್ಟಿ, ಇಬ್ರಾಹಿಂ ಕೆ. ಮಾಣಿ, ಮೆಲ್ವಿನ್ ಕಿಶೋರ್ ಮಾರ್ಟಿಸ್ ಜತೆಗೂಡಿ ಈ ಕಾರ್ಯವನ್ನು ನಡೆಸುತ್ತಿದ್ದಾರೆ.

ಈ ಬಗ್ಗೆ ಮಾತನಾಡಿದ ಬಾಲಕೃಷ್ಣ ಆಳ್ವ ಅವರು, ಸರ್ಕಾರದ ನಿರ್ದೇಶನದಂತೆ ಪಂಚಾಯತ್​ ಮಟ್ಟದಲ್ಲಿ ಕೋವಿಡ್ ಟಾಸ್ಕ್ ಫೋರ್ಸ್ ರಚಿಸಿ ತುರ್ತು ಸಭೆಗಳನ್ನು ನಡೆಸಿದ್ದೇವೆ. ಶಾಸಕರು, ತಹಶೀಲ್ದಾರ್, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಉಪಸ್ಥಿತಿಯಲ್ಲಿ ಸಭೆ ನಡೆಸಲಾಗಿದೆ. ಗ್ರಾಮದಲ್ಲಿ ಕೋವಿಡ್ ಸಮಸ್ಯೆಗಳಿಗೆ ಸ್ಪಂದಿಸುವ ದೃಷ್ಟಿಯಿಂದ ಕಾರ್ಯೋನ್ಮುಖವಾಗುತ್ತಿದೆ. ಪಂಚಾಯತ್​ ಅನುದಾನ ಬಳಸಿ ಆಕ್ಸಿನೇಟರ್, ಸ್ಯಾನಿಟೈಸರ್, ಮಾಸ್ಕ್​ಗಳನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನೀಡಿದ್ದೇವೆ ಎಂದು ತಿಳಿಸಿದರು.

ಲಾಕ್​ಡೌನ್​: ಮನೆ ಬಾಗಿಲಿಗೆ ಪಡಿತರ ತಲುಪಿಸುತ್ತಿರುವ ಮಾಣಿ ಗ್ರಾಮ ಪಂಚಾಯತ್​

ವೈದ್ಯಾಧಿಕಾರಿ, ಸಿಬ್ಬಂದಿ ಸಹಕಾರದಿಂದ ಕೋವಿಡ್ ಹರಡದಂತೆ ಕೆಲಸ ನಿರ್ವಹಿಸುತ್ತಿದ್ದೇವೆ. ಗ್ರಾಮ ಪಂಚಾಯತ್​ ನಿಧಿಯಿಂದ ಸದಸ್ಯರ ಸಹಕಾರದೊಂದಿಗೆ ನ್ಯಾಯಬೆಲೆ ಅಂಗಡಿಯಿಂದ ಮನೆ ಮನೆಗೆ ರೇಷನ್​ ಸಾಗಿಸಲು ಆಟೋ ವ್ಯವಸ್ಥೆ ಮಾಡಲಾಗಿದೆ. ಇದು ಉಚಿತವಾಗಿ ಸಾರ್ವಜನಿಕರಿಗೆ ಲಭ್ಯವಾಗುತ್ತಿದೆ. ಇದರಿಂದ ಸಾರ್ವಜನಿಕರಿಗೆ ತುಂಬಾ ಪ್ರಯೋಜನಕಾರಿಯಾಗುತ್ತಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೂ ತುರ್ತು ಅಗತ್ಯಕ್ಕಾಗಿ ಗ್ರಾಮದಲ್ಲಿ ಸಂಚರಿಸಲು ವಾಹನ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.

Last Updated : May 19, 2021, 7:44 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.