ETV Bharat / briefs

ಸೋಂಕಿತರ ಜೊತೆ ತಂಗಲು ಅವಕಾಶ ನೀಡಿ: ರೋಗಿಗಳ ಸಂಬಂಧಿಕರಿಂದ ಡಿಸಿ ಕಚೇರಿಗೆ ಮುತ್ತಿಗೆ

ಮೆಗ್ಗಾನ್ ಆಸ್ಪತ್ರೆಯಲ್ಲಿ ನಮ್ಮ ಸೋಂಕಿತರೊಂದಿಗೆ ಇರಲು ಅವಕಾಶ ನೀಡುತ್ತಿಲ್ಲ. ನಾವು ಆಸ್ಪತ್ರೆಯವರು ಹೇಳಿದಂತೆ ಪಿಪಿಇ ಕಿಟ್ ಹಾಕಿಕೊಂಡೆ ಇರುತ್ತೇವೆ. ನಮಗೆ ಅವರ ಜೊತೆ ಇರಲು ಅವಕಾಶ ನೀಡಿ ಎಂದು ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿಗೆ ಸೋಂಕಿತರ ಸಂಬಂಧಿಗಳು ಮುತ್ತಿಗೆ ಹಾಕಿದ್ದಾರೆ.

Shivamogga
Shivamogga
author img

By

Published : Jun 15, 2021, 9:22 PM IST

Updated : Jun 15, 2021, 9:49 PM IST

ಶಿವಮೊಗ್ಗ: ಮೆಗ್ಗಾನ್ ಕೋವಿಡ್ ಆಸ್ಪತ್ರೆಯಲ್ಲಿ ಸೋಂಕಿತರ ಜೊತೆ ಸಂಬಂಧಿಕರಿಗೆ ತಂಗಲು ಅವಕಾಶ ನೀಡಬೇಕೆಂದು ಒತ್ತಾಯಿಸಿ ಸೋಂಕಿತರ ಸಂಬಂಧಿಕರು ಡಿಸಿ ಕಚೇರಿಗೆ ಮುತ್ತಿಗೆ ಹಾಕಿದರು. ಇಂದು ಜಿಲ್ಲಾಧಿಕಾರಿಗಳ ಕಚೇರಿಗೆ ದಿಢೀರ್ ಆಗಿ 30ಕ್ಕೂ ಅಧಿಕ ಮಂದಿ ದಾಳಿ ನಡೆಸಿದರು.

ಸೋಂಕಿತರ ಜೊತೆ ತಂಗಲು ಅವಕಾಶ ನೀಡಿ: ರೋಗಿಗಳ ಸಂಬಂಧಿಕರಿಂದ ಡಿಸಿ ಕಚೇರಿಗೆ ಮುತ್ತಿಗೆ

ನಮಗೆ ಮೆಗ್ಗಾನ್ ಆಸ್ಪತ್ರೆಯಲ್ಲಿ ನಮ್ಮ ಸೋಂಕಿತರೊಂದಿಗೆ ಇರಲು ಅವಕಾಶ ನೀಡುತ್ತಿಲ್ಲ. ನಾವು ಆಸ್ಪತ್ರೆಯವರು ಹೇಳಿದಂತೆ ಪಿಪಿಇ ಕಿಟ್ ಹಾಕಿಕೊಂಡೆ ಇರುತ್ತೇವೆ. ನಮಗೆ ಅವರ ಜೊತೆ ಇರಲು ಅವಕಾಶ ನೀಡಿ ಎಂದು ಬೇಡಿಕೆ ಇಟ್ಟಿದ್ದಾರೆ.

ಸೋಂಕಿತರು ಎಲ್ಲರೂ ಒಂದೇ ತರಹ ಇರಲ್ಲ. ಕೆಲವರಿಗೆ ಇನ್ನೊಬ್ಬರ ಅವಶ್ಯಕತೆ ಇದ್ದೇ ಇರುತ್ತದೆ. ಆಸ್ಪತ್ರೆಯ ಸಿಬ್ಬಂದಿ ಎಲ್ಲರನ್ನು ನೋಡಲು ಸಾಧ್ಯವಾಗಲ್ಲ. ಇದರಿಂದ ಸೋಂಕಿತರ ಜೊತೆ ಇರಲು ಅವಕಾಶ ನೀಡಿ ಎಂಬ ಬೇಡಿಕೆ ಇಟ್ಟಿದ್ದರು. ಇದರಿಂದ ಡಿಸಿ ಶಿವಕುಮಾರ್​ ಅವರು ನಿಮ್ಮ ಬೇಡಿಕೆಯನ್ನು ‌ಆಸ್ಪತ್ರೆಯವರು ಬಗೆಹರಿಸುತ್ತಾರೆ ಎಂದು ಹೇಳಿ ಕಳುಹಿಸಿ ಕೊಟ್ಟಿದ್ದಾರೆ. ಆಸ್ಪತ್ರೆಯ ಮುಂದೆ ಬಂದು ಸೋಂಕಿತರ ಸಂಬಂಧಿಕರ ಜಮಾವಣೆಗೊಂಡಿದ್ದಾರೆ. ನಂತರ ಆಸ್ಪತ್ರೆಯವರು ಒಳಗೆ ಹೋಗಲು ಅವಕಾಶ ನೀಡಿದ್ದಾರೆ.

ಸೋಂಕಿತರ ಜೊತೆ ಇದ್ದವರು ಸೋಂಕು ಹರಡುವ ಮಾಧ್ಯಮವಾಗುತ್ತಾರೆ ಎಂದು ಆಸ್ಪತ್ರೆಯವರು ತಂಗಲು ಅವಕಾಶ ನೀಡಿರಲಿಲ್ಲ.

Last Updated : Jun 15, 2021, 9:49 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.