ETV Bharat / briefs

ಸ್ಟನ್ನಿಂಗ್ ಫೋಟೋ ಶೇರ್​ ಮಾಡಿದ ಕಂಗನಾ.. ಜಾವೇದ್ ಅಖ್ತರ್ ಬರೆದ ಸಾಲನ್ನು ನಟಿ ನೀಡಿದ್ದೇಕೆ? - ಜಾವೇದ್ ಅಖ್ತರ್ ಸಾಲನ್ನು ನೀಡಿ ಸ್ಟನ್ನಿಂಗ್ ಫೋಟೋ ಶೇರ್​ ಮಾಡಿದ ಕಂಗನಾ

ನಟಿ ಕಂಗನಾ ಅವರು ಖ್ಯಾತ ಗೀತರಚನೆಕಾರ, ಚಿತ್ರಕಥೆಗಾರ ಜಾವೇದ್ ಅಖ್ತರ್ ಅವರು ಬರೆದ ಪದಗಳ ಸಾಲನ್ನು ತನ್ನ ಫೋಟೋದೊಂದಿಗೆ ಹಂಚಿಕೊಂಡಿರುವುದು ಹಲವರ ಹುಬ್ಬೇರಿಸಿದೆ.

Kangana Ranaut
Kangana Ranaut
author img

By

Published : Apr 25, 2021, 7:41 PM IST

ಹೈದರಾಬಾದ್: ಬಾಲಿವುಡ್ ನಟಿ ಕಂಗನಾ ರಣಾವತ್ ತನ್ನ ಮುಂಬೈನ ನಿವಾಸದ ಬಾಲ್ಕನಿಯಲ್ಲಿ ಕ್ಲಿಕ್ ಮಾಡಿದ ಸುಂದರವಾದ ಛಾಯಾಚಿತ್ರಗಳೊಂದಿಗೆ ತಮ್ಮ ಭಾನುವಾರದ ಲುಕ್​ಅನ್ನು ಹಂಚಿಕೊಂಡಿದ್ದಾರೆ.

ಆದ್ರೆ ಇಲ್ಲಿ ಆಶ್ಚರ್ಯಕರ ಸಂಗತಿಯೊಂದು ಸದ್ಯ ಟಾಕ್​ ಆಫ್​ ದಿ ಟೌನ್​ ಆಗಿದೆ. ಏನಂತೀರಾ, ಕಂಗನಾ ಅವರು ಖ್ಯಾತ ಗೀತರಚನೆಕಾರ, ಚಿತ್ರಕಥೆಗಾರ ಜಾವೇದ್ ಅಖ್ತರ್ ಬರೆದ ಪದಗಳ ಸಾಲನ್ನು ತನ್ನ ಫೋಟೋದೊಂದಿಗೆ ಹಂಚಿಕೊಂಡಿರುವುದು ಹಲವರ ಹುಬ್ಬೇರಿಸಿದೆ.

ಇಂದು ಮುಂಜಾನೆ, ಕಂಗನಾ ತನ್ನ ಸೋಷಿಯಲ್ ಮೀಡಿಯಾದಲ್ಲಿ ಚಿತ್ರಗಳ ಸರಮಾಲೆಯನ್ನೇ ಹಂಚಿಕೊಂಡಿದ್ದಾಳೆ. ಅದರಲ್ಲಿ ತನ್ನ ಬಾಲ್ಕನಿಯಲ್ಲಿ ವಿಶ್ರಾಂತಿ ಪಡೆಯುತ್ತಿರುವುದು ಕಂಡುಬರುತ್ತದೆ. ಬಿಳಿ ಬಣ್ಣದ ಬ್ರೀಜಿ ಉಡುಪಿನಲ್ಲಿರುವ ಸ್ಟನ್ನಿಂಗ್ ಫೋಟೋ ಶೇರ್​ ಮಾಡಿದ್ದು, ಅದನ್ನು ಇನ್ಸ್​ಟಾಗ್ರಾಂನಲ್ಲಿ 4 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಣೆ ಮಾಡಿದ್ದಾರೆ. ಕಂಗನಾ ಅಭಿಮಾನಿಗಳು ಪೋಸ್ಟ್​ಗೆ ಪ್ರೀತಿಯ ಮಳೆಯನ್ನೇ ಸುರಿಯುತ್ತಿದ್ದಾರೆ. ಆದ್ರೆ ನಟ ಜಾವೇದ್ ಅಖ್ತರ್ ಬರೆದ ಕವಿತೆಯೊಂದಿಗೆ ಈ ಪೋಸ್ಟ್ ಮಾಡಿರುವುದು ಕಹಾನಿ ಮೇ ಟ್ವಿಸ್ಟ್ ಅನ್ನೋತರ ಇದೆ.

ಈ ಹಿಂದೆ ಟಿವಿ ಸಂದರ್ಶನದ ಸಂದರ್ಭದಲ್ಲಿ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿಗೆ ಸಂಬಂಧಿಸಿದಂತೆ ಜಾವೇದ್​ ವಿರುದ್ಧ ಕಂಗನಾ ಆರೋಪಗಳ ಸುರಿಮಳೆ ಗೈದಿದ್ದರು. ಆದ್ರೆ ಈಗ ಅಖ್ತರ್ ಅವರಿಂದ ಪದಗಳನ್ನು ಎರವಲು ಪಡೆದಿರುವುದು ಅನೇಕರಿಗೆ ಆಶ್ಚರ್ಯವನ್ನುಂಟು ಮಾಡಿದೆ.

ಕಾರ್ಯದ ವಿಚಾರವಾಗಿ ನೋಡುವುದಾದರೆ ದೇಶದಲ್ಲಿ ಕೊರೊನಾ ಎರಡನೇ ಅಲೆಯ ಮಧ್ಯೆ ಕಂಗನಾ ಅವರ ಚಿತ್ರ 'ತಲೈವಿ' ಬಿಡುಗಡೆಯನ್ನು ಮುಂದೂಡಲಾಗಿದೆ.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.