ಬೆಲ್ಫಾಸ್ಟ್(ಐರ್ಲೆಂಡ್): ಕಳೆದರಡು ವರ್ಷಗಳಿಂದ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಮಿಂಚುತ್ತಿರುವ ಅಫ್ಘಾನಿಸ್ತಾನ ತಂಡಕ್ಕೆ ಐರ್ಲೆಂಡ್ 72 ರನ್ಗಳ ಸೋಲುಣಿಸುವ ಮೂಲಕ ವಿಶ್ವಕಪ್ಗೆ ಆಯ್ಕೆಯಾಗಿರುವ ಅಫ್ಘನ್ನರಿಗೆ ಶಾಕ್ ನೀಡಿದ್ದಾರೆ.
ನಿನ್ನೆ ನಡೆದ ದ್ವಿಪಕ್ಷೀಯ ಸರಣಿಯ ಮೊದಲ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಐರ್ಲೆಂಡ್ 210 ರನ್ಗಳಿಸಿತ್ತು. ಆಲ್ರೌಂಡರ್ ಪಾಲ್ ಸ್ಟರ್ಲಿಂಗ್ 71 ರನ್ ಹಾಗೂ ನಾಯಕ ವಿಲಿಯಂ ಪೋರ್ಟ್ಫೀಲ್ಡ್ 53 ಹಾಗೂ ಕೆವಿನ್ ಒ ಬ್ರಿಯಾನ್ 32 ರನ್ಗಳಿಸಿದರು. ಆಫ್ಘಾನ್ ಪರ ರಶೀದ್ 2, ದವ್ಲಾತ್ ಜಾರ್ಡನ್ 3, ಅಫ್ಟಾಬ್ ಆಲಂ 3 ವಿಕೆಟ್ ಪಡೆದರು.
211 ರನ್ಗಳ ಗುರಿ ಬೆನ್ನಿತ್ತಿದ ಅಫ್ಘನ್ನರು ಐರ್ಲೆಂಡ್ ಬೌಲಿಂಗ್ದಾಳಿಗೆ ಸಿಲುಕಿ ಕೇವಲ 138 ರನ್ಗಳಿಗೆ ಆಲೌಟ್ ಆಗಿ 72 ರನ್ಗಳ ಹೀನಾಯ ಸೋಲನುಭವಿಸಿದರು. ನಬಿ 20, ಅಸ್ಘರ್ ಅಫ್ಘನ್ 29, ನೈಬ್ 20 ರನ್ಗಳಿಸಿದ್ದು ಬಿಟ್ಟರೆ ತಂಡದ ದಾಂಡಿಗರು ಐರಿಸ್ ಬೌಲರ್ಗಳನ್ನು ಎದುರಿಸಲು ವಿಫಲರಾದರು.
ಮಾರಕ ಬೌಲಿಂಗ್ ದಾಳಿ ನಡೆಸಿದ ಮಾರ್ಕ್ ಅದಿರ್ 4, ಟಿಮ್ ಮರ್ಟ್ಯಾಗ್ 2, ರಂಕಿನ್ 3 ಹಾಗೂ ಕೆವಿನ್ ಒ ಬ್ರಿಯಾನ್ ಒಂದು ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ವಿಶ್ವಕಪ್ನಲ್ಲಿ ಬಲಿಷ್ಠ ತಂಡಗಳಿಗೆ ಸೋಲುಣಿಸಿ ಶಾಕ್ ನೀಡುವ ಹಂಬಲದಲ್ಲಿದ್ದ ಅಫ್ಘಾನಿಸ್ತಾನ ತಂಡಕ್ಕೆ ಐರ್ಲೆಂಡ್ ತಂಡ 72 ರನ್ಗಳಿಂದ ಮಣಿಸಿ ವಿಶ್ವಕಪ್ಗೂ ಮುನ್ನ ಅಫ್ಘಾನ್ ತಂಡದ ಆತ್ಮವಿಶ್ವಾಸಕ್ಕೆ ದಕ್ಕೆ ಉಂಟುಮಾಡಿದೆ. ಎರಡನೇ ಹಾಗೂ ಕೊನೆಯ ಪಂದ್ಯ ನಾಳೆ ಇದೇ ಕ್ರೀಡಾಂಗಣದಲ್ಲಿ ನಡೆದಯಲಿದೆ.