ಚೆನ್ನೈ: ಸಾಮಾನ್ಯವಾಗಿ ಪರೀಕ್ಷೆಯಲ್ಲಿ ಪುಸ್ತಕದಲ್ಲಿರುವ ವಿಚಾರವನ್ನೇ ಕೊಂಚ ಟ್ವಿಸ್ಟ್ ಮಾಡಿ ಕೇಳಲಾಗುತ್ತದೆ. ಸಿಲಬಸ್ ಹೊರತಾದ ಪ್ರಶ್ನೆಗಳು ವಿದ್ಯಾರ್ಥಿಗಳನ್ನು ಅರೆಕ್ಷಣ ದಂಗಾಗುವಂತೆ ಮಾಡುತ್ತದೆ. ಅಂತಹ ದಂಗಾಗುವ ಪ್ರಶ್ನೆಯೊಂದು ಇಲ್ಲಿದೆ.
ಇಂದು ಐಐಟಿ ಮದ್ರಾಸ್ನಲ್ಲಿ ಮೆಟೀರಿಯಲ್ ಮತ್ತು ಎನರ್ಜಿ ಸೈನ್ಸ್ ವಿಷಯದ ಪರೀಕ್ಷೆ ನಡೆದಿತ್ತು. ನಲ್ವತ್ತು ಮಾರ್ಕಿನ ಪ್ರಶ್ನೆ ಪತ್ರಿಕೆಯಲ್ಲಿ ಐದು ಅಂಕದ ಅದೊಂದು ಪ್ರಶ್ನೆ ಸಾಕಷ್ಟು ಗಮನ ಸೆಳೆದಿತ್ತು.
ಐದು ಅಂಕದ ಆ ಪ್ರಶ್ನೆ ಹೀಗಿದೆ:
ಹಗಲು-ರಾತ್ರಿಯ ಕ್ರಿಕೆಟ್ ಪಂದ್ಯದಲ್ಲಿ ಇಬ್ಬನಿ ಬಹುಮುಖ್ಯ ಪಾತ್ರ ವಹಿಸುತ್ತದೆ. ಹೆಚ್ಚಿನ ಪ್ರಮಾಣದ ಇಬ್ಬನಿಯಿಂದ ಚೆಂಡು ಒದ್ದೆಯಾಗುತ್ತದೆ. ಪರಿಣಾಮ ಸ್ಪಿನ್ನರ್ಗಳಿಗೆ ಚೆಂಡಿನ ಮೇಲೆ ಹಿಡಿತ ಸಾಧಿಸುವುದು ಸವಾಲಿನ ಕೆಲಸವಾಗುತ್ತದೆ. ಅದೇ ರೀತಿ ವೇಗದ ಬೌಲರ್ಗಳಿಗೆ ಲೈನ್ ಹಾಗೂ ಲೆಂತ್ನಲ್ಲಿ ಬೌಲಿಂಗ್ ಮಾಡುವುದು ಕಷ್ಟವಾಗುತ್ತದೆ. ಇದು ಸಹಜವಾಗಿಯೇ ಫೀಲ್ಡಿಂಗ್ ಮಾಡುವ ತಂಡಕ್ಕೆ ಅನಾನುಕೂಲವಾಗಿ ಪರಿಣಮಿಸುತ್ತದೆ. ಈ ಬಾರಿಯ ಐಪಿಎಲ್ನಲ್ಲಿ ಮೊದಲ ಕ್ವಾಲಿಫೈಯರ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಚೆನ್ನೈನ ಚೆಪಾಕ್ ಮೈದಾನದಲ್ಲಿ ಮೇ 7ರಂದು ಆಡಲಿದೆ. ಮೇ 7ರ ಹವಾಮಾನದ ಪ್ರಕಾರ ಪಂದ್ಯ ಆರಂಭದ ಸಮಯದಲ್ಲಿ ಉಷ್ಣಾಂಶ 39 ಡಿಗ್ರಿ ಸೆಲ್ಸಿಯಸ್ ಇದ್ದರೆ ಎರಡನೇ ಇನ್ನಿಂಗ್ಸ್ ಆರಂಭದಲ್ಲಿ 27 ಡಿಗ್ರಿ ಸೆಲ್ಸಿಯಸ್ಗೆ ಕುಸಿಯಲಿದೆ. ಈ ಮಾಹಿತಿಯ ಪ್ರಕಾರ, ಒಂದು ವೇಳೆ ಎಂ.ಎಸ್.ಧೋನಿ ಟಾಸ್ ಗೆದ್ದರೆ ನೀವು ಬೌಲಿಂಗ್ ಆಯ್ದುಕೊಳ್ಳುವಂತೆ ಸಲಹೆ ನೀಡುತ್ತೀರಾ ಅಥವಾ ಬ್ಯಾಟಿಂಗ್ ಮಾಡುವಂತೆ ಸಲಹೆ ನೀಡುತ್ತೀರಾ..? ಗಮನಿಸಿ: ಖಚಿತ ಸಮರ್ಥನೆ ಇಲ್ಲದ ಉತ್ತರ ಅಂಕಗಳು ದೊರೆಯುವುದಿಲ್ಲ.
-
Shout out to Professor Vignesh at @iitmadras for making exams relevant to important, real-life issues!
— ICC (@ICC) 6 May 2019 " class="align-text-top noRightClick twitterSection" data="
Can anyone help @msdhoni and @ChennaiIPL make a decision before the toss tomorrow? (and show your workings 😜) pic.twitter.com/8fp7rGI5BG
">Shout out to Professor Vignesh at @iitmadras for making exams relevant to important, real-life issues!
— ICC (@ICC) 6 May 2019
Can anyone help @msdhoni and @ChennaiIPL make a decision before the toss tomorrow? (and show your workings 😜) pic.twitter.com/8fp7rGI5BGShout out to Professor Vignesh at @iitmadras for making exams relevant to important, real-life issues!
— ICC (@ICC) 6 May 2019
Can anyone help @msdhoni and @ChennaiIPL make a decision before the toss tomorrow? (and show your workings 😜) pic.twitter.com/8fp7rGI5BG
ಸದ್ಯ ಈ ಪ್ರಶ್ನೆ ಇಂಟರ್ನೆಟ್ನಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ. ವಿಶೇಷವೆಂದರೆ ಐಸಿಸಿ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪ್ರಶ್ನೆಯ ಫೋಟೋವನ್ನು ಪೋಸ್ಟ್ ಮಾಡಿ, ಯಾರಾದರೂ ಧೋನಿ ಹಾಗೂ ಸಿಎಸ್ಕೆ ತಂಡಕ್ಕೆ ಸಹಾಯ ಮಾಡುವಿರಾ ಎಂದು ಫನ್ನಿಯಾಗಿ ಕೇಳಿದೆ.