ಬೀದರ್: ಚುನಾವಣೆ ನಿಮಿತ್ತ ಜನಪ್ರತಿನಿಧಿಗಳು ಬ್ಯುಸಿಯಾಗಿದ್ದಾರೆ. ಭಯಂಕರ ಬರ ನಿರ್ವಹಣೆ ಹಾಗೂ ಚುನಾವಣೆ ಕರ್ತವ್ಯದಲ್ಲಿ ಅಧಿಕಾರಿಗಳು ನಿರತರಾಗಿದ್ದಾರೆ. ಇದೇ ಸಮಯ ಬಳಸಿಕೊಂಡ ಖದೀಮರ ಗ್ಯಾಂಗ್, ಇಲ್ಲಿನ ಮಾಂಜ್ರಾ ನದಿಯಲ್ಲಿ ಅಕ್ರಮ ಮರಳು ಸಾಗಾಟ ದಂಧೆಯನ್ನು ಜೋರಾಗಿ ಮಾಡಿಕೊಂಡಿದ್ದಾರೆ.
ಜಿಲ್ಲೆಯ ಕೌಠಾ, ಹಿಪ್ಪಳಗಾಂವ್, ಇಸ್ಲಾಂಪೂರ್, ಬಾಬಳಿ, ಮಣಿಗೆಂಪೂರ್, ಹೆಡಗಾಪೂರ್, ನಿಡೊದಾ, ನಿಟ್ಟೂರ್, ಹಾಲಹಳ್ಳಿ, ಸಂಗಮ, ಖೇಡ, ಕಳಗಾಪೂರ್, ಸೊನಾಳ, ಲಖನಗಾಂವ್, ಮೆಹಕರ ಸೇರಿದಂತೆ ಹಲವು ಗ್ರಾಮಗಳ ಪಕ್ಕದಲ್ಲಿ ಮಾಂಜ್ರಾ ನದಿಯಲ್ಲಿ ನೂರಾರು ಟ್ರಾಕ್ಟರ್ಗಳು, ಜೆಸಿಬಿಗಳ ಮೂಲಕ ಹಗಲು-ರಾತ್ರಿ ಎನ್ನದೆ ಮರಳು ಸಾಗಾಟ ಅವ್ಯಾಹತವಾಗಿ ನಡೆಯುತ್ತಿದೆ. ಬತ್ತಿ ಹೊದ ನದಿ ಹೆದ್ದಾರಿಯಂತಾಗಿ ಟ್ರಾಕ್ಟರ್ಗಳ ಓಡಾಟದಿಂದ ರಸ್ತೆಯೇ ನಿರ್ಮಾಣವಾಗಿದೆ. ಇಷ್ಟೊಂದು ಭಾರಿ ಮಟ್ಟದಲ್ಲಿ ಅಕ್ರಮ ನಡೆಯುತ್ತಿರುವುದಕ್ಕೆ ಅಧಿಕಾರಿಗಳು ಚುನಾವಣೆ ಹಾಗೂ ಬರ ನಿರ್ವಹಣೆಯಲ್ಲಿ ನಿರತರಗಿರುವುದೇ ಕಾರಣ ಎನ್ನಲಾಗ್ತಿದೆ.
ಕಂದಾಯ ಅಧಿಕಾರಿಗಳು, ಪೊಲೀಸರು ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಿಬ್ಬಂದಿ ಇಲ್ಲಿ ನಡೆಯುತ್ತಿರುವ ಅಕ್ರಮಕ್ಕೆ ಬ್ರೇಕ್ ಹಾಕಲು ಮುಂದಾಗುವ ಅಗತ್ಯವಿದೆ. ಭೂ ತಾಯಿಯ ಒಡಲನ್ನು ಕೊಳ್ಳೆ ಹೊಡೆಯುವ ದಂಧೆಕೊರರನ್ನು ತಡೆಯುವ ಅಗತ್ಯವಿದೆ.