ETV Bharat / briefs

ನಾಯ್ಡು ಮಾಡಿರುವ ತಪ್ಪಿಗೆ ದೇವರಿಂದ ಶಿಕ್ಷೆ: ಜಗನ್​​ಮೋಹನ್ ​ರೆಡ್ಡಿ ವಾಗ್ದಾಳಿ - ದೇವರಿಂದ ಶಿಕ್ಷೆ

ಲೋಕಸಭಾ ಚುನಾವಣೆ ಜತೆ ನಡೆದ ಆಂಧ್ರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ವೈಎಸ್​ಆರ್​ ಕಾಂಗ್ರೆಸ್​ ಅಭೂತಪೂರ್ವ ಗೆಲುವು ದಾಖಲಿಸಿದ್ದು, ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷದ ಜಗನ್ ​ಮೋಹನ್ ​ರೆಡ್ಡಿ ನೂತನ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡಲು ಸಜ್ಜಾಗಿದ್ದಾರೆ.

ವೈಎಸ್ಆರ್​​ ಜಗನ್ ಮೋಹನ್ ರೆಡ್ಡಿ
author img

By

Published : May 25, 2019, 6:13 PM IST

ಅಮರಾವತಿ: ಲೋಕಸಭಾ ಚುನಾವಣೆ ಜೊತೆಜೊತೆಗೆ ಆಂಧ್ರಪ್ರದೇಶದಲ್ಲಿ ನಡೆದಿದ್ದ ವಿಧಾನಸಭಾ ಚುನಾವಣೆಯಲ್ಲಿ ವೈಎಸ್​ಆರ್​ ಕಾಂಗ್ರೆಸ್​ ಭರ್ಜರಿ ಗೆಲುವು ದಾಖಲು ಮಾಡಿದ್ದು, ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ​ ಜಗನ್ ಮೋಹನ್ ರೆಡ್ಡಿ ಸಿದ್ದರಾಗಿದ್ದಾರೆ.

ಶಾಸಕಾಂಗ ಪಕ್ಷದ ನಾಯಕನಾಗಿ ಒಮ್ಮತದಿಂದ ಆಯ್ಕೆಯಾದ ಬಳಿಕ ಅವರು ಮಾತನಾಡಿದರು. 2014ರಲ್ಲಿ ನಡೆದಿದ್ದ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಪಕ್ಷದ 23 ಶಾಸಕರನ್ನು ಚಂದ್ರಬಾಬು ನಾಯ್ಡು ಖರೀದಿಸಿದ್ದರು. ಇದೀಗ ಟಿಡಿಪಿ ಕೇವಲ 23 ಸ್ಥಾನಗಳನ್ನು ಪಡೆದುಕೊಂಡಿದೆ. ಅವರು ಮಾಡಿರುವ ತಪ್ಪಿಗೆ ದೇವರೇ ಶಿಕ್ಷೆ ನೀಡಿದ್ದಾನೆ ಎಂದು ಅವರು ಹೇಳಿದರು. ಇದೇ ವೇಳೆ ತಾವು ಉತ್ತಮ ಆಡಳಿತ ನೀಡುವುದಾಗಿಯೂ ರಾಜ್ಯದ ಜನರಿಗೆ ಭರವಸೆ ನೀಡಿದ್ದು, ಮುಂದಿನ ಒಂದೇ ವರ್ಷದಲ್ಲಿ ಜನರಿಂದ ಉತ್ತಮ ಸಿಎಂ ಎಂಬ ಬಿರುದು ಪಡೆದುಕೊಳ್ಳುವುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

175 ವಿಧಾನಸಭಾ ಕ್ಷೇತ್ರಗಳ ಪೈಕಿ ವೈಎಸ್​ಆರ್​ ಕಾಂಗ್ರೆಸ್​ 151 ಕ್ಷೇತ್ರಗಳಲ್ಲಿ ಗೆಲುವು ಪಡೆದಿದ್ದು,ಸ್ವತಂತ್ರವಾಗಿ ಸರ್ಕಾರ ರಚನೆ ಮಾಡುವ ಉತ್ಸಾಹದಲ್ಲಿದೆ.

ಲೋಕಸಭೆ ಚುನಾವಣೆಯಲ್ಲೂ ಜಗನ್‌ ಪಕ್ಷ ಪ್ರಚಂಡ ಜಯಭೇರಿ ಬಾರಿಸಿದ್ದು, 25 ಕ್ಷೇತ್ರಗಳ ಪೈಕಿ 22 ಸ್ಥಾನಗಳನ್ನು ಗೆದ್ದುಕೊಂಡಿದೆ.

Intro:Body:

ಚಂದ್ರಬಾಬು ನಾಯ್ಡು ಮಾಡಿರುವ ತಪ್ಪುಗಳಿಗೆ ದೇವರಿಂದ ಶಿಕ್ಷೆ : ಜಗನ್​​ಮೋಹನ್ ​ರೆಡ್ಡಿ

ಅಮರಾವತಿ: ಲೋಕಸಭಾ ಚುನಾವಣೆ ಜತೆ ಆಂಧ್ರಪ್ರದೇಶದಲ್ಲಿ ನಡೆದಿದ್ದ ವಿಧಾನಸಭಾ ಚುನಾವಣೆಯಲ್ಲಿ ಜಗನ್​ಮೋಹನ್​ರೆಡ್ಡಿ ನೇತೃತ್ವದ ವೈಎಸ್​ಆರ್​ ಕಾಂಗ್ರೆಸ್​ ಭರ್ಜರಿ ಗೆಲುವು ದಾಖಲು ಮಾಡಿದ್ದು, ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ವೈಎಸ್ ಜಗನ್ ಮೋಹನ್ ರೆಡ್ಡಿ ಸಜ್ಜಾಗಿದ್ದಾರೆ. 

175 ವಿಧಾನಸಭಾ ಕ್ಷೇತ್ರಗಳ ಪೈಕಿ ವೈಎಸ್​ಆರ್​ ಕಾಂಗ್ರೆಸ್​ 151 ಕ್ಷೇತ್ರಗಳಲ್ಲಿ ಗೆಲುವು ದಾಖಲು ಮಾಡಿದ್ದು, ಸ್ವತಂತ್ರವಾಗಿ ಸರ್ಕಾರ ರಚನೆ ಮಾಡಲು ಸಜ್ಜಾಗಿದೆ. ಇಂದು ನಡೆದ ಶಾಸಕಾಂಗ ಸಭೆಯಲ್ಲಿ ಅವರನ್ನ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಲಾಗಿದ್ದು, ಈ ವೇಳೆ ಜಗನ್​ಮೋಹನ್ ರೆಡ್ಡಿ ಮಾತನಾಡಿದ್ದರು. 

2014ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ನಮ್ಮ ಪಕ್ಷದ 23 ಶಾಸಕರನ್ನು ಚಂದ್ರಬಾಬು ನಾಯ್ಡು ಖರೀದಿ ಮಾಡಿದ್ದರು. ಇದೀಗ ಟಿಡಿಪಿ ಕೇವಲ 23 ಸ್ಥಾನಗಳನ್ನ ಪಡೆದುಕೊಂಡಿದೆ. ಅವರು ಮಾಡಿರುವ ತಪ್ಪಿಗೆ ದೇವರೇ ಶಿಕ್ಷೆ ನೀಡಿದ್ದಾನೆಂದು ಹೇಳಿದ್ದಾರೆ. ಇದೇ ವೇಳೆ ತಾವು ಉತ್ತಮ ಆಡಳಿತ ನೀಡುವುದಾಗಿ ಭರವಸೆ ನೀಡಿದ್ದು, ಮುಂದಿನ ಒಂದೇ ವರ್ಷದಲ್ಲಿ ಜನರಿಂದ ಉತ್ತಮ ಸಿಎಂ ಎಂಬ ಬಿರುದು ಪಡೆದುಕೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ಇನ್ನು 25 ಲೋಕಸಭಾ ಚುನಾವಣಾ ಕ್ಷೇತ್ರಗಳಲ್ಲೂ ವೈಎಸ್​ಆರ್​ ಕಾಂಗ್ರೆಸ್​ 22 ಸ್ಥಾನ ಗೆದ್ದಿದೆ. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.