ETV Bharat / briefs

ಟಿ-20 ಕ್ರಿಕೆಟ್​ನಲ್ಲಿ 20 ಸಿಕ್ಸರ್​ಗಳ ಸಹಿತ 25 ಎಸೆತಗಳಲ್ಲಿ ಸೆಂಚುರಿ ಬಾರಿಸಿದ ಸ್ಕಾಟ್ಲೆಂಡ್​ ಆಟಗಾರ!

ಸ್ಕಾಟ್ಲೆಂಡ್​ನ ಆಲ್​ರೌಂಡರ್​ ಜಾರ್ಜ್​ ಮುನ್ಸೆ ಅನಧಿಕೃತ ಟಿ-20 ಕ್ರಿಕೆಟ್​ನಲ್ಲಿ ಕೇವಲ 25 ಎಸೆತಗಳಲ್ಲಿ ಶತಕ ಸಿಡಿಸಿದ್ದಲ್ಲದೇ 39 ಎಸೆತಗಳಲ್ಲಿ 147 ರನ್​ಗಳಿಸಿ ದಾಖಲೆ ಬರೆದಿದ್ದಾರೆ.

ಮುನಿಸೆ
author img

By

Published : Apr 24, 2019, 1:36 PM IST

ಹೈದರಾಬಾದ್​: ಸ್ಕಾಟ್ಲೆಂಡ್​ನ ಆಲ್​ರೌಂಡರ್​ ಜಾರ್ಜ್​ ಮುನ್ಸೆ ಇಂಗ್ಲೆಂಡ್​ನಲ್ಲಿ ನಡೆದ ನಡೆದ ಅನದಿಕೃತ ಟಿ -20 ಪಂದ್ಯದಲ್ಲಿ ಕೇವಲ 25 ಎಸೆತಗಳಲ್ಲಿ ಶತಕ ಸಿಡಿಸುವ ಮೂಲಕ ದಾಖಲೆ ನಿರ್ಮಿಸಿದ್ದಾರೆ.

ಗ್ಲೌಸೆಸ್ಟೆರ್​ಷೈರ್​ 2 ತಂಡದ ಪರ ಬ್ಯಾಟಿಂಗ್​ ನಡೆಸಿದ್ದ ಮುನ್ಸೆ ಬ್ಯಾತ್​ ಸಿಸಿ ತಂಡದ ವಿರುದ್ಧ 39 ಎಸೆತಗಳಲ್ಲಿ 147 ರನ್​ಗಳಿಸಿದ್ದಾರೆ. ಇವರ ಇನಿಂಗ್ಸ್​ನಲ್ಲಿ 5 ಬೌಂಡರಿ ಹಾಗೂ 20 ಸಿಕ್ಸರ್​ ಸಿಡಿಸಿದ್ದಾರೆ.

ಮುನ್ಸೆ ಪಾರ್ಟ್ನರ್​ ಜಿಪಿ ವಿಲೋವ್ಸ್​ ಕೂಡ 53 ಎಸೆತಗಳಲ್ಲಿ ಶತಕ ಸಿಡಿಸಿದರೆ, ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಟಾಮ್​ ಪ್ರಿಸ್​ 23 ಎಸೆತಗಳಲಗಲಿ 50 ರನ್​ಗಳಿಸಿದರು. ಈ ಮೂವರು ಆಟಗಾರರ ನೆರವಿನಿಂದ ಗ್ಲೌಸೆಸ್ಟೆರ್​ಷೈರ್ 2 ತಂಡ 20 ಓವರ್​ಗಳಲ್ಲಿ 326 ರನ್​ಗಳಿಸಿತು.

ಸ್ಕಾಂಟ್ಲೆಂಡ್​ನ ಬ್ಯಾಟ್ಸ್​ಮನ್​ ಒಂದೇ ಓವರ್​ನಲ್ಲಿ 6 ಸಿಕ್ಸರ್​ ಕೂಡ ಸಿಡಿಸಿದ್ದರು. ಈ ದಾಖಲೆಗೂ ಮೊದಲು ಸರ್ರೆ ತಂಡದ ವಿಲ್​ ಜಾಕ್ಸ್​ ಟಿ10ನ ಅಭ್ಯಾಸ ಪಂದ್ಯವೊಂದರಲ್ಲಿ ಲಾಂಕಷೈರ್​ ವಿರುದ್ಧ 25 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಇವರೂ ಕೂಡ 6 ಬಾಲಿಗೆ 6 ಸಿಕ್ಸರ್​ ಸಿಡಿಸಿದ್ದರು.

ಈ ಪಂದ್ಯಲ್ಲಿ ಗ್ಲೌಸೆಸ್ಟೆರ್​ಷೈರ್ 2 ತಂಡ 112 ರನ್​ಗಳಿಂದ ಜಯ ಸಾಧಿಸಿದೆ.

ಇನ್ನು ಅದಿಕೃತ ಟಿ-20 ಪಂದ್ಯದಲ್ಲಿ ನೋಡುವುದಾದರೆ, ವಿಂಡೀಸ್​ನ ಕ್ರೀಸ್​ ಗೇಲ್​ 30 ಎಸೆತಗಳಲ್ಲಿ ಶತಕ ಸಿಡಿಸಿದ ದಾಖಲೆ ಹೊಂದಿದ್ದಾರೆ. 2013 ರಲ್ಲಿ ಆರ್​ಸಿಬಿ ಪರ ಬ್ಯಾಟಿಂಗ್​ ನಡೆಸಿದ್ದ ಗೇಲ್​ ಪುಣೆ ವಿರುದ್ಧ 175 ರನ್​ಗಳಿಸಿದ್ದರು.

Intro:Body:

jh

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.