ಆನೇಕಲ್: ಫ್ಯಾಷನ್ ಲೋಕದಲ್ಲಿ ಕರ್ನಾಟಕದ ಹೆಸರು ಒಂದು ವಿಶಿಷ್ಟತೆಯನ್ನ ಗಳಿಸಿದೆ. ಹೀಗಾಗಿ ಮತ್ತೆ ಮಿಸ್ ಇಂಡಿಯಾ ಸ್ಪರ್ಧೆಗೆ ಯುವ ಪ್ರತಿಭೆಗಳನ್ನ ಹೆಕ್ಕಿ ತೆಗೆಯುವ ತಾಲೀಮು ನಗರದಲ್ಲಿ ನಡೆಯಿತು.
ಹೌದು, ಹೀಗೆ 56 ವಸಂತಗಳನ್ನ ಪೂರೈಸಿ ಇದೀಗ 57ನೇ ವರ್ಷದ ಮಿಸ್ ಇಂಡಿಯಾ ಸ್ಪರ್ಧೆಯನ್ನು ಆಯೋಜಿಸಲಾಗುತ್ತಿದೆ. ಫ್ಯಾಷನ್ ಬಿಗ್ ಬಜಾರ್, ಕಲರ್ಸ್ ಹಾಗೂ ಫೆಮಿನಾ ಪ್ರಾಯೋಜಕತ್ವದಲ್ಲಿ ವಿಶ್ವಸುಂದರಿ ಸ್ಪರ್ಧೆಗೆ ಆಯ್ಕೆ ನಡೆಯಿತು. ಎಲೆಕ್ಟ್ರಾನಿಕ್ ಸಿಟಿಯ ಹೋಟೆಲ್ ಒಟೆರಾದಲ್ಲಿ ದಕ್ಷಿಣ ಭಾರತದ 5 ರಾಜ್ಯಗಳಿಂದ ಒಬ್ಬರನ್ನು ಆಯ್ಕೆ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು.
ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಿಂದ ವಿಶ್ವ ಸುಂದರಿ ಸೆಮಿ ಫೈನಲ್ ಸ್ಫರ್ಧೆಗೆ 15 ಮಂದಿ ಸ್ಪರ್ಧಿಗಳು ಮಾರ್ಜಾಲ ನಡಿಗೆಯಲ್ಲಿ ಭಾಗವಹಿಸಿದ್ರು. ಮುಂದಿನ ವೇದಿಕೆಗೆ ಸ್ಪರ್ಧಿಗಳನ್ನು ಕಳಿಹಿಸಲು ದಕ್ಷಿಣ ಭಾರತದ ರಾಜ್ಯಗಳಿಂದ ತಲಾ ಒಬ್ಬರನ್ನು ಈ ವರ್ಣರಂಜಿತ ಕಾರ್ಯಕ್ರಮದಲ್ಲಿ ಆಯ್ಕೆ ಮಾಡಲಾಯಿತು.
ವಿಜೇತರಾದ ಐವರು ಸ್ಪರ್ದಿಗಳು:
ಕರ್ನಾಟಕ - ಆಶ್ನಾ ಬಿಸ್ತ್
ತಮಿಳುನಾಡು - ರುಬಿಯಾ ಎಸ್ಕೆ
ಕೇರಳ - ಜೇನ್ ಥಾಮ್ಪ್ ಸನ್
ತೆಲಂಗಾಣ - ಸಂಜನಾ ವಿಜ್
ಆಂಧ್ರಪ್ರದೇಶ್ - ನಿಖಿತಾ ತನ್ವಾನಿ
ದಕ್ಷಿಣ ಭಾರತದ ಈ ಐವರು ಸ್ಪರ್ಧಿಗಳು ಆಯ್ಕೆಗೊಂಡು ಜೂನ್ 15 ರಂದು ನಡೆಯಲಿರುವ ಎಫ್ಬಿಬಿ ಕಲರ್ಸ್ ಫೆಮಿನಾ ಮಿಸ್ ಇಂಡಿಯಾ ಗ್ರ್ಯಾಂಡ್ ಫಿನಾಲೆಗೆ ತಲುಪುತ್ತಾರೆ. ಈ ವೇದಿಕೆಯಲ್ಲಿ ಮೊದಲ ಹಂತವಾಗಿ ಆಧುನಿಕ ಭಾರತದ ಸುತ್ತಿನಲ್ಲಿ ವಿನ್ಯಾಸಗೊಳಿಸಿದ ವಸ್ತ್ರಗಳನ್ನ ತೊಟ್ಟು ಪ್ರದರ್ಶನದಲ್ಲಿ ಭಾಗವಹಿಸಿದರು. ನಂತ್ರ ಎಫ್ಬಿಬಿ ಪ್ರಾಯೋಜಿತ ಭಾರತೀಯ ಕಲೆಕ್ಷನ್ ಡ್ರೆಸ್ಗಳಲ್ಲಿ ಸ್ಪರ್ಧೆಯಲ್ಲಿ ತೊಡಗಿಸಿಕೊಂಡು ಪೈಪೋಟಿಗಿಳಿಯುವುದಾಗಿತ್ತು.
ಅಂತಿಮವಾಗಿ ನಿಗದಿತ ಕಲೆಕ್ಷನ್ನಲ್ಲಿ ಹೆಜ್ಜೆ ಹಾಕಿ ಗೆಲುವು ಸಾಧಿಸಲು ಹೆಜ್ಜೆ ಹಾಕಬೇಕು ಈ ಮೂರು ಹಂತಗಳನ್ನ ದಾಟಿ ಐವರು ಅಂತಿಮವಾಗಿ ಆಯ್ಕೆಯಾಗುವ ಮೂಲಕ ಫೈನಲ್ ಸುತ್ತಿಗೆ ಆಯ್ಕೆಯಾಗಿದ್ದಾರೆ. ಕಾರ್ಯಕ್ರಮದ ತೀರ್ಪುಗಾರರಾಗಿ ಚಿತ್ರನಟಿ ಪ್ರಣೀತಾ ಸುಭಾಶ್, ನಿರ್ಮಾಪಕ ಇಂದ್ರಜಿತ್ ಲಂಕೇಶ್, ನಟ ರಘು ಮುಖರ್ಜಿ, ಕಿರುತೆರೆ ನಟ ರಿಶಿ ಭಾಗವಹಿಸಿದ್ದರು.