ಇಸ್ಲಾಮಾಬಾದ್: ಹಣಕಾಸು ಕ್ರಿಯಾ ಕಾರ್ಯಪಡೆಗೆ (ಎಫ್‌ಎಟಿಎಫ್) ಸಂಬಂಧಿಸಿದ ಶಾಸನವು ಗ್ರೇ ಲಿಸ್ಟಿನಿಂದ ಯಿಂದ ಬಿಳಿ ಲಿಸ್ಟಿಗೆ ಸೇರಲಿದೆ ಎಂದು ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಷಿ ಹೇಳಿದರು.
ಎಫ್ಎಟಿಎಫ್ ಗೆ ಶಾಸನದ ಕುರಿತು ಸಂಸತ್ತಿನಲ್ಲಿ ನಡೆದ ಚರ್ಚೆ ವೇಳೆ ಈ ಕುರಿತು ಖುರೇಷಿ ಮಾತನಾಡಿದರು.
ಡಾನ್ ವರದಿಯ ಪ್ರಕಾರ, ಪಾಕಿಸ್ತಾನ ಸರ್ಕಾರವು ಎರಡು ಹಣಕಾಸು ಕ್ರಿಯಾ ಕಾರ್ಯಪಡೆಗೆ(ಎಫ್‌ಎಟಿಎಫ್) ಸಂಬಂಧಿತ ಮಸೂದೆಗಳನ್ನು ಸಂಸತ್ನಲ್ಲಿ ಪ್ರತಿಪಕ್ಷಗಳ ಪ್ರತಿಭಟನೆಯ ನಡೆವೆಯೇ ಅಂಗೀಕರಿಸಿತ್ತು ಎನ್ನಲಾಗುತ್ತಿದೆ.
ಪಾಕಿಸ್ತಾನವು ಭಯೋತ್ಪಾದನೆ ನಿಯಂತ್ರಣ, ಭಯೋತ್ಪಾದಕ ಸ್ಥಳಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ಕಳೆದು ತಿಂಗಳು ಭಾರತ ಪಾಕಿಸ್ತಾನವು ಹಣಕಾಸಿನ ಕ್ರಿಯಾ ಕಾರ್ಯಪಡೆಯನ್ನು ಗ್ರೇ ಲಿಸ್ಟ್ ನಲ್ಲಿ ಮುಂದುವರೆಸುವಂತೆ ಪ್ರತಿಪಾದನೆ ಮಾಡಿತ್ತು.
ಗ್ರೇ ಲಿಸ್ಟ್ನಲ್ಲೇ ಪಾಕ್ ಮುಂದುವರಿದಿದೆ: ಭಾರತ ಪ್ರತಿಪಾದನೆ
ಪಾಕಿಸ್ತಾನದ ಬಗ್ಗೆ ಎಫ್‌ಎಟಿಎಫ್‌ನ ಗ್ರೇ ಲಿಸ್ಟ್ ನಲ್ಲಿ ಮುಂದುವರೆದಿದೆ. ಇದು ಇನ್ನೂ ತನ್ನ ಎಫ್‌ಎಟಿಎಫ್ ಕ್ರಿಯಾ ಯೋಜನೆಯಲ್ಲಿ 27 ಅಂಶಗಳ ಪೈಕಿ 13 ಅಂಶಗಳ ಬಗ್ಗೆ ಯಾವುದೇ ಕ್ರಮ ಕೈಗೊಂಡ ಮಾಹಿತಿ ನೀಡಿಲ್ಲ ಇಲ್ಲವೇ ವಿಫಲವಾಗಿದೆ. ಬಹಳ ಹಿಂದೆಯೇ ತನ್ನ ಈ ಸಂಬಂಧ ವಿಧಿಸಿದ ಡೆಡ್ಲೈನ್ ಅನ್ನು ಪೂರ್ಣಗೊಳಿಸಬೇಕಿತ್ತು. ಆದರೆ ಹಾಗಾಗಿಲ್ಲ ಎಂದು ಎಂಇಎ ವಕ್ತಾರ ಅನುರಾಗ್ ಶ್ರೀವಾಸ್ತವ ಹೇಳಿದ್ದಾರೆ.
ಪಾಕಿಸ್ತಾನದ ಮುಂದುವರಿದ ಗ್ರೀಲಿಸ್ಟಿಂಗ್ ದೇಶದಲ್ಲಿ ಭಯೋತ್ಪಾದಕ ಹಣಕಾಸು ಮತ್ತು ಸುರಕ್ಷಿತ ತಾಣಗಳ ವಿರುದ್ಧ ಪಾಕಿಸ್ತಾನ ಯಾವುದೇ ಸೂಕ್ತ ಕ್ರಮ ಕೈಗೊಂಡಿಲ್ಲ ಎಂಬ ನಮ್ಮ ನಿಲುವನ್ನು ಸಮರ್ಥಿಸುತ್ತದೆ, ”ಎಂದು ಅವರು ಹೇಳಿದರು.
ಏನಿದು ಗ್ರೇ ಲಿಸ್ಟ್?
ಫುಟ್ಬಾಲ್ ಪಂದ್ಯಗಳಲ್ಲಿ ತಪ್ಪು ಮಾಡಿದ ಆಟಗಾರಿಗೆ ಹೇಗೆ ಹಳದಿ ಕಾರ್ಡ್ ನೀಡಿ ಎಚ್ಚರಿಕೆ ನೀಡುತ್ತಾರೋ ಅದೇ ರೀತಿಯಾಗಿ ರಾಷ್ಟ್ರವೊಂದಕ್ಕೆ ಮೊದಲ ಎಚ್ಚರಿಕೆ ನೀಡಲು ಈ ಪಟ್ಟಿಗೆ ಸೇರಿಸಲಾಗುತ್ತದೆ. ಗ್ರೇ ಪಟ್ಟಿಗೆ ಒಂದು ದೇಶ ಸೇರಿದರೆ ಅದಕ್ಕೆ ಹಲವು ಸಮಸ್ಯೆಗಳಾಗುತ್ತದೆ. ವಿವಿಧ ಹಣಕಾಸು ಸಂಸ್ಥೆಗಳು(ಐಎಂಎಫ್, ವಿಶ್ವಬ್ಯಾಂಕ್) ಸಾಲ ನೀಡಲು ಹಿಂದೇಟು ಹಾಕಬಹುದು. ಆರ್ಥಿಕ ನಿರ್ಬಂಧ ಹೇರಬಹುದು. ರಾಷ್ಟ್ರಗಳು ವ್ಯಾಪಾರವನ್ನು ಕಡಿತಗೊಳಿಸಬಹುದು. ರೇಟಿಂಗ್ ಏಜೆನ್ಸಿಗಳು ದೇಶಕ್ಕೆ ಕಡಿಮೆ ರೇಟಿಂಗ್ ಕೊಡಹುದು.
ಏನಿದು ಬಿಳಿ ಪಟ್ಟಿ: ಐಎಂಎಫ್, ವಿಶ್ವಬ್ಯಾಂಕ್ ರೂಪಿಸಿರುವ ಮಾನದಂಡಗಳಿಗೆ ಅನುಗುಣವಾಗಿ ನಡೆದುಕೊಳ್ಳುವುದು. ಎಫ್ಎಟಿಎಫ್ ನಿಗದಿ ಪಡಿಸಿದ ಮಾನದಂಡಗಳನ್ನ ಅನುಸರಿಸುವುದೇ ಬಿಳಿ ಪಟ್ಟಿಯಾಗಿದೆ.
ಅಷ್ಟಕ್ಕೂ ಏನಿದು ಕಪ್ಪು ಪಟ್ಟಿ?
ಎಫ್‍ಎಟಿಎಫ್ ನಿಗದಿ ಪಡಿಸಿದ ಮಾನದಂಡಕ್ಕೆ ಅನುಗುಣವಾಗಿ ಕೆಲಸ ಮಾಡದೇ ಇದ್ದರೆ ಗ್ರೇ ಪಟ್ಟಿಯಲ್ಲಿರುವ ದೇಶವನ್ನು ಕಪ್ಪು ಪಟ್ಟಿಗೆ ಸೇರಿಸಲಾಗುತ್ತದೆ.