ದಾವಣಗೆರೆ: ಎಲೆ ಬಳ್ಳಿ ಬೆಳೆ ಕೈ ಕೊಟ್ಟ ಹಿನ್ನೆಲೆ ಸಾಲಬಾಧೆ ತಾಳಲಾರದೇ ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಹರಿಹರ ತಾಲೂಕಿನ ನಾಗೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಪರಮೇಶಪ್ಪ (45) ನೇಣಿಗೆ ಶರಣಾದ ರೈತ. ಎಲೆ ಬಳ್ಳಿ ತೋಟ ಕೆಲವೆಡೆ ಒಣಗಿದ ಹಿನ್ನೆಲೆಯಲ್ಲಿ ಸರಿಯಾದ ಬೆಳೆ ಬಂದಿಲ್ಲ. ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ 2-3 ಲಕ್ಷ ರೂ. ಸಾಲ ಮಾಡಿದ್ದರು ಎಂದು ಹೇಳಲಾಗಿದೆ. ಸಾಲ ತೀರಿಸಲು ಕಷ್ಟವಾಗಿದ್ದ ಕಾರಣ ಮನನೊಂದು ತೋಟದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಹರಿಹರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.