ಕುಷ್ಟಗಿ(ಕೊಪ್ಪಳ): ಕೋವಿಡ್ ನೆಗೆಟಿವ್ ಬಂದ್ರೂ ನಿರ್ಲಕ್ಷ್ಯ ಮಾಡದಿರಿ. ಮನೆಯಲ್ಲಿ ಇದ್ದು ವೈದ್ಯರ ಸಲಹೆ ಪಾಲಿಸಿ ಎಂದು ಕುಷ್ಟಗಿ ತಾಲೂಕು ವೈದ್ಯಾಧಿಕಾರಿ ಡಾ. ಆನಂದ ಗೋಟೂರು ಹೇಳಿದರು.
ಕುಷ್ಟಗಿ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಈಟಿವಿ ಭಾರತದ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ಕೋವಿಡ್ ಪಾಸಿಟಿವ್ ಇದ್ದ ಮನೆಯ ಕುಟುಂಬದ ಸದಸ್ಯರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರಾಗಿದ್ದರೆ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಬೇಕು. ನೆಗೆಟಿವ್ ಬಂದರೂ 7 ದಿನ ಸ್ವಯಂ ಪ್ರೇರಿತರಾಗಿ ಹೋಂ ಕ್ವಾರಂಟೈನ್ ಆಗಬೇಕು. ಮತ್ತೊಮ್ಮೆ ಕೋವಿಡ್ ಟೆಸ್ಟ್ ಮಾಡಿಸಿ ಆಗಲೂ ನೆಗೆಟಿವ್ ಬಂದರೆ ಹೊರಗೆ ತಿರುಗಾಡಬಹುದು ಎಂದರು.
ಕುಷ್ಟಗಿ ತಾಲೂಕಿನಲ್ಲಿ ಕೊರೊನಾ ಪ್ರಕರಣ ದಿನೇ ದಿನೆ ಹೆಚ್ಚುತ್ತಿವೆ. ತಾಲೂಕಿನಲ್ಲಿ ಇದುವರೆಗೂ 367 ಪ್ರಕರಣಗಳಾಗಿವೆ. 13 ಮಂದಿ ಕುಷ್ಟಗಿ ಕೋವಿಡ್ ಕೇರ್ ಸೆಂಟರ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದ ಅವರು, ಕುಷ್ಟಗಿ ತಾಲೂಕಿನಲ್ಲಿ ಕೊರೊನಾ ಪ್ರಕರಣ ನಿಯಂತ್ರಣದಲ್ಲಿಡಲು ಸಾದ್ಯವಿದೆ ಎಂದರು.