ETV Bharat / briefs

ಸಾಫ್ಟ್ವೇರ್‌ ಸಂಬಳ ಬಿಟ್ಟು ಸ್ಯಾನಿಟರಿ ಪ್ಯಾಡ್​ ತಯಾರಿಕೆ! 1 ರೂಗೆ ಮಹಿಳೆಯರಿಗೆ ಮಾರಾಟ!

ಸಾಫ್ಟ್‌ವೇರ್​ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೋರ್ವ ಇದೀಗ ಮಹಿಳೆಯರಿಗಾಗಿ ಸ್ಯಾನಿಟರಿ ಪ್ಯಾಡ್‌ ತಯಾರು ಮಾಡುತ್ತಿದ್ದು, ಕೇವಲ 1ರೂಗೆ ಮಾರಾಟ ಮಾಡುತ್ತಿದ್ದಾರೆ.

ಅನಿಶ್​ ಶರ್ಮಾ
author img

By

Published : May 28, 2019, 11:27 AM IST

Updated : May 28, 2019, 12:00 PM IST

ನವದೆಹಲಿ: 21 ನೇ ಶತಮಾನದ ಈ ದಿನಮಾನಗಳಲ್ಲೂ ವೈಯಕ್ತಿಕ ಶುಚಿತ್ವದ ವಿಚಾರದಲ್ಲಿ ಮಹಿಳೆಯರಲ್ಲಿ ಕೀಳರಿಮೆ ಹೋಗಿಲ್ಲ. ಈ ನಿಟ್ಟಿನಲ್ಲಿ ವ್ಯಕ್ತಿಯೊಬ್ಬರು ಮಾಡುತ್ತಿರುವ ಸಮಾಜ ಸೇವೆ ಎಲ್ಲರ ಗಮನ ಸೆಳೆಯುತ್ತಿದೆ.

ದೆಹಲಿ ನಿವಾಸಿ ಅನಿಶ್​ ಶರ್ಮಾ, ಕೈತುಂಬಾ ಸಂಬಳ ಬರುತ್ತಿದ್ದ ಸಾಫ್ಟ್‌ವೇರ್​ ಕಂಪನಿಯಲ್ಲಿನ ನೌಕರಿ ಬಿಟ್ಟು, ಮಹಿಳೆಯರ ಶ್ರೇಯೋಭಿವೃದ್ದಿಗೆ ದುಡಿಯುತ್ತಿದ್ದಾರೆ. ಆರಂಭದಲ್ಲಿ ಕಡಿಮೆ ವೆಚ್ಚದಲ್ಲಿ ಸ್ಯಾನಿಟರಿ ಪ್ಯಾಡ್​ ಸಿದ್ಧಗೊಳಿಸಲು ಮುಂದಾದ ಅವರು, ನಿರಂತರ ಸಂಶೋಧನೆಯಿಂದ ಶುಗರ್​ ಕೇನ್​ ಸಹಾಯದಿಂದ ಕೇವಲ ಒಂದು ರೂಗೆ ಲಭ್ಯವಾಗುವ ರೀತಿಯಲ್ಲಿ ಇವುಗಳನ್ನ ಸಿದ್ಧಪಡಿಸಿ ಮಹಿಳೆಯರಿಗೆ ನೀಡುತ್ತಿದ್ದಾರೆ.

ಅನಿಶ್​ ಶರ್ಮಾ

2018ರಲ್ಲಿ ಅಕ್ಷಯ್ ಕುಮಾರ್ ನಟನೆಯ 'ಪ್ಯಾಡ್​ ಮ್ಯಾನ್'​ ಚಿತ್ರ ರಿಲೀಸ್​ ಆದ ಮೇಲೆ ಮತ್ತಷ್ಟು ಪ್ರೇರಣೆಗೊಂಡು ಕೇವಲ 1 ರೂಗೆ ಸ್ಯಾನಿಟರಿ ಪ್ಯಾಡ್​ ನೀಡುತ್ತಿದ್ದು, ಗ್ರಾಮದ ಸುತ್ತಮುತ್ತ ವಾಸವಾಗಿರುವ ನೂರಾರು ಮಹಿಳೆಯರು ಶರ್ಮಾ ಬಳಿ ಬಂದು ಪ್ಯಾಡ್​ ತೆಗೆದುಕೊಂಡು ಹೋಗುತ್ತಾರೆ. ಸಮಾಜಮುಖಿ ಕಾರ್ಯ ಮಾಡುತ್ತಿರುವ ಅನಿಶ್ ಶರ್ಮಾ ಅವರನ್ನು ನಟ ಅಕ್ಷಯ್ ಕುಮಾರ್​ ಪ್ರಶಂಸಿಸಿ ಸನ್ಮಾನಿಸಿದ್ದಾರೆ.

ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಅನಿಶ್​, ದೇಶಕ್ಕೆ ಸ್ವತಂತ್ರ ಸಿಕ್ಕು 70 ವರ್ಷಗಳು ಕಳೆದಿದ್ದರೂ, ಬರೋಬ್ಬರಿ 25 ಕೋಟಿ ಮಹಿಳೆಯರು ಸ್ಯಾನಿಟರಿ ಪ್ಯಾಡ್​ ಬಳಕೆ ಮಾಡ್ತಿಲ್ಲ. ಇದರಿಂದ ನನಗೆ ಶಾಕ್ ಆಗಿದ್ದು, ಇದರಿಂದಲ್ಲೇ ಪ್ರೇರಣೆಗೊಂಡು ನಾನು ಸ್ಯಾನಿಟರಿ ಪ್ಯಾಡ್​ ತಯಾರಿಸಲು ಮುಂದಾಗಿರುವೆ ಎಂದು ಹೇಳಿಕೊಂಡಿದ್ದಾರೆ. ಜತೆಗೆ ಕೇಂದ್ರ ಸರ್ಕಾರಕ್ಕೆ ನಾನು ಈಗಾಗಲೇ ಇದರ ಕುರಿತು ಮಾಹಿತಿ ನೀಡಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪ್ಯಾಡ್‌ ತಯಾರಿಸಿ ದೇಶದ ಮಹಿಳೆಯರಿಗೆ ಸುಲಭ ದರದಲ್ಲಿ ಸಿಗುವಂತೆ ಮಾಡಲು ಯೋಚನೆ ಮಾಡುತ್ತಿರುವೆ ಎಂದು ತಿಳಿಸಿದ್ದಾರೆ.

Intro:Body:

ಸಾಫ್ಟ್‌ವೇರ್‌ ಸಂಬಳ ಬಿಟ್ಟು ಸ್ಯಾನಿಟರಿ ಪ್ಯಾಡ್​ ತಯಾರಿಕೆ... ಕೇವಲ 1 ರೂಗೆ ಮಹಿಳೆಯರಿಗೆ ಮಾರಾಟ!

ನವದೆಹಲಿ: ದೇಶದಲ್ಲಿ ಮಹಿಳೆಯರ ಮೇಲೆ ಒಂದಿಲ್ಲೊಂದು ರೀತಿಯಲ್ಲಿ ತಾರತಮ್ಯ ನಡೆಯುತ್ತಿದ್ದು, ಸ್ವತಂತ್ರ ಸಿಕ್ಕು 70 ವರ್ಷ ಕಳೆದು ಹೋಗಿದ್ದರೂ, ಅವರಿಗೆ ಕೆಲವೊಮ್ಮೆ ಕೀಳು ದೃಷ್ಠಿಯಿಂದ ನೋಡಲಾಗುತ್ತದೆ. 

ಇದರ ಮಧ್ಯೆ ಕೂಡ ಸಮಾಜದಲ್ಲಿ ಕೆಲವರು ಮಹಿಳೆಯರ ಶ್ರೇಯೋಭಿವೃದ್ಧಿಗೆ ದುಡಿಯುತ್ತಿದ್ದು, ಅವರ ಸಾಲಿಗೆ ದೆಹಲಿಯ ಅನಿಶ್ ಶರ್ಮಾ ಸೇರ್ಪಡೆಯಾಗುತ್ತಾರೆ. 

ದೆಹಲಿಯಲ್ಲಿ ವಾಸವಾಗಿರುವ ಅನಿಶ್​ ಶರ್ಮಾ, 2007ರಲ್ಲಿ ಲಕ್ಷಾಂತರ ರೂ. ನೀಡುತ್ತಿದ್ದ ಸಾಫ್ಟವೇರ್​ ಕಂಪನಿ ಬಿಟ್ಟು, ಮಹಿಳೆಯರ ಸಹಾಯಕ್ಕಾಗಿ ದುಡಿಯುತ್ತಿದ್ದಾರೆ. ಆರಂಭದಲ್ಲಿ ಕಡಿಮೆ ವೆಚ್ಚದಲ್ಲಿ ಸ್ಯಾನಿಟರಿ ಪ್ಯಾಡ್​ ಸಿದ್ಧಗೊಳಿಸಲು ಮುಂದಾದ ಅನಿಶ್​ ಶರ್ಮಾ, ನಿರಂತರ ಸಂಶೋಧನೆಯಿಂದ ಶುಗರ್​ ಕೇನ್​ ಸಹಾಯದಿಂದ ಕೇವಲ ಒಂದು ರೂಗೆ ಲಭ್ಯವಾಗುವ ರೀತಿಯಲ್ಲಿ ಇವುಗಳನ್ನ ಸಿದ್ಧಪಡಿಸಿ ಮಹಿಳೆಯರಿಗೆ ನೀಡುತ್ತಿದ್ದಾನೆ. 

2008ರಲ್ಲಿ ಅಕ್ಷಯ್ ಕುಮಾರ್ ನಟನೆಯ ಪ್ಯಾಡ್​ ಮ್ಯಾನ್​ ಚಿತ್ರ ರಿಲೀಸ್​ ಆದ ಮೇಲೆ ಮತ್ತಷ್ಟು ಪ್ರೇರಣೆಗೊಂಡು ಕೇವಲ 1 ರೂಗೆ ಸ್ಯಾನಿಟರಿ ಪ್ಯಾಡ್​ ನೀಡುತ್ತಿದ್ದು, ಗ್ರಾಮದ ಸುತ್ತಮುತ್ತ ವಾಸವಾಗಿರುವ ಸಾವಿರಾರು ಮಹಿಳೆಯರು ಪ್ರತಿದಿನ ನೂರಾರು ಮಹಿಳೆಯರು ಅವರ ಬಳಿ ಬಂದು ಪ್ಯಾಡ್​ ತೆಗೆದುಕೊಂಡು ಹೋಗುತ್ತಾರೆ. ಇನ್ನು ಇವರ ಕಾರ್ಯಕ್ಕೆ ನಟ ಅಕ್ಷಯ್​ ಕುಮಾರ್​ ಇವರನ್ನ ಸನ್ಮಾನಿಸಿದ್ದಾರೆ. 

ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿರುವ  ಅನಿಶ್​, ದೇಶಕ್ಕೆ ಸ್ವತಂತ್ರ ಸಿಕ್ಕು 70 ವರ್ಷಗಳು ಕಳೆದಿದ್ದರೂ, ಬರೋಬ್ಬರಿ 25 ಕೋಟಿ ಮಹಿಳೆಯರು ಸ್ಯಾನಿಟರಿ ಪ್ಯಾಡ್​ ಬಳಕೆ ಮಾಡ್ತಿಲ್ಲ. ಇದರಿಂದ ನನಗೆ ಶಾಕ್ ಆಗಿದ್ದು, ಇದರಿಂದಲ್ಲೇ ಪ್ರೇರಣೆಗೊಂಡು ನಾನು ಸ್ಯಾನಿಟರಿ ಪ್ಯಾಡ್​ ತಯಾರಿಸಲು ಮುಂದಾಗಿರುವೆ ಎಂದು ಹೇಳಿಕೊಂಡಿದ್ದಾರೆ. ಜತೆಗೆ ಕೇಂದ್ರ ಸರ್ಕಾರಕ್ಕೆ ನಾನು ಈಗಾಗಲೇ ಇದರ ಕುರಿತು ಮಾಹಿತಿ ನೀಡಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಇದರ ತಯಾರಿಕೆ ಮಾಡಿ ದೇಶದ ಮಹಿಳೆಯರಿಗೆ ಸುಲಭ ದರದಲ್ಲಿ ಸಿಗುವಂತೆ ಮಾಡಲು ಯೋಚನೆ ಮಾಡುತ್ತಿರುವೆ ಎಂದು ತಿಳಿಸಿದ್ದಾರೆ.

Conclusion:
Last Updated : May 28, 2019, 12:00 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.