ನವದೆಹಲಿ: ವಿಶ್ವಕಪ್ ತಂಡಕ್ಕೆ ವಿಕೆಟ್ ಕೀಪಿಂಗ್‌ನ ಆಧರಿಸಿ ಯುವ ವಿಕೆಟ್ ಕೀಪರ್ ರಿಷಭ್ ಪಂತ್ ಬದಲಾಗಿ ಕಾರ್ತಿಕ್ಗೆ ಅವಕಾಶ ನೀಡಲಾಗಿದೆ. ಆದರೆ, ರಿಷಭ್ ಪಂತ್ ಮಾತ್ರ ಐಪಿಎಲ್ ಇತಿಹಾಸದಲ್ಲೇ ಅತಿ ಹೆಚ್ಚು ಬಲಿ ಪಡೆದ ವಿಕೆಟ್ ಕೀಪರ್ ಎಂಬ ದಾಖಲೆ ಬರೆದಿದ್ದಾರೆ.
ರಿಷಭ್ ಪಂತ್ ನಿನ್ನೆ ನಡೆದ ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ಗುರುಕಿರಾತ್ಮನ್ ಅವರ ಕ್ಯಾಚ್ ಪಡೆಯುವ ಮೂಲಕ 2019ರ ಐಪಿಎಲ್ನಲ್ಲಿ 20 ಬಲಿ ಪಡೆದು ದಾಖಲೆ ನಿರ್ಮಿಸಿದರು. ಪಂತ್ಗೂ ಮುನ್ನ 2011ರಲ್ಲಿ ಡೆಕ್ಕನ್ ಚಾರ್ಜಸ್ ತಂಡದ ವಿಕೆಟ್ ಕೀಪರ್ ಕುಮಾರ್ ಸಂಗಾಕ್ಕರ 19 ಬ್ಯಾಟ್ಸ್ಮನ್ಗಳನ್ನು ಔಟ್ ಮಾಡಿದ್ದರು.
-
Beast mode 🔛@RishabPant777 has been in super form with the gloves this season!
— Delhi Capitals (@DelhiCapitals) April 29, 2019 " class="align-text-top noRightClick twitterSection" data="
P.S. Add to that some fun stump mic conversations as well! ♥ #ThisIsNewDelhi #DelhiCapitals pic.twitter.com/dNbwCSDp2C
">Beast mode 🔛@RishabPant777 has been in super form with the gloves this season!
— Delhi Capitals (@DelhiCapitals) April 29, 2019
P.S. Add to that some fun stump mic conversations as well! ♥ #ThisIsNewDelhi #DelhiCapitals pic.twitter.com/dNbwCSDp2CBeast mode 🔛@RishabPant777 has been in super form with the gloves this season!
— Delhi Capitals (@DelhiCapitals) April 29, 2019
P.S. Add to that some fun stump mic conversations as well! ♥ #ThisIsNewDelhi #DelhiCapitals pic.twitter.com/dNbwCSDp2C
ಪಂತ್ ಕೇವಲ ಐಪಿಎಲ್ನಲ್ಲಿ ಮಾತ್ರವಲ್ಲದೆ ವಿಶ್ವದ ಟಿ20 ಟೂರ್ನಿಗಳಲ್ಲೇ ಒಂದೇ ಸೀಸನ್ನಲ್ಲಿ ಅತೀ ಹೆಚ್ಚು ಬಲಿ ಪಡೆದ ವಿಕೆಟ್ ಕೀಪರ್ ಎಂಬ ದಾಖಲೆಗೂ ಪಾತ್ರರಾದರು.
ಪಂತ್ ಈ ಸೀಸನ್ನಲ್ಲಿ ಕೇವಲ 11 ಪಂದ್ಯಗಳಲ್ಲಿ 15 ಕ್ಯಾಚ್ 5 ಸ್ಟಂಪ್ ಔಟ್ ಮಾಡಿ 20 ಬಲಿ ಪಡೆದಿದ್ದಾರೆ. ಬ್ಯಾಟಿಂಗ್ನಲ್ಲಿ ಒಂದೆರಡು ಪಂದ್ಯವನ್ನು ತನ್ನ ಸ್ಫೋಟಕ ಬ್ಯಾಟಿಂಗ್ ನಡೆಸಿ ಗೆಲ್ಲಿಸಿದ್ದು ಬಿಟ್ಟರೆ ಉಳಿದ ಪಂದ್ಯಗಳಲ್ಲಿ ಅಷ್ಟೇನು ಉತ್ತಮ ಪದರ್ಶನ ತೋರಿಲ್ಲ. ಆದರೆ, ವಿಕೆಟ್ ಕೀಪಿಂಗ್ನಲ್ಲಿ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಮಿಂಚಿನ ವೇಗದಲ್ಲಿ ಸ್ಟಂಪಿಂಗ್ಸ್ ಹಾಗೂ ಡೈವ್ ಮೂಲಕ ಅಸಾಧ್ಯವಾದ ಕೆಲವು ಕ್ಯಾಚ್ಗಳನ್ನು ಪಡೆಯುವ ಮೂಲಕ ಧೋನಿ, ಸಂಗಾಕ್ಕರ, ಗಿಲ್ಕ್ರಿಸ್ಟ್ರಂತಹ ಅನುಭವಿಗಳ ದಾಖಲೆಯನ್ನೂ ಮೀರಿಸಿದ್ದಾರೆ. ಇನ್ನೂ ಲೀಗ್ ಹಾಗೂ ಪ್ಲೇಆಫ್ ಪಂದ್ಯಗಳಿರುವುದರಿಂದ ಪಂತ್ ದಾಖಲೆ ಮತ್ತಷ್ಟು ಬಲಿಷ್ಠವಾಗಲಿದೆ.