ಬೆಳಗಾವಿ: ಜಿಲ್ಲೆಯನ್ನು ಮತ್ತೊಂದು ವಾರ ಲಾಕ್‍ಡೌನ್ ಮುಂದುವರಿಕೆ ಸೇರಿದಂತೆ ಕೃಷಿ ಚಟುವಟಿಕೆ, ಆಟೋಮೊಬೈಲ್ ವಲಯ, ಕಟ್ಟಡ ನಿರ್ಮಾಣ ಕಾಮಗಾರಿಗಳ ಸಲುವಾಗಿ ಅಗತ್ಯ ವಸ್ತುಗಳ ಮಳಿಗೆಗಳ ತೆರೆಯಲು ಅವಕಾಶಕ್ಕೆ ನೀಡುವಂತೆ ಮನವಿ ಮಾಡಿಕೊಳ್ಳಲಾಗಿದೆ ಎಂದು ಡಿಸಿಎಂ ಗೋವಿಂದ್ ಕಾರಜೋಳ ಹೇಳಿದ್ದಾರೆ.
ಎಂಟು ಜಿಲ್ಲೆಗಳ ಡಿಸಿಗಳ ಜೊತೆ ಸಿಎಂ ವಿಡಿಯೋ ಕಾನ್ಫರೆನ್ಸ್ ಮುಕ್ತಾಯದ ಬಳಿಕ ಮಾತನಾಡಿದ ಡಿಸಿಎಂ, ಸಿಎಂ 8 ಜಿಲ್ಲೆಗಳ ಪಾಸಿಟಿವಿಟಿ ರೇಟ್ ಗುರುತಿಸಿ ಸಭೆ ಮಾಡಿದ್ರು. ಸಭೆಯಲ್ಲಿ ಎಲ್ಲ ಮಾಹಿತಿ ಪಡೆದು ಕೆಲವು ಸಲಹೆಯನ್ನ ಸಿಎಂ ಪಡೆದಿದ್ದಾರೆ. ಬೆಳಗಾವಿಯಲ್ಲಿ ಇನ್ನೂ ಒಂದು ವಾರ ಲಾಕ್‍ಡೌನ್ ಮುಂದುವರಿಸಲು ಮನವಿ ಮಾಡಿದ್ದೇವೆ. ಅದರಂತೆ ಕೃಷಿ ಚಟುವಟಿಕೆ, ಆಟೋಮೊಬೈಲ್ ವಲಯ, ಕಟ್ಟಡ ನಿರ್ಮಾಣ ಕಾಮಗಾರಿಗೆ ಅಗತ್ಯ ವಸ್ತುಗಳ ಮಳಿಗೆಗಳ ತೆರೆಯಲು ಅವಕಾಶಕ್ಕೆ ನೀಡವಂತೆ ಕೇಳಲಾಗಿದೆ. ಅದಕ್ಕೆ ಸಿಎಂ ಸಂಜೆ 6.30ಕ್ಕೆ ತಜ್ಞರ ಜೊತೆ ಸಭೆ ಮಾಡಿ ಯಾವುದಕ್ಕೆ ಸಡಿಲಿಕೆ ಕೊಡಬೇಕು ಅಂತಾ ಕೇಳ್ತಿವಿ ಅಂದಿದ್ದಾರೆ ಎಂದು ತಿಳಿಸಿದರು.
ಆರ್ಟಿಪಿಸಿಆರ್ ಟೆಸ್ಟಿಂಗ್ ರೇಟ್ ಬಗ್ಗೆ ಡಿಸಿಎಂ ಅಶ್ವತ್ಥ್ ನಾರಾಯಣ ಅಸಮಾಧಾನ ವಿಚಾರಕ್ಕೆ, ಬೆಳಗಾವಿ ಜಿಲ್ಲೆಯಲ್ಲಿ ಬೆಂಗಳೂರಿನಲ್ಲಿ ಇರುವಷ್ಟು ಸೌಲಭ್ಯ ಇಲ್ಲ. ಆದ್ರೆ, ಇನ್ನೆರಡು ದಿನಗಳಲ್ಲಿ ಚಿಕ್ಕೋಡಿಯಲ್ಲಿ ಕೋವಿಡ್ ಟೆಸ್ಟ್ ಲ್ಯಾಬ್ ಕಾರ್ಯಾರಂಭವಾಗಲಿದೆ ಎಂದರು.