ವಾಷಿಂಗ್ಟನ್: ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಅಗ್ರಪಂಕ್ತಿಯಲ್ಲಿ ಕಾಣಿಸಿಕೊಳ್ಳುವ ಬಿಲ್ ಗೇಟ್ಸ್ ಹಾಗೂ ವಾರನ್ ಬಫೆಟ್ ಆಗಾಗ್ಗೆ ಎಲ್ಲರ ಜೊತೆಗೆ ಬೆರೆತು ಎಲ್ಲರ ಮೆಚ್ಚುಗೆಗೆ ಪಾತ್ರರಾಗುತ್ತಾರೆ.
ಸದ್ಯ ಇಂತಹುದೇ 'ಸಿಂಪಲ್' ವಿಚಾರಕ್ಕೆ ದಿಗ್ಗಜ ಶ್ರೀಮಂತರಿಬ್ಬರು ಮತ್ತೆ ಸುದ್ದಿಯಾಗಿದ್ದಾರೆ. ಕೆಲ ದಿನಗಳ ಹಿಂದೆ ಡೈರಿ ಕ್ವೀನ್ ಎನ್ನುವ ಐಸ್ಕ್ರೀಂ ಪಾರ್ಲರ್ಗೆ ತೆರಳಿ ಗ್ರಾಹಕರಿಗೆ ಐಸ್ಕ್ರೀಂ ವಿತರಿಸಿ ಖುಷಿಪಟ್ಟಿದ್ದಾರೆ.
ಗ್ರಾಹಕರ ಆರ್ಡರ್ಗೆ ತಕ್ಕಂತೆ ಈ ಇಬ್ಬರೂ ದಿಗ್ಗಜರು ವಿವಿಧ ತೆರನಾದ ಐಸ್ಕ್ರೀಂ ಅನ್ನು ಸರ್ವ್ ಮಾಡಿದ್ದಾರೆ. ಗ್ರಾಹಕರೂ ಸಹ ದಿಗ್ಗಜರಿಂದ ಸರ್ವ್ ಮಾಡಿಸಿಕೊಂಡು ಅಚ್ಚರಿಯ ಜೊತೆಗೆ ಖುಷಿಪಟ್ಟಿದ್ದಾರೆ.
-
Warren and I recently picked up a @DairyQueen shift. I think I may have been a quicker study in the Blizzard department, but watch the video below and judge for yourself: https://t.co/BJc1nV4kpa pic.twitter.com/J1NgS0EbfE
— Bill Gates (@BillGates) June 4, 2019 " class="align-text-top noRightClick twitterSection" data="
">Warren and I recently picked up a @DairyQueen shift. I think I may have been a quicker study in the Blizzard department, but watch the video below and judge for yourself: https://t.co/BJc1nV4kpa pic.twitter.com/J1NgS0EbfE
— Bill Gates (@BillGates) June 4, 2019Warren and I recently picked up a @DairyQueen shift. I think I may have been a quicker study in the Blizzard department, but watch the video below and judge for yourself: https://t.co/BJc1nV4kpa pic.twitter.com/J1NgS0EbfE
— Bill Gates (@BillGates) June 4, 2019
ಐಸ್ಕ್ರೀಂ ಪಾರ್ಲರ್ ವಿತರಣೆ ವಿಡಿಯೋವನ್ನು ಸ್ವತಃ ಬಿಲ್ಗೇಟ್ಸ್ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಶ್ರೀಮಂತರ ಈ ಸಾಮಾನ್ಯ ನಡೆಯನ್ನು ಇಂಟರ್ನೆಟ್ ಮಂದಿ ನೋಡಿ ಖುಷಿಪಟ್ಟಿದ್ದಾರೆ. ಜೊತೆಗೆ ಸಾಕಷ್ಟು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ವಿಶೇಷವೆಂದರೆ 1998ರಲ್ಲಿ ಡೈರಿ ಕ್ವೀನ್ ಐಸ್ಕ್ರೀಂ ಪಾರ್ಲರ್ ವಾರನ್ ಬಫೆಟ್ ಒಡೆತನದಲ್ಲಿತ್ತು.