ಶಿವಮೊಗ್ಗ: ಕೊರೊನಾ ಸ್ವಾಭಿಮಾನಿ ಕಾಯಿಲೆ ಎಂದು ಕಾಗಿನೆಲೆಯ ಕನಕ ಗುರುಪೀಠದ ನಿರಂಜನಾನಂದ ಪುರಿ ಸ್ವಾಮೀಜಿ ಹೇಳಿದ್ದಾರೆ. ಇದೇ ವೇಳೆ ಕೊರೊನಾದ ಬಗ್ಗೆ ಅವರು ಜಾಗೃತಿ ಮೂಡಿಸಿದ್ದಾರೆ.
ಇಂದು ಸಚಿವ ಈಶ್ವರಪ್ಪನವರ 73 ನೇ ವರ್ಷದ ಹುಟ್ಟು ಹಬ್ಬದ ನಿಮಿತ್ತ ಕೆರೆ ಪುನಶ್ಚೇತನ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಕೊರೊನಾ ಇತರ ಕಾಯಿಲೆ ಅಂತ ಅಲ್ಲ. ಇದು ಅತ್ಯಂತ ಸ್ವಾಭಿಮಾನಿ ಕಾಯಿಲೆಯಾಗಿದ್ದು, ನೀವು ಕೊರೊನಾದ ಬಳಿ ಹೋಗುವ ತನಕ ಅದು ನಿಮ್ಮ ಬಳಿ ಬರೋದಿಲ್ಲ ಎಂದಿದ್ದಾರೆ.
ನೀವು ಹೋಗಿ ಬೇರೆಯವರ ಹತ್ತಿರ ಅಂಟಿಸಿಕೊಂಡು ಬರುವ ತನಕ ಅದು ನಿಮ್ಮ ಬಳಿ ಬರುವುದಿಲ್ಲ. ಇದರಿಂದ ಕೊರೊನಾದಿಂದ ದೂರವಿರಬೇಕು ಎಂದರೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು, ಸ್ಯಾನಿಟೈಸರ್ ಬಳಸಬೇಕು ಎಂದರು.
ಕೆಲ ಕಾಯಿಲೆಗಳು ವಾತಾವರಣ ಬದಲಾವಣೆ ಆಗುತ್ತಿದ್ದಂತೆಯೆ ನೆಗಡಿ, ಶೀತ ಬರುತ್ತದೆ. ಇದರಿಂದ ಕೊರೊನಾದಿಂದ ದೂರವಿದ್ದು , ಜಾಗೃತಿಯಿಂದ ಇರಿ ಎಂದು ಸಲಹೆ ನೀಡಿದರು.