ಧಾರವಾಡ: ಛಾಯಾಗ್ರಾಹಕ ತಾಜುದ್ದೀನ್ ಆಜಾದ್ ಅವರು ಕಾರ್ಯಕ್ಷಮತೆ ಹಾಗೂ ಪ್ರತಿಭೆಯನ್ನು ಮೆಚ್ಚಿ ಜಿಲ್ಲಾಧಿಕಾರಿ ದೀಪಾ ಚೋಳನ್ ಅವರು ಸೋಮವಾರ ಪ್ರಶಂಸಾಪತ್ರ ನೀಡಿ ಅಭಿನಂದಿಸಿದರು.
ಕೋವಿಡ್-19 ನಿಯಂತ್ರಣ ಕಾರ್ಯದ ಸಂದರ್ಭದಲ್ಲಿ ಕಳೆದ ಮೇ 13ರಂದು ಹುಬ್ಬಳ್ಳಿಯಿಂದ ರಾಜಸ್ಥಾನಕ್ಕೆ ತೆರಳಿದ ಶ್ರಮಿಕ ಎಕ್ಸ್‌ಪ್ರೆಸ್ ವಿಶೇಷ ರೈಲಿನ ವಿಶಿಷ್ಟ ಛಾಯಾಚಿತ್ರವೊಂದನ್ನು ಹುಬ್ಬಳ್ಳಿಯ ಪತ್ರಿಕೆಯೊಂದರ (ಪ್ರಜಾವಾಣಿ – ಡೆಕ್ಕನ್ ಹೆರಾಲ್ಡ್) ಪತ್ರಿಕಾ ಛಾಯಾಗ್ರಾಹಕ ತಾಜುದ್ದೀನ್ ಆಜಾದ್ ಸೆರೆ ಹಿಡಿದಿದ್ದರು.
ಈ ಫೋಟೋವನ್ನು ಮೆಚ್ಚಿಕೊಂಡು ಕೇಂದ್ರ ರೇಲ್ವೆ ಸಚಿವರಾದ ಪಿಯುಷ್ ಗೊಯೆಲ್ ಅವರು ಟ್ವೀಟ್ ಮಾಡಿದ್ದರು. ಕೇಂದ್ರ ಗಣಿ, ಕಲ್ಲಿದ್ದಲು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ, ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ ಶೆಟ್ಟರ್ ಸೇರಿದಂತೆ ಮತ್ತಿತರ ಗಣ್ಯರು ಮುಕ್ತ ಕಂಠದಿಂದ ಶ್ಲಾಘನೆ ಮಾಡಿದ್ದರು.
ಸಧ್ಯ ತಾಜುದ್ದೀನ್ ಆಜಾದ್ ಅವರು ಕಾರ್ಯಕ್ಷಮತೆ ಹಾಗೂ ಪ್ರತಿಭೆಯನ್ನು ಮೆಚ್ಚಿ ಜಿಲ್ಲಾಧಿಕಾರಿ ದೀಪಾ ಚೋಳನ್ ಅವರು ಸೋಮವಾರ ಪ್ರಶಂಸಾಪತ್ರ ನೀಡಿ ಅಭಿನಂದಿಸಿದರು.
ಪತ್ರಿಕಾ ಛಾಯಾಗ್ರಾಹಕ ತಾಜುದ್ದೀನ್ ಆಜಾದ್‍ಗೆ ಜಿಲ್ಲಾಧಿಕಾರಿಗಳಿಂದ ಪ್ರಶಂಸಾ ಪತ್ರ - Shramika Express special rail
ಶ್ರಮಿಕ ಎಕ್ಸ್‌ಪ್ರೆಸ್ ವಿಶೇಷ ರೈಲಿನ ವಿಶಿಷ್ಟ ಛಾಯಾಚಿತ್ರವೊಂದನ್ನು ತೆಗೆದು ಹಲವಾರು ಗಣ್ಯರ ಮೆಚ್ಚುಗೆಗೆ ಪಾತ್ರರಾಗಿದ್ಧ ಛಾಯಾಗ್ರಾಹಕ ತಾಜುದ್ದೀನ್ ಆಜಾದ್ ಅವರ ಪ್ರತಿಭೆಯನ್ನು ಮೆಚ್ಚಿ ಡಿಸಿ ದೀಪಾ ಚೋಳನ್ ಪ್ರಶಂಸಾಪತ್ರ ನೀಡಿ ಅಭಿನಂದಿಸಿದರು.