ಹೈದರಾಬಾದ್: ಮತದಾನ ಮಾಡಲು ಅಮೆರಿಕದಿಂದ ಹೈದರಾಬಾದ್ಗೆ ಬಂದಿದ್ದ ಅಪೊಲೊ ಆಸ್ಪತ್ರೆ ಉಪಾಧ್ಯಕ್ಷೆ ಶೋಭನಾ ಕಾಮಿನೇನಿ ಅವರು ನಿರಾಶರಾಗಿ ವಾಪಸ್ ತೆರಳಿದ್ದಾರೆ.
ವಾರದ ಹಿಂದಷ್ಟೆ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಗುರುತಿಸಿ ಹೈದರಾಬಾದ್ನ ಮಸಾಬ್ ಟ್ಯಾಂಕ್ ಕ್ಷೇತ್ರದಲ್ಲಿ ಮತದಾನ ಮಾಡಲು ಬಂದಿದ್ದರು. ಆದರೆ, ಮತ್ತೆ ಮತದಾರರ ಪಟ್ಟಿ ಪರಿಶೀಲಿಸಿದಾಗ ಅವರ ಹೆಸರು ನಾಪತ್ತೆಯಾಗಿತ್ತು.
ಇದರಿಂದ ನೊಂದಿರುವ ಶೋಭನಾ ಅವರು ಈ ದೇಶದ ನಾಗರಿಕಳಾಗಿ ನನಗೆ ಅನ್ಯಾಯವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಕಾಮಿನೇನಿ ಅವರು ವಿಧಾನಸಭಾ ಚುನಾವಣೆಯಲ್ಲಿ ಮತದಾನ ಮಾಡಿದ್ದರು. ಆದರೆ, ಈ ಚುನಾವಣೆಯಲ್ಲಿ ತಮ್ಮ ಹೆಸರು ನಾಪತ್ತೆಯಾಗಿರು ಬಗ್ಗೆ ನೋವು ತೋಡಿಕೊಂಡಿದ್ದಾರೆ.
ತೆಲಂಗಾಣದ ಮತದಾರರ ಪಟ್ಟಿಯಲ್ಲಿ ಬಹಳಷ್ಟು ಜನರ ಹೆಸರು ನಾಪತ್ತೆಯಾಗಿದೆ.