ವಿಶಾಖಪಟ್ಟಣಂ: ಸನ್ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ನಿನ್ನೆ ವಿಶಾಖಪಟ್ಟಣಂನಲ್ಲಿ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಅಮಿತ್ ಮಿಶ್ರಾ ವಿಚಿತ್ರವಾಗಿ ವಿಕೆಟ್ ನೀಡಿದ್ದು, ಇದೀಗ ಹೆಚ್ಚು ಚರ್ಚೆಗೊಳಗಾಗಿದೆ.
-
Last over drama: Amit Mishra obstructs field https://t.co/6dsJvgO4ev via @ipl
— gujjubhai (@gujjubhai17) May 8, 2019 " class="align-text-top noRightClick twitterSection" data="
">Last over drama: Amit Mishra obstructs field https://t.co/6dsJvgO4ev via @ipl
— gujjubhai (@gujjubhai17) May 8, 2019Last over drama: Amit Mishra obstructs field https://t.co/6dsJvgO4ev via @ipl
— gujjubhai (@gujjubhai17) May 8, 2019
ಸನ್ರೈಸರ್ಸ್ ತಂಡದ ಖಲೀಲ್ ಅಹ್ಮದ್ ಎಸೆದ 20ನೇ ಓವರ್ನ ನಾಲ್ಕನೇ ಎಸೆತದಲ್ಲಿ ಈ ಘಟನೆ ನಡೆದಿದೆ. ರುದರ್ಫೋರ್ಡ್ ವಿಕೆಟ್ ಪತನವಾಗುತ್ತಿದ್ದಂತೆ ಮೈದಾನಕ್ಕೆ ಬಂದ ಅಮಿತ್ ಮಿಶ್ರಾ ಕೊನೆ ಓವರ್ನ ನಾಲ್ಕನೇ ಎಸೆತ ಮಿಸ್ ಮಾಡಿದ್ದು, ಬಾಲ್ ಕೀಪರ್ ಕೈ ಸೇರಿದೆ. ಇದರ ಮಧ್ಯೆ ರನ್ ಪಡೆದುಕೊಳ್ಳುವ ವೇಗದಲ್ಲಿ ಅಮಿತ್ ಶಾ ಕಾಲ್ಕಿತ್ತಿದ್ದಾರೆ. ಈ ವೇಳೆ ಚೆಂಡು ಬೌಲರ್ ಖಲೀಲ್ ಅಹ್ಮದ್ ಕೈ ಸೇರಿದೆ. ಅದನ್ನ ಗಮನಿಸಿದ ಅಮಿತ್ ಮಿಶ್ರಾ ನೇರವಾಗಿ ಓಡದೇ ಸ್ಟಂಪ್ಗೆ ಅಡ್ಡಿಯಾಗುವಂತೆ ಹೋಗಿದ್ದಾರೆ. ಆ ವೇಳೆ ರನೌಟ್ ಮಾಡಲು ಖಲೀಲ್ ಅಹ್ಮದ್ಗೆ ಸಾಧ್ಯವಾಗಿಲ್ಲ.
ಇದೇ ವಿಷಯವಾಗಿ ಸನ್ರೈಸರ್ಸ್ ಅಂಪೈರ್ನೊಂದಿಗೆ ಚರ್ಚೆ ನಡೆಸಿದ್ದು, ಅಂಪೈರ್ ಸತ್ಯಾಂಶ ತಿಳಿದುಕೊಳ್ಳಲು ಮೂರನೇ ಅಂಪೈರ್ ಮೊರೆ ಹೋಗಿದ್ದಾರೆ. ಅಲ್ಲಿ ನಿಜಾಂಶ ಹೊರಬಂದಿದ್ದು, ಅಮಿತ್ ಮಿಶ್ರಾ ಔಟ್ ಎಂದು ನಿರ್ಧಾರಕ್ಕೆ ಬರಲಾಗಿದೆ. ಇನ್ನು 2013ರಲ್ಲೂ ಇಂತಹ ಘಟನೆ ನಡೆದಿದ್ದು, ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆಡುತ್ತಿದ್ದ ಯೂಸೂಫ್ ಪಠಾಣ್,ಪುಣೆ ವಾರಿಯರ್ಸ್ ವಿರುದ್ಧ ಇದೇ ರೀತಿ ವಿಕೆಟ್ ಒಪ್ಪಿಸಿದ್ದರು.